ಒಲಿವಿಯಾ ಮೋರಿಸ್: RRR ಸಿನಿಮಾ ನಾಯಕಿಯ ಹಾಟ್-ಕೋಲ್ಡ್ ಚಿತ್ರಗಳು
ಆರ್‌ಆರ್‌ಆರ್ ಸಿನಿಮಾ ದೇಶದ ಸಿನಿಪ್ರೇಮಿಗಳ ಗಮನ ಸೆಳೆದಿರುವ ಸಿನಿಮಾ. ಲಾಕ್‌ಡೌನ್ ನಿಂದಾಗಿ ಚಿತ್ರೀಕರಣ ಸ್ಥಗಿತವಾಗಿದ್ದರೂ ಸಹ ಸಿನಿಮಾ ಬಗ್ಗೆ ಒಂದಲ್ಲಾ ಒಂದು ಕುತೂಹಲದ ವಿಷಯಗಳು ಹೊರಗೆ ಬರುತ್ತಲೇ ಇವೆ.
Recommended Video
ಇದೀಗ ಆರ್‌ಆರ್‌ಆರ್ ಸಿನಿಮಾದ ನಾಯಕಿ ಯಾರೆಂಬುದು ಬಹಿರಂಗವಾಗಿದ್ದು, ಸಿನಿಮಾದ ನಾಯಕನಟ ಜ್ಯು.ಎನ್‌ಟಿಆರ್ ಗೆ ನಾಯಕಿಯಾಗಿ ಒಲಿವಿಯಾ ಮೋರಿಸ್ ಆಯ್ಕೆ ಆಗಿದ್ದಾರೆ.
ಬ್ರಿಟನ್ ಚೆಲುವೆ ಒಲಿವಾ ಮೋರಿಸ್ ಹೆಚ್ಚೇನು ಸಿನಿಮಾಗಳಲ್ಲಿ ನಟಿಸದಿದ್ದರೂ ಸಹ ಮಾಡೆಲಿಂಗ್ ಮತ್ತು ಟಿವಿಗಳಲ್ಲಿ ನಟಿಸಿ ಹೆಸರು ಮಾಡಿದಾಕೆ. ಆಕೆಯ ಬಗೆಗೆ ಆಸಕ್ತಿಕರ ಮಾಹಿತಿ ಹಾಗೂ ಕೆಲವು ಚಿತ್ರಗಳು ಇಲ್ಲಿ ನಿಮಗಾಗಿ.

ಆಕೆಯೇ ಇನ್‌ಸ್ಟಾಗ್ರಾಂನಲ್ಲಿ ಸ್ಪಷ್ಟಪಡಿಸಿದ್ದಾಳೆ
ಒಲಿವಿಯಾ ಮೊರಿಸನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದಾರೆ. ಆರ್‌ಆರ್‌ಆರ್ ಸಿನಿಮಾದ ಭಾಗವಾಗುತ್ತಿರುವುದಕ್ಕೆ ಸಂತೋಷವಾಗಿದೆ. ರಾಜಮೌಳಿ, ಜ್ಯು.ಎನ್‌ಟಿಆರ್, ರಾಮ್‌ಚರಣ್ ಜೊತೆ ಕೆಲಸ ಮಾಡುವುದಕ್ಕೆ ಉತ್ಸುಕಳಾಗಿದ್ದೇನೆ ಎಂದಿದ್ದಾಳೆ ನಟಿ.

ಒಲಿವಿಯಾಗೆ ಮದುವೆಯಾಗಿದೆ
ಒಲಿವಿಯಾ ಮೋರಿಸ್ ಗೆ ಮದುವೆಯಾಗಿದೆ. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆಕೆಯ ಮದುವೆಯ ಹಾಗೂ ಗಂಡನ ಕೆಲವು ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಒಲಿವಿಯಾ ಫ್ಯಾಷನ್ ಶೋಗಳಲ್ಲಿ ಭಾಗವಹಿಸಿದ್ದಾರೆ
ಒಲಿವಿಯಾ ಹಲವು ಫ್ಯಾಷನ್ ಶೋ ಹಾಗೂ ಕಿರುಚಿತ್ರಗಳಲ್ಲಿ ಭಾಗವಹಿಸಿದ್ದಾರೆ. ಅವರು ಫ್ಯಾಷನ್ ಡಿಸೈನರ್ ಸಹ ಆಗಿದ್ದಾರೆ.

ಟಿವಿ ಸರಣಿಯಿಂದ ಬೆಳಕಿಗೆ
ಒಲಿವಿಯಾ ಮೋರಿಸ್ 'ಸೆವೆನ್ ಟ್ರೇಲ್ಸ್ ಇನ್ ಸೆವೆನ್ ಡೇಸ್' ಸಾಹಸಭರಿತ ಟಿವಿ ಸರಣಿಯಿಂದ ಬೆಳಕಿಗೆ ಬಂದರು. ಆ ಸರಣಿ ಅವರಿಗೆ ಜನಪ್ರಿಯತೆ ತಂದುಕೊಟ್ಟಿತು.


Click it and Unblock the Notifications











