ತ್ರಿಬಲ್ ಆರ್ ಚಿತ್ರದ ಹಾಡು ರಿಲೀಸ್ : ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ ರಾಮ್ ಚರಣ್, ಜೂ.ಎನ್‌ಟಿಆರ್!
ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್ ಈಗ ಹೊಸ ಹಾಡಿನ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಚಿತ್ರದ ಹಾಡಿನಲ್ಲಿ ಆರ್‌ಆರ್‌ಆರ್ ಜೋಡಿ ರಾಮ್ ಚರಣ್ ತೇಜ ಮತ್ತು ಜೂ.ಎನ್‌ಟಿಆರ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಹಾಡು ರಿಲೀಸ್ ಆದ ಕೂಡಲೇ ವೈರಲ್ ಆಗಿದೆ. ಎಲ್ಲರೂ ರಾಮ್ ಚರಣ್ ತೇಜ ಮತ್ತು ಜೂ.ಎನ್‌ಟಿಆರ್ ಮಸ್ತ್ ಡ್ಯಾನ್ಸ್ ಬಗ್ಗೆ ಮಾತನಾಡುತ್ತಾ ಇದ್ದಾರೆ.
ನಾಟು ನಾಟು ಅನ್ನೋ ಈ ಹಾಡಿನ ಲಿರಿಕಲ್ ವೀಡಿಯೋ ಮಾತ್ರ ರಿಲೀಸ್ ಆಗಿದೆ. ಹಾಡಿನಲ್ಲಿ ಮೇಕಿಂಗ್ ದೃಶ್ಯಗಳು ಕೂಡ ಗಮನ ಸೆಳೆಯುತ್ತವೆ. ರೆಟ್ರೋ ಕಾಸ್ಟ್ಯೂಂನಲ್ಲಿ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಮಿಂಚಿದ್ದಾರೆ. ಇನ್ನೂ ಅದ್ದೂರಿ ಸೆಟ್ ಮತ್ತು ನೂರಾರು ನೃತ್ಯ ಕಲಾವಿದರು ಹಾಡಿನ ಹೈಲೈಟ್. ಈ ಹಾಡಿಗೆ ಖ್ಯಾತ ನೃತ್ಯ ನಿರ್ದೇಶನ ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇದು ಲಿರಿಕಲ್ ವೀಡಿಯೋ ಆಗಿರುವುದರಿಂದ 2 ರಿಂದ 3 ನೃತ್ಯ ದೃಶ್ಯಗಳು ಮಾತ್ರ ಇವೆ. ಇದುವೆ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಸಿನಿಮಾ ರಿಲೀಸ್ ಹತ್ತಿರ ಬರುತ್ತಿದ್ದಂತೆ ಚಿತ್ರದ ಬಗ್ಗೆ ಒಂದೊಂದೇ ಅಂಶವನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತಿದೆ. ತೆಲುಗಿನಲ್ಲಿ "ನಾಟು ನಾಟು ಎನ್ನುವ ಈ ಹಾಡು ಕನ್ನಡದಲ್ಲಿ ಹಳ್ಳಿ ನಾಟು ಭಾರಿ ಘಾಟು ಎನ್ನುವಂತಹ ಸಾಹಿತ್ಯ ಇದೆ. ಆರ್ ಆರ್ ಆರ್ ಸಿನಿಮಾ ಬಹು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ನಲ್ಲಿ ಒಟ್ಟಿಗೆ ರಿಲೀಸ್ ಆಗುತ್ತಿದೆ. ಹಾಗಾಗಿ ಈ ಹಾಡು ಕೂಡ 5 ಭಾಷೆಯಲ್ಲಿ ಒಟ್ಟಿಗೆ ರಿಲೀಸ್ ಆಗಿದೆ. 3 ನಿಮಿಷ 28 ಸೆಕೆಂಡು ಇರುವ ಈ ಹಾಡು ನೋಡುಗರನ್ನ ಒಂದು ಸೆಕೆಂಡು ಅತ್ತಿತ್ತ ಅಲ್ಲಾಡಲು ಬಿಡುವುದಿಲ್ಲ. ಅಷ್ಟರ ಮಟ್ಟಿಗೆ ಎಂ.ಎಂ. ಕೀರವಾಣಿ ಸಂಗೀತ ಗುಂಗು ಹಿಡಿಸುತ್ತದೆ.

ಆರ್ ಆರ್ ಆರ್ ಸಿನಿಮಾವನ್ನು ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ರಾಜಮೌಳಿ ನಿರ್ದೇಶನದಲ್ಲಿ ಬಾಹುಬಲಿ ನಂತರ ಬರುತ್ತಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಆದರೆ ಇದು ಯಾವುದೋ ಒಂದು ಭಾಷೆಗೆ ಸೀಮಿತ ಆಗಿರುವ ಸಿನಿಮಾ ಅಲ್ಲ. ಬಾಹುಬಲಿ ನಂತರ ರಾಜ ಮೌಳಿ ನಿರ್ದೇಶನಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಈಗ ರಾಜಮೌಳಿ ಯಾವುದೇ ಸಿನಿಮಾ ಮಾಡಿದರು ವಿಶ್ವದಾದ್ಯಂತ ಇರುವ ಪ್ರೇಕ್ಷಕರ ಸಲುವಾಗಿ ಸಿನಿಮಾ ಮಾಡಬೇಕಾಗುತ್ತದೆ. ಹಾಗಾಗಿ ಆರ್ ಆರ್ ಆರ್ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈಗಾಗಲೇ ರಿಲೀಸ್ ಆಗಿರುವ ಚಿತ್ರದ ಟೀಸರ್, ಹಾಡುಗಳು ಸಿನಿಮಾದ ತಿರುಳನ್ನು ಬಿಚ್ಚಿಟ್ಟಿವೆ. ಜೊತೆಗೆ ಇತ್ತೀಚೆಗೆ ಚಿತ್ರದ ಮೇಕಿಂಗ್ ಕೂಡ ರಿಲೀಸ್ ಮಾಡಿತ್ತು ಚಿತ್ರ ತಂಡ. ಆದರೆ ಈ ಹಾಡು ