RRR ಚಲನಚಿತ್ರ ಮುಂಗಡ ಬುಕಿಂಗ್ ಆರಂಭ: ದುಬಾರಿ ಬೆಲೆ!
RRR ಚಲನಚಿತ್ರದ ಮುಂಗಡ ಬುಕಿಂಗ್ ಅಧಿಕೃತವಾಗಿ ಭಾರತದಾದ್ಯಂತ ಆರಂಭವಾಗಿದೆ. RRR ಚಲನಚಿತ್ರದ ಮುಂಗಡ ಬುಕಿಂಗ್ ಭಾರತದಲ್ಲಿ ಮಾರ್ಚ್ 20, 2022 ರಂದು ಅಧಿಕೃತವಾಗಿ ತೆರೆದುಕೊಂಡಿದೆ. ಈ ಚಿತ್ರದ ಒಟ್ಟು ರನ್‌ಟೈಮ್ ಸುಮಾರು 3 ಗಂಟೆ 6 ನಿಮಿಷಗಳು ಮತ್ತು ಇದು UA ಪ್ರಮಾಣ ಪತ್ರವನ್ನುಹೊಂದಿದೆ. ಆರ್ ಆರ್ ಆರ್ ಪ್ಯಾನ್ ಇಂಡಿಯಾ ಸಿನಿಮಾ ಆಗಿ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. 550 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಚಿತ್ರವು, ಭಾರತದಲ್ಲಿನ ಸಾರ್ವಕಾಲಿಕ ವೆಚ್ಚದ ಚಲನಚಿತ್ರಗಳಲ್ಲಿ ಒಂದಾಗಿದೆ.
ಮುಂಬೈ ದೆಹಲಿ ಸೇರಿದಂತೆ ಉತ್ತ ರಭಾರತದಲ್ಲಿ ಇಂದು ಬೆಳಗಿನಿಂದಲೇ RRR ಬುಕಿಂಗ್ ಸೀಮಿತ ಮಟ್ಟದಲ್ಲಿ ಆರಂಭವಾಗಿದೆ. 3D ಹಿಂದಿ ಆವೃತ್ತಿಯ ಪ್ರದರ್ಶನದ ಆರಂಭಿಕ ಟಿಕೆಟ್ ದರವು ಬೆಳಗಿನ ಪ್ರದರ್ಶನಕ್ಕೆ 250 ರೂಪಾಯಿಗಳಿಗಿಂತ ಹೆಚ್ಚಾಗಿದೆ ಮತ್ತು ಅದು 500ಗೆ ನಿಗದಿಪಡಿಸಲಾಗಿದೆ. ಹಿಂದಿ ಆವೃತ್ತಿಯ ಮುಂಜಾನೆ ಶೋ ಮುಂಬೈನಲ್ಲಿ ಇದೀಗ ಸುಮಾರು 8 ಗಂಟೆಗೆ ಪ್ರಾರಂಭವಾಗುತ್ತಿದೆ. ಇಲ್ಲಿಯವರೆಗೆ, ಆರ್‌ಆರ್‌ಆರ್‌ನ ಸೀಮಿತ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ, ಮುಂಬೈನಲ್ಲಿ ಇದುವರೆಗೆ ಕೇವಲ 18 ಚಿತ್ರಮಂದಿರಗಳಲ್ಲಿ ಬುಕಿಂಗ್ ತೆರೆದುಕೊಂಡಿದೆ.
ದೆಹಲಿ-ಎನ್‌ಸಿಆರ್ ನಲ್ಲಿ 20 ಚಿತ್ರಮಂದಿರಗಳಲ್ಲಿ RRR 3D ಆವೃತ್ತಿಯ ಬಹು ಪ್ರದರ್ಶನ ಕಾಣಲು ಸಿದ್ಧಗೊಂಡಿವೆ. ಅಹಮದಾಬಾದ್‌ನಲ್ಲಿ ಕೇವಲ 6 ಥಿಯೇಟರ್‌ಗಳು RRR 2D ಆವೃತ್ತಿಯ ಪ್ರದರ್ಶನಗಳನ್ನು ಇಲ್ಲಿಯವರೆಗೆ ನಿಗದಿಯಾಗಿದೆ. RRR ನ ಮುಂಗಡ ಬುಕಿಂಗ್ ಕೂಡ ಚಂಡೀಗಢದಲ್ಲಿ ತೆರೆಯಲ್ಪಟ್ಟಿದೆ, ಅಲ್ಲಿ 6 ಚಿತ್ರಮಂದಿರಗಳು ಬಹು ಪ್ರದರ್ಶನಗಳನ್ನು ಕಾಣಲಿದೆ. ಕೋಲ್ಕತ್ತಾದಲ್ಲಿ, RRR 3D ಆವೃತ್ತಿಯು ಪ್ರಸ್ತುತ ಐದು ಚಿತ್ರಮಂದಿರಗಳನ್ನು ಪಡೆದುಕೊಂಡಿದೆ ಮತ್ತು 2D ಆವೃತ್ತಿಯು ಕೇವಲ ನಾಲ್ಕು ಚಿತ್ರಮಂದಿರಗಳನ್ನು ಪಡೆದುಕೊಂಡಿದೆ.

