For Quick Alerts
  ALLOW NOTIFICATIONS  
  For Daily Alerts

  ಫೀಲ್ಡಿಗಿಳಿದ ಜಕ್ಕಣ್ಣ: ರೇಸ್‌ನಲ್ಲಿ ಜೂ.ಎನ್‌ಟಿಆರ್-ರಾಮ್ ಚರಣ್

  |

  ಖ್ಯಾತ ಸಿನಿಮಾ ನಿರ್ದೇಶಕ ರಾಜಮೌಳಿ ಅವರನ್ನು ತೆಲುಗು ಸಿನಿರಂಗದಲ್ಲಿ 'ಜಕ್ಕಣ್ಣ' ಎಂದು ಕರೆಯುವ ರೂಢಿ. ಕೊರೊನಾ ಕಾರಣದಿಂದ ಬಹು ತಿಂಗಳಿಂದ ಚಿತ್ರೀಕರಣದಿಂದ ಜಕ್ಕಣ್ಣ, ಕೊನೆಗೂ 'ಲೈಟ್ಸ್-ಕ್ಯಾಮೆರಾ-ಆಕ್ಷನ್' ಹೇಳಿದ್ದಾರೆ.

  ಜೂ.ಎನ್‌ಟಿಆರ್-ರಾಮ್ ಚರಣ್ ತೇಜಾ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಆರ್‌ಆರ್‌ಆರ್‌' ಚಿತ್ರೀಕರಣ ಮತ್ತೆ ಪ್ರಾರಂಭವಾಗಿದ್ದು, ಹೈದರಾಬಾದ್‌ನಲ್ಲಿ ಚಿತ್ರೀಕರಣ ಸಾಗುತ್ತಿದೆ.

  ಎಲ್ಲದಕ್ಕೂ ತಮ್ಮ ಕ್ರಿಯಾಶೀಲತೆಯ ಟಚ್ ನೀಡುವ ನಿರ್ದೇಶಕ ರಾಜಮೌಳಿ, ಚಿತ್ರೀಕರಣ ಪುನರ್ ಪ್ರಾರಂಭ ಮಾಡಿದ ವಿಷಯವನ್ನು ಸಹ ಸುಂದರ ವಿಡಿಯೋ ಮೂಲಕ ಜನರೊಂದಿಗೆ ಹಂಚಿಕೊಂಡಿದ್ದಾರೆ.

  ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲಾಗಿತ್ತು

  ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ಸಂಗ್ರಹಿಸಲಾಗಿತ್ತು

  ಆರ್‌ಆರ್‌ಆರ್ ಸಿನಿಮಾ ಚಿತ್ರೀಕರಣ ಈ ಮೊದಲು ಪ್ರಾರಂಭವಾದಾಗಿದ್ದಾಗಲೇ ಚಿತ್ರೀಕರಣಕ್ಕೆ ಬೇಕಾದ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು. ಹಳೆಯ ಕಾಲದ ಬಂದೂಕು, ಕಾರು, ವಸ್ತ್ರಗಳು ಎಲ್ಲವನ್ನೂ ತರಿಸಲಾಗಿತ್ತು. ಆದರೆ ಲಾಕ್‌ಡೌನ್ ಕಾರಣದಿಂದ ಅವನ್ನೆಲ್ಲಾ ಗೋಧಾಮಿನಲ್ಲಿಟ್ಟು ಬೀಗ ಜಡಿಯಲಾಗಿತ್ತು.

  ವಿಡಿಯೋ ಬಿಡುಗಡೆ ಮಾಡಿದ ಆರ್‌ಆರ್‌ಆರ್ ತಂಡ

  ವಿಡಿಯೋ ಬಿಡುಗಡೆ ಮಾಡಿದ ಆರ್‌ಆರ್‌ಆರ್ ತಂಡ

  ಆರ್‌ಆರ್‌ಆರ್‌ ತಂಡ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಸೆಟ್‌ ಅನ್ನು ಸ್ವಚ್ಛಗೊಳಿಸುವುದು, ಬಂದೂಕುಗಳನ್ನು ಸ್ವಚ್ಛಗೊಳಿಸುವುದು, ಚಿತ್ರೀಕರಣಕ್ಕೆ ತರಿಸಲಾಗಿದ್ದ ಹಳೆಯ ಮಾಡೆಲ್ ನ ಕಾರನ್ನು ಸ್ವಚ್ಛ ಮಾಡುವುದು, ವಸ್ತ್ರಗಳನ್ನು ತೊಳೆದು ಇಸ್ತ್ರಿ ಮಾಡಿರುವುದು ಎಲ್ಲವನ್ನೂ ತೋರಿಸಲಾಗಿದೆ.

  ರೇಸ್ ಹೊರಡುವ ನಾಯಕರು

  ರೇಸ್ ಹೊರಡುವ ನಾಯಕರು

  ಚಿತ್ರೀಕರಣದ ಸೆಟ್‌ನಲ್ಲಿ ಕೊರೊನಾ ಮುನ್ನೆಚ್ಚರಿಕೆ ಹೇಗೆ ತೆಗೆದುಕೊಳ್ಳಲಾಗಿದೆ ಎಂಬುದರ ಬಗ್ಗೆ ಸಹ ವಿಡಿಯೋದಲ್ಲಿ ತಿಳಿಸಲಾಗಿದೆ. ವಿಡಿಯೋದ ಅಂತ್ಯದಲ್ಲಿ ರಾಜಮೌಳಿ ಆಕ್ಷನ್ ಎನ್ನುತ್ತಿದ್ದಂತೆ ಇಬ್ಬರೂ ನಾಯಕ ನಟರು ಒಬ್ಬರು ಕುದುರೆ ಮೇಲೆ ಮತ್ತೊಬ್ಬರ ಹಳೆಯ ಕಾಲದ ಬುಲೆಟ್ ಮೇಲೆ ರೇಸ್ ಹೊರಡುತ್ತಾರೆ. ಸಿನಿಮಾದ ಫಸ್ಟ್ ಲುಕ್‌ಗಾಗಿ ಈ ಚಿತ್ರೀಕರಣ ನಡೆಸಲಾಗಿದೆ ಎನ್ನಲಾಗುತ್ತಿದೆ.

  ಫಿಕ್ಸ್ ಆಯ್ತು ಕಾಜಲ್ ಮದುವೆ, ಹುಡುಗ ಯಾರು ಗೊತ್ತಾ | Filmibeat Kannada
  ಬೇಗ ಚಿತ್ರೀಕರಣ ಮುಗಿಸುವ ಒತ್ತಡದಲ್ಲಿ ರಾಜಮೌಳಿ

  ಬೇಗ ಚಿತ್ರೀಕರಣ ಮುಗಿಸುವ ಒತ್ತಡದಲ್ಲಿ ರಾಜಮೌಳಿ

  ಆರ್‌ಆರ್‌ಆರ್‌ ಸಿನಿಮಾದಲ್ಲಿ ಆಲಿಯಾ ಭಟ್ ಹಾಗೂ ಒಲಿವಿಯಾ ಮೋರಿಸ್ ನಾಯಕಿಯರ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದನ್ನು ಹೊರತುಪಡಿಸಿ ನಟ ಅಜಯ್ ದೇವಗನ್ ಸಹ ಸಿನಿಮಾದಲ್ಲಿದ್ದಾರೆ. ಕೊರೊನಾ ಕಾರಣದಿಂದ ಹೊರಗಿನ ನಟರ ಕಾಲ್‌ಶೀಟ್‌ಗಳು ಮೊಟಕಾಗಿವೆ ಎನ್ನಲಾಗಿದ್ದು, ಬೇಗನೆ ಚಿತ್ರೀಕರಣ ಮುಗಿಸುವ ಒತ್ತಡದಲ್ಲಿದ್ದಾರೆ ರಾಜಮೌಳಿ.

  English summary
  RRR movie resume shooting after 7 months. Team shares a video of film set. Rajamouli is back in action.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X