twitter
    For Quick Alerts
    ALLOW NOTIFICATIONS  
    For Daily Alerts

    ನಾಲ್ಕು ಆಸ್ಕರ್ ಬರುವ ಸಾಧ್ಯತೆ; ಯಾರು ಯಾರಿಗೆ ಎಂದು ಭವಿಷ್ಯ ನುಡಿದ ವೆರೈಟಿ ಡಾಟ್ ಕಾಮ್!

    |

    ಸಿನಿಮಾ ಹಾಗೂ ಮನರಂಜನಾ ಕ್ಷೇತ್ರದ ಕುರಿತಾಗಿ ವಿಶ್ವಮಟ್ಟದಲ್ಲಿರುವ ವೆಬ್ ತಾಣಗಳಲ್ಲಿ ಮುಂಚೂಣಿಯಲ್ಲಿ ವೆಬ್ ತಾಣವೆಂದರೆ ಅದು ವೆರೈಟಿ ಡಾಟ್ ಕಾಮ್. ಚಲನಚಿತ್ರ, ಟಿವಿ, ಮ್ಯೂಸಿಕ್ ಹಾಗೂ ಡಾಕುಮೆಂಟರಿ ಕುರಿತಾದ ಸುದ್ದಿಗಳನ್ನು ಎಕ್ಸ್‌ಕ್ಲೂಸಿವ್ ಆಗಿ ಪ್ರಕಟಿಸುವ ಈ ವೆರೈಟಿ ಸಂಸ್ಥೆಗೆ ಬರೋಬ್ಬರಿ 116 ವರ್ಷಗಳ ಇತಿಹಾಸವಿದೆ. ಹೌದು, ವೆಬ್ ತಾಣಕ್ಕೂ ಮುನ್ನ ಈ ವೆರೈಟಿ ಮ್ಯಾಗಝೀನ್ ಮೂಲಕವೇ ಭರ್ಜರಿ ರೀಚ್ ಪಡೆದುಕೊಂಡಿತ್ತು. ದುಬಾರಿಯಾದರೂ ಸಹ ಈ ಮ್ಯಾಗಝೀನ್ ಖರೀದಿಸುವವರ ಸಂಖ್ಯೆಗೇನೂ ಕೊರತೆಯಿರಲಿಲ್ಲ. 1905ರ ಡಿಸೆಂಬರ್ 16ರಂದು ಈ ಸಂಸ್ಥೆಯ ಮೊದಲ ವೀಕ್ಲಿ ಮ್ಯಾಗಝೀನ್ ನ್ಯೂಯಾರ್ಕ್ ನಗರದಲ್ಲಿ ವಿತರಣೆಯಾಯಿತು ಹಾಗೂ 1933ರಲ್ಲಿ ಲಾಸ್ ಏಂಜೆಲಸ್‌ನಲ್ಲಿ ಮತ್ತು 1998ರಲ್ಲಿ ನ್ಯೂಯಾರ್ಕ್ ನಗರದಲ್ಲಿ ದೈನಂದಿನ ಮ್ಯಾಗಝೀನ್ ವಿತರಣೆ ಆರಂಭವಾಗಿತ್ತು.

    ಹೀಗೆ ಶತಕದ ಇತಿಹಾಸವಿರುವ ಪ್ರತಿಷ್ಠಿತ ವೆರೈಟಿ ಡಾಟ್ ಕಾಮ್ ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ನಡೆಯಲಿರುವ ವಿಶ್ವದ ಪ್ರತಿಷ್ಟಿತ ಆಸ್ಕರ್ ಅವಾರ್ಡ್ಸ್‌ಗೆ ನಾಮಿನೇಷನ್ ಆಗಲಿರುವ ಚಿತ್ರ ಹಾಗೂ ಕಲಾವಿದರ ಸಂಭಾವ್ಯ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪ್ರತಿಷ್ಟಿತ ಪ್ರಶಸ್ತಿಗೆ ದೊಡ್ಡ ಮಟ್ಟದಲ್ಲಿ ಚಿತ್ರಗಳು ವಿವಿಧ ಕೆಟಗರಿಯಲ್ಲಿ ಪ್ರವೇಶ ಪಡೆದುಕೊಳ್ಳಲಿದ್ದು, ಈ ಚಿತ್ರಗಳಿಗೆ ಆಸ್ಕರ್ ಸದಸ್ಯರ ವೋಟಿಂಗ್ ನಡೆಸಿ ಅತಿಹೆಚ್ಚು ವೋಟ್ ಪಡೆದ ಚಿತ್ರ ಹಾಗೂ ಕಲಾವಿದರ ಕಿರುಪಟ್ಟಿಯನ್ನು ತಯಾರು ಮಾಡಲಾಗುತ್ತದೆ. ಈ ಪ್ರಕ್ರಿಯೆಯ ಮೂಲಕ ನಾಮಿನೇಷನ್ ಶಾರ್ಟ್ ಲಿಸ್ಟ್‌ ಪ್ರಕಟಗೊಳ್ಳಲಿದೆ.

    ಇನ್ನು ಈ ವೆರೈಟಿ ಡಾಟ್ ಕಾಮ್ ಬಿಡುಗಡೆಗೊಳಿಸಿರುವ ಆಸ್ಕರ್ ಗೆಲ್ಲಬಹುದಾದ ಚಿತ್ರ ಮತ್ತು ಕಲಾವಿದರ ಪಟ್ಟಿಯಲ್ಲಿ ಭಾರತದ ಚಿತ್ರ ಆರ್‌ಆರ್‌ಆರ್ ಒಟ್ಟು ನಾಲ್ಕು ವಿಭಾಗಗಳಲ್ಲಿ ನಾಮಿನೇಟ್ ಆಗಲಿದೆ ಎಂದು ಪ್ರಕಟಿಸಿದೆ.