ದಕ್ಷಿಣ ಭಾರತದಲ್ಲಿ ಹೇಗಿದೆ?
ದಕ್ಷಿಣ ಮಾರುಕಟ್ಟೆಯ ಬಗ್ಗೆ ಹೇಳುವುದಾದರೆ ಹೈದರಾಬಾದ್‌ನಲ್ಲಿ ಕೇವಲ 5 ಥಿಯೇಟರ್‌ಗಳು RRR ತೆಲುಗು ಆವೃತ್ತಿ 2D ಶೋಗಳನ್ನು ಪ್ರಾರಂಭಿಸಿವೆ ಮತ್ತು ಅವುಗಳ ಟಿಕೆಟ್ ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಒಂದೇ ಥಿಯೇಟರ್ ನಲ್ಲಿ RRR ಹಿಂದಿ ಆವೃತ್ತಿ ಪ್ರದರ್ಶಿಸುತ್ತಿದ್ದು, ಅದು ಕೂಡ ಹೌಸ್ ಫುಲ್ ಆಗಿದೆ. ಚೆನ್ನೈನಲ್ಲಿ, 10 ಚಿತ್ರಮಂದಿರಗಳು RRR ತಮಿಳು 2D ಆವೃತ್ತಿಯ ಬಹು ಪ್ರದರ್ಶನಗಳನ್ನು ಪಡೆದುಕೊಂಡಿದೆ ಮತ್ತು 12 ಪ್ಲಸ್ ಥಿಯೇಟರ್‌ಗಳು RRR ತಮಿಳು 3D ಆವೃತ್ತಿಯ ಪ್ರದರ್ಶನಗಳನ್ನು ಇಲ್ಲಿಯವರೆಗೆ ಪಡೆದುಕೊಂಡಿದೆ. ಕೇರಳದ ಕೊಚ್ಚಿಯಲ್ಲಿ ಇನ್ನೂ ಮುಂಗಡ ಬುಕ್ಕಿಂಗ್ ಆರಂಭವಾಗಿಲ್ಲ. ಬೆಂಗಳೂರಿನ ಮೂರು ಚಿತ್ರಮಂದಿರಗಳಲ್ಲಿ ತಲಾ 6 ಪ್ರದರ್ಶನಗಳ ಬುಕಿಂಗ್ ಆರಂಭವಾಗಿದೆ

ದುಬಾರಿಯಾಗಿದೆ ಟಿಕೆಟ್ ದರ
ಒಂದು ರೀತಿಯಲ್ಲಿ, RRR ಚಲನಚಿತ್ರ ಸೀಮಿತ ಮುಂಗಡ ಬುಕಿಂಗ್ ಅಧಿಕೃತವಾಗಿ ಭಾರತದಲ್ಲಿ ಪ್ರಾರಂಭವಾಗಿದೆ ಮತ್ತು ಪೂರ್ಣ ಮುಂಗಡ ಬುಕಿಂಗ್ ಸೋಮವಾರ ಮಾರ್ಚ್ 21 ರೊಳಗೆ ತೆರೆಯಲಾಗುತ್ತದೆ.ಆರ್‌ಆರ್‌ಆರ್ ಚಿತ್ರವನ್ನು ಎಸ್‌ಎಸ್ ರಾಜಮೌಳಿ ನಿರ್ದೇಶಿಸಿದ್ದಾರೆ, ಇದರಲ್ಲಿ ಜೂನಿಯರ್ ಎನ್‌ಟಿಆರ್, ರಾಮ್ ಚರಣ್, ಅಜಯ್ ದೇವಗನ್, ಆಲಿಯಾ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಗಮನಿಸಿದ ವಿಷಯವೆಂದರೆ, 2D ಮತ್ತು 3D ಆವೃತ್ತಿಗಳ ಟಿಕೆಟ್ ಬೆಲೆಗಳು ತುಂಬಾ ದುಬಾರಿಯಾಗಿದೆ.

RRR ಹೈದರಾಬಾದ್ ಬೆನಿಫಿಟ್ ಶೋಗಳು ದಾಖಲೆ ಬೆಲೆಗೆ ಮಾರಾಟವಾಗಿವೆ
RRR ಮಾರ್ಚ್ 25 ರಂದು ದೇಶದಾದ್ಯಂತ ಅತಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಟಿಕೆಟ್‌ಗಳಿಗೆ ಭಾರಿ ಬೇಡಿಕೆಯಿದ್ದು, ತೆಲುಗು ರಾಜ್ಯಗಳ ಸರ್ಕಾರಗಳು ರಾಜ್ಯಗಳಲ್ಲಿ ಐದು ಪ್ರದರ್ಶನಗಳನ್ನು ಪ್ರದರ್ಶಿಸಲು ಅನುಮತಿ ನೀಡಿವೆ. ಹೈದರಾಬಾದ್‌ನಲ್ಲಿ, ವಿಶೇಷ ಪಾವತಿಸಿದ ಪ್ರೀಮಿಯರ್‌ಗಳು ಮಧ್ಯರಾತ್ರಿ ಒಂದು ಗಂಟೆಗೆ ಆರಂಭವಾಗುತ್ತದೆ. ನಿಜಾಮ್ ವಿತರಕ ದಿಲ್ ರಾಜು ಪ್ರೀಮಿಯರ್ ಶೋಗಳನ್ನು 1 ಕೋಟಿಗೆ ಮಾರಾಟ ಮಾಡಿದ್ದಾರೆ. ವಿಶೇಷ ಪ್ರೀಮಿಯರ್‌ಗಳು ಬ್ರಮರಾಂಭ, ಮಲ್ಲಿಕಾರ್ಜುನ, ವಿಶ್ವನಾಥ್, ಅರ್ಜುನ್, ಶ್ರೀರಾಮುಲು ಮತ್ತು ವಿಜೇತ ಥಿಯೇಟರ್‌ಗಳಲ್ಲಿ ಮಧ್ಯಾಹ್ನ ರಾತ್ರಿ ಒಂದು ಗಂಟೆಗೆ ಗಂಟೆಗೆ ಪ್ರದರ್ಶನಗೊಳ್ಳಲಿವೆ.

ಆಂಧ್ರ ಮತ್ತು ತೆಲಂಗಾಣ ದ ಬಹುತೇಕ ಚಿತ್ರಮಂದಿರಗಳಲ್ಲಿ ಆರ್ ಆರ್ ಆರ್ ಬಿಡುಗಡೆ
ಯುವ ನಿರ್ಮಾಪಕ ಸೂರ್ಯದೇವರ ನಾಗ ವಂಶಿ ಮತ್ತು ಅವರ ಸ್ನೇಹಿತರು ಬಾಂಡ್ ನೀಡಿ ಪ್ರೀಮಿಯರ್ ಶೋಗಳ ಟಿಕೆಟುಗಳನ್ನು ಪಡೆದುಕೊಂಡಿದ್ದಾರೆ. ವಿಶೇಷ ಬೆನಿಫಿಟ್ ಶೋಗಳಿಗೆ ಅನುಮತಿ ನೀಡುವಂತೆ ವಿತರಕರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ವಿಶೇಷ ಪ್ರೀಮಿಯರ್ ಗಳ ಟಿಕೆಟ್‌ಗಳಿಗೆ ಭಾರಿ ಬೇಡಿಕೆ ಇರುತ್ತದೆ. ಎಪಿ ಮತ್ತು ತೆಲಂಗಾಣದಲ್ಲಿ ಸಾಮಾನ್ಯ ಪ್ರದರ್ಶನಗಳು ಎಲ್ಲಾ ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 6 ರಿಂದ ಪ್ರಾರಂಭವಾಗುತ್ತವೆ. AP ಮತ್ತು ತೆಲಂಗಾಣದ ಎಲ್ಲಾ ಚಿತ್ರಮಂದಿರಗಳು ವಾರಾಂತ್ಯದಲ್ಲಿ RRR ಅನ್ನು ಪ್ರದರ್ಶಿಸಲು ಸಜ್ಜಾಗುತ್ತಿವೆ.


Click it and Unblock the Notifications











