RRR: ರಿಲೀಸ್‌ಗೆ ಎರಡು ದಿನಾಂಕಗಳು ನಿಗದಿ!

ಕರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದು ಸಿನಿಮಾ ಮಂದಿಗೆ ದೊಡ್ಡ ತಲೆನೋವು ಆಗಿದೆ. ಇದರಿಂದ ಸಿನಿಮಾ ಶೂಟಿಂಗ್, ಸಿನಿಮಾ ರಿಲೀಸ್, ಸಿನಿಮಾ ಕಾರ್ಯಕ್ರಮಗಳಿಗೆ ಸಾಕಷ್ಟು ತೊಂದರೆ ಆಗುತ್ತಲಿರುವುದಂತೂ ಹೌದು. ಇದೇ ಕಾರಣಕ್ಕೆ ಭಾರತೀಯ ಚಿತ್ರರಂಗದ ಬಹು ದೊಡ್ಡ ನಿರೀಕ್ಷಿತ ಚಿತ್ರ RRR ರಿಲೀಸ್‌ ಮುಂದೂಡುವುದು ಆಗಿದೆ.

ಆರ್‌ಆರ್‌ಆರ್‌ ರಿಲೀಸ್ ಮುಂದೂಡಿ ಅಭಿಮಾನಿಗಳಲ್ಲಿ, ಸಿನಿಮಾ ಪ್ರಿಯರಲ್ಲಿ ನಿರಾಸೆ ಮೂಡಿಸಿದೆ. ಆದರೆ ಕೊರೊನಾ ಹೆಚ್ಚಾದ ಕಾರಣ ಚಿತ್ರವನ್ನು ಮುಂದೂಡುವುದು ಅನಿವಾರ್ಯ ಆಗಿತ್ತು. ಇದೀಗ ಸಿನಿಮಾ ಮತ್ತೆ ಯಾವಾಗ ರಿಲೀಸ್ ಎನ್ನುವ ಬಗ್ಗೆ ಚಿತ್ರ ತಂಡ ಅಧಿಕೃತ ಮಾಹಿತಿ ನೀಡಿದೆ.

Recommended Video

RRR ಚಿತ್ರದ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರೊ ಚಿತ್ರತಂಡ

RRR ಚಿತ್ರ ತಂಡ ಚಿತ್ರದ ಮುಂದಿನ ರಿಲೀಸ್‌ ದಿನಾಂಕದ ಬಗ್ಗೆ ಮಾಹಿತಿ ನೀಡಿದೆ. ಈ ಮೂಲಕ ಸಿನಿಮಾ ಪ್ರಿಯರಲ್ಲಿ ಮೂಡಿದ್ದ ನಿರಾಸೆಗೆ ತೆರೆ ಎಳೆದಿದೆ. ಆದರೆ ಅದರಲ್ಲೂ ಕೂಡ ಚಿತ್ರ ತಂಡ ಒಂದು ಟ್ವಿಸ್ಟ್ ಇಟ್ಟಿದೆ. ಹಾಗಿದ್ದರೆ ಸಿನಿಮಾ ರಿಲೀಸ್ ಯಾವಾಗ? ಆ ಟ್ವಿಸ್ಟ್ ಏನು ಎನ್ನುವ ಬಗ್ಗೆ ಮುಂದೆ ಓದಿ....

ಎರಡು ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದ RRR!

RRR ಚಿತ್ರವನ್ನು ನೋಡಲು ಸಿನಿಮಾ ಪ್ರಿಯರು ಸಾಕಷ್ಟು ನಿರೀಕ್ಷೆಯಿಂದ ಕಾಯುತ್ತಿದ್ದಾರೆ. ಹಾಗಾಗಿಯೇ ಹೆಚ್ಚು ತಡ ಮಾಡದೇ ಚಿತ್ರ ತಂಡ ಹೊಸ ರಿಲೀಸ್ ದಿನಾಂಕವನ್ನು ಪ್ರಕಟ ಮಾಡಿದೆ. ಆದರೆ ಒಂದೇ ಬಾರಿಗೆ ಎರಡೆರಡು ರಿಲೀಸ್ ದಿನಾಂಕವನ್ನು ಪ್ರಕಟಿಸಿದೆ. ಒಂದು 2022 ಮಾರ್ಚ್ ಆದರೆ ಮತ್ತು 2022 ಏಪ್ರಿಲ್ ಆಗಿದೆ. ಹಾಗಾಗಿ ಯಾವ ದಿನಾಂಕಕ್ಕೆ ಸಿನಿಮಾ ತೆರೆಗೆ ಬರಲಿದೆ ಎನ್ನುವ ಗೊಂದಲ ಪ್ರೇಕ್ಷಕರಿಗೆ ಉಂಟಾಗಿದೆ.

ಮಾರ್ಚ್ 18 ಅಥವಾ ಏಪ್ರಿಲ್ 28ಕ್ಕೆ RRR ರಿಲೀಸ್!

ಮಾರ್ಚ್ 18 ಅಥವಾ ಏಪ್ರಿಲ್ 28ಕ್ಕೆ RRR ರಿಲೀಸ್!