    ಯಾವ ಯಾವ ಕೆಟಗರಿಗಳಲ್ಲಿ ನಾಮಿನೇಟ್?

    ಯಾವ ಯಾವ ಕೆಟಗರಿಗಳಲ್ಲಿ ನಾಮಿನೇಟ್?

    ಆರ್‌ ಆರ್ ಆರ್ ಸಿನಿಮಾದ ನಿರ್ದೇಶಕ ರಾಜಮೌಳಿ ಅತ್ಯುತ್ತಮ ನಿರ್ದೇಶಕನಾಗಿ ನಾಮಿನೇಟ್ ಆಗಬಹುದು ಎಂದು ವೆರೈಟಿ ತಿಳಿಸಿದೆ. ಹಾಗೂ ಆರ್‌ ಆರ್ ಆರ್ ಅತ್ಯುತ್ತಮ ಚಿತ್ರ ಕೆಟಗರಿಯಲ್ಲಿ ನಾಮಿನೇಟ್ ಆಗಲಿದೆ ಮತ್ತು ನಟರಾದ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ಅತ್ಯುತ್ತಮ ನಾಯಕರ ಕೆಟಗರಿಯಲ್ಲಿ ನಾಮನಿರ್ದೇಶನಗೊಳಗಳ್ಳುವ ಸಾಧ್ಯತೆಯಿದೆ ಎಂದು ವೆರೈಟಿ ಪ್ರಕಟಿಸಿದೆ.

    ಆರ್ ಆರ್ ಆರ್ ಆಸ್ಕರ್ ಗೆಲ್ಲಬಹುದು!

    ಆರ್ ಆರ್ ಆರ್ ಆಸ್ಕರ್ ಗೆಲ್ಲಬಹುದು!

    ಇನ್ನು ಸಿನಿಮಾ ಪ್ರೇಕ್ಷಕರು ಹಾಗೂ ಅನೇಕ ಸಿನಿ ಪಂಡಿತರು ಆರ್ ಆರ್ ಆರ್ ನೋಡಿದ ನಂತರ ಮೆಚ್ಚುಗೆ ವ್ಯಕ್ತಪಡಿಸಿದ್ದು ಆರ್ ಆರ್ ಆರ್ ವೀಕ್ಷಿಸಲು ಇದು ಅರ್ಹ ಸಿನಿಮಾ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅತ್ಯುತ್ತಮ ಚಿತ್ರದಡಿಯಲ್ಲಿ ಆರ್ ಆರ್ ಆರ್ ಪ್ರಶಸ್ತಿ ಪಡದುಕೊಳ್ಳವ ಸಾಧ್ಯತೆ ಹೆಚ್ಚಿವೆ ಎಂದು ಹಲವಾರು ಗ್ಲೋಬಲ್ ವೆಬ್‌ಸೈಟ್‌ಗಳು ಈಗಾಗಲೇ ಊಹಿಸಿವೆ.

    ಆರ್ ಆರ್ ಆರ್‌ಗೆ ಸಿಕ್ಕ ಗ್ಲೋಬಲ್ ರೀಚ್ ಭಾರತದ ಯಾವುದೇ ಚಿತ್ರಕ್ಕೂ ಸಿಕ್ಕಿಲ್ಲ!

    ಆರ್ ಆರ್ ಆರ್‌ಗೆ ಸಿಕ್ಕ ಗ್ಲೋಬಲ್ ರೀಚ್ ಭಾರತದ ಯಾವುದೇ ಚಿತ್ರಕ್ಕೂ ಸಿಕ್ಕಿಲ್ಲ!

    ಆರ್ ಆರ್ ಆರ್ ಸಿನಿಮಾ ಓಟಿಟಿಯಲ್ಲಿ ಬಂದ ನಂತರ ಬೃಹತ್ ಪ್ರಶಂಸೆಯನ್ನು ಗಿಟ್ಟಿಸಿಕೊಂಡಿದೆ. ಆರ್ ಆರ್ ಆರ್ ವೀಕ್ಷಿಸಿದ ವಿಶ್ವದ ವಿವಿಧ ಚಿತ್ರರಂಗಗಳ ನಿರ್ದೇಶಕರು, ಚಿತ್ರಕತೆ ಬರಹಗಾರರು ಆರ್ ಆರ್ ಆರ್ ಚಿತ್ರವನ್ನು ಕೊಂಡಾಡಿದ್ದಾರೆ. ಅದರಲ್ಲಿಯೂ ರಾಜಮೌಳಿ ಅವರ ಚಿತ್ರಕತೆಗೆ ವಿದೇಶಿಗರು ಮನಸೋತಿದ್ದಾರೆ. ಈ ರೀತಿಯ ಪ್ರತಿಕ್ರಿಯೆಯನ್ನು ಇಲ್ಲಿಯವರೆಗೂ ಭಾರತದ ಯಾವುದೇ ಚಿತ್ರ ಕೂಡ ಪಡೆದುಕೊಂಡಿರಲಿಲ್ಲ ಎನ್ನಬಹುದು.

    English summary
    RRR likely to be nominated in 4 categories at Oscar Awards 2023 predicts Variety magazine.
    Friday, September 16, 2022, 17:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X