For Quick Alerts
  ALLOW NOTIFICATIONS  
  For Daily Alerts

  'RRR' ಬಾಲಿವುಡ್ ಸಿನಿಮಾ ಅಲ್ಲ, ತೆಲುಗು ಸಿನಿಮಾ: ನಿಜ ಹೇಳಿದ್ದಕ್ಕೂ ರಾಜಮೌಳಿ ವಿರುದ್ಧ ಟೀಕೆ

  By ಫಿಲ್ಮಿಬೀಟ್ ಡೆಸ್ಕ್
  |

  'RRR' ಸಿನಿಮಾ ತೆಲುಗು ಸಿನಿಮಾ ಎಂಬುದು ಜಗಜ್ಜಾಹೀರು. ತೆಲುಗು ಚಿತ್ರರಂಗದಲ್ಲಿಯೇ ದಶಕಗಳಿಂದ ಕೆಲಸ ಮಾಡಿಕೊಂಡು ಬಂದಿರುವ, ತೆಲುಗು ಮಾತೃಭಾಷೆಯಾಗಿರುವ ರಾಜಮೌಳಿ ನಿರ್ದೇಶಿಸಿ, ತೆಲುಗು ಸ್ಟಾರ್ ನಟರಾದ ಜೂ ಎನ್‌ಟಿಆರ್, ರಾಮ್ ಚರಣ್ ನಟಿಸಿರುವ ಈ ಸಿನಿಮಾ ಅಪಟ್ಟ ತೆಲುಗು ಸಿನಿಮಾ.

  ತೆಲುಗು ಸಿನಿಮಾ RRR ಹಿಂದಿ ಸೇರಿದಂತೆ ಬೇರೆ ಭಾಷೆಗಳಲ್ಲಿ ಬಿಡುಗಡೆ ಆಗಿದೆಯಾದರೂ ಮೂಲವಾಗಿ ಇದು ತೆಲುಗು ಸಿನಿಮಾವೇ. ಇದಕ್ಕೆ ರಾಜಮೌಳಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ. ಆದರೆ ರಾಜಮೌಳಿಯ ಈ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.

  ವಿದೇಶದಲ್ಲಿ ನಡೆದ ಸಂವಾದವೊಂದರಲ್ಲಿ ಮಾತನಾಡಿರುವ ರಾಜಮೌಳಿ, ಪ್ರೇಕ್ಷಕರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ''ಇದು (RRR) ಬಾಲಿವುಡ್ ಸಿನಿಮಾ ಅಲ್ಲ. ಇದು ತೆಲುಗು ಸಿನಿಮಾ. ದಕ್ಷಿಣ ಭಾರತದಲ್ಲಿ ನಿರ್ಮಾಣವಾದ ಸಿನಿಮಾ. ನಾನು ಸಹ ದಕ್ಷಿಣ ಭಾರತದವನೇ'' ಎಂದಿದ್ದಾರೆ.

  ಇದು ಈಗ ಚರ್ಚೆಗೆ ಗ್ರಾಸವಾಗಿದೆ. ರಾಜಮೌಳಿ, ದಕ್ಷಿಣದ ಚಿತ್ರರಂಗ, ಬಾಲಿವುಡ್ ಎಂದು ವರ್ಗೀಕರಣ ಮಾಡಿದ್ದಾರೆ ಎಂದಿದ್ದಾರೆ. ಅಂತರಾಷ್ಟ್ರೀಯ ವೇದಿಕೆಯಲ್ಲಿ 'RRR' ಭಾರತೀಯ ಸಿನಿಮಾ ಎನ್ನಬೇಕಿತ್ತು, ದಕ್ಷಿಣ ಭಾರತ, ಉತ್ತರ ಭಾರತ ಎಂಬುದೆಲ್ಲ ಭಾರತದಲ್ಲಿ ಮಾತ್ರ ಎಂಬ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

  ಇನ್ನು ಕೆಲವರು, ರಾಜಮೌಳಿ, 'RRR' ಸಿನಿಮಾವನ್ನು ಪ್ರೊಮೋಟ್ ಮಾಡಬೇಕಾದರೆ, 'RRR' ಭಾರತೀಯ ಸಿನಿಮಾ, ಸಿನಿಮಾಕ್ಕೆ ಭಾಷೆ, ಗಡಿ ಇಲ್ಲ ಎಂದಿದ್ದರು. ಈಗ ಸಿನಿಮಾ ಹಿಟ್ ಆದ ಬಳಿಕ RRR ತೆಲುಗು ಸಿನಿಮಾ ಎನ್ನುತ್ತಿದ್ದಾರೆ ಎಂದು ಕೆಲವರು ದೂರಿದ್ದಾರೆ.

  ಆದರೆ ದಕ್ಷಿಣ ಭಾರತದ ಚಿತ್ರರಂಗವನ್ನು ಬಾಲಿವುಡ್‌ನವರು ದಶಕಗಳಿಂದಲೂ ಕಡೆಗಣಿಸುತ್ತಲೇ ಬಂದಿದ್ದಾರೆ. ಆದರೆ ಈಗ ದಕ್ಷಿಣ ಭಾರತ ಚಿತ್ರರಂಗ ಪ್ರಗತಿ ಸಾಧಿಸಿದ್ದು, ಬಾಲಿವುಡ್ ಮುಗ್ಗರಿಸಿದೆ. ಆಗ ದಕ್ಷಿಣ ಭಾರತ ಚಿತ್ರರಂಗವನ್ನು ಕಡೆಗಣಿಸಿದ್ದ, ಅಂತರ ಕಾಯ್ದುಕೊಂಡಿದ್ದ ಬಾಲಿವುಡ್ ಈಗ ದಕ್ಷಿಣ ಭಾರತ ಚಿತ್ರರಂಗದೊಂದಿಗೆ ಗುರುತಿಸಿಕೊಳ್ಳಲು ಹವಣಿಸುತ್ತಿದೆ.

  'RRR' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ. ಈ ಬಾರಿಯ ಆಸ್ಕರ್ ಗೆಲ್ಲುವ ಸಾಧ್ಯತೆಯೂ ಇದೆ. ಈಗಾಗಲೇ ಪ್ರತಿಷ್ಟಿತ ಗ್ರಾಮಿ ಪ್ರಶಸ್ತಿಯನ್ನು ಅತ್ಯುತ್ತಮ ಹಾಡು ವಿಭಾಗದಲ್ಲಿ ಪಡೆದಿದೆ.

  English summary
  Director SS Rajamouli said RRR is a Telugu movie not Bollywood movie. He said in an international program.
  Monday, January 16, 2023, 9:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X