ಚಿತ್ರದ ದಿನಾಂಕ ಪ್ರಕಟ ಮಾಡಿ ಪೋಸ್ಟರ್ ಒಂದನ್ನು ಚಿತ್ರ ತಂಡ ಹಂಚಿಕೊಂಡಿದೆ. ಯಾಕೆ ಎರಡು ದಿನಾಂಕವನ್ನು ಪ್ರಕಟ ಮಾಡಲಾಗಿದೆ ಎನ್ನುವುದನ್ನು ಕೂಡ ಈ ಪೋಸ್ಟ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ. "ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಿಸಿದರೆ ಮತ್ತು ಪೂರ್ಣ ಪ್ರಮಾಣದ ಆಸನ ಭರ್ತಿ ಅವಕಾಶದೊಂದಿಗೆ ಚಿತ್ರ ಮಂದಿರಗಳು ತೆರೆದರೆ, ನಾವು ಚಿತ್ರವನ್ನು 2022 ಮಾರ್ಚ್ 18ಕ್ಕೆ ರಿಲೀಸ್ ಮಾಡುತ್ತೇವೆ. ಇಲ್ಲವಾದಲ್ಲಿ RRR ಚಿತ್ರ 2022 ಏಪ್ರಿಲ್ 28ಕ್ಕೆ ರಿಲೀಸ್ ಆಗಲಿದೆ" ಎಂದು ಚಿತ್ರತಂಡ ಹೇಳಿದೆ. ಹಾಗಾಗಿ ಮಾರ್ಚ್‌ನಲ್ಲೇ ಸಿನಿಮಾ ರಿಲೀಸ್‌ ಆಗುತ್ತೇ ಎನ್ನುವುದು ಬಹುತೇಕ ಅನುಮಾನ.

KGF ಚಿತ್ರಕ್ಕೆ ತೊಂದರೆ ನೀಡಿಲಿದ್ಯಾ RRR?

KGF ಚಿತ್ರಕ್ಕೆ ತೊಂದರೆ ನೀಡಿಲಿದ್ಯಾ RRR?

ಒಂದು ವೇಳೆ RRR ಸಿನಿಮಾ ಮಾರ್ಚ್‌ನಲ್ಲಿ ತೆರೆಗೆ ಬರದೇ ಹೋದರೆ, ಏಪ್ರಿಲ್ 28ಕ್ಕೆ ರಿಲೀಸ್‌ ಆಗಲಿದೆ. ಆದರೆ ಇದರ ಪರಿಣಾಮ ಕನ್ನಡದ ಕೆಜಿಫ್ ಸಿನಿಮಾದ ಮೇಲೆ ಬೀಳುವ ಸಾಧ್ಯತೆ ಇದೆ. ಯಾಕೆಂದರೆ ಕೆಜಿಎಫ್ 2 ಏಪ್ರಿಲ್ 14ಕ್ಕೆ ರಿಲೀಸ್‌ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. RRR ಏಪ್ರಿಲ್ 28 ರಿಲೀಸ್ ಆದರೆ ಕೆಜಿಎಫ್ 2 ಚಿತ್ರಕ್ಕೆ ಕೇವಲ ಎರಡು ವಾರಗಳು ಮಾತ್ರ ಸಮಯ ಸಿಗಲಿದೆ. ಇನ್ನು ಇವೆರಡೂ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳಾಗಿರುವುದರಿಂದ ಕೊಂಚ ಮಟ್ಟಿನ ಎಫೆಕ್ಟ್ ಇದ್ದೇ ಇರುತ್ತೆ.

ಜನವರಿ 7ಕ್ಕೆ ತೆರೆಗೆ ಬರಬೇಕಿದ್ದ RRR!

ಜನವರಿ 7ಕ್ಕೆ ತೆರೆಗೆ ಬರಬೇಕಿದ್ದ RRR!

ಜನವರಿ 7ಕ್ಕೆ ರಿಲೀಸ್ ಆಗ್ಬೇಕಿತ್ತು RRR ಚಿತ್ರ. RRR ಜನವರಿಯಲ್ಲಿ ರಿಲೀಸ್ ಆಗಲಿದೆ ಎಂದು ಮಿಕ್ಕ ಹತ್ತು ಹಲವು ಚಿತ್ರಗಳು ರಿಲೀಸ್ ದಿನಾಂಕವನ್ನು ಬದಲಿಸಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದವು. ಹಾಗೆ ಜನವರಿ 7 ಚಿತ್ರ ರಿಲೀಸ್ ಆಗಿದ್ದರೆ. ಬೇರೆ ಚಿತ್ರಗಳಿಗೆ ಅಷ್ಟಾಗಿ ತೊಂದರೆ ಆಗುತ್ತಿರಲಿಲ್ಲ. ಈ ಎರಡು ದಿನಾಂಕ ಪ್ರಕಟ ಆಗಿರುವುದರಿಂದ ಬೇರೆ ಚಿತ್ರಗಳಿಗೆ ಮತ್ತೇ ರಿಲೀಸ್ ದಿನಾಂಕ ಹೊಂದಿಸುವ ತಲೆ ನೋವು ಶುರುವಾಗಿದೆ.

More from Filmibeat

English summary
RRR Got New Two Release Date: It Will Release March 18th Or April 28th,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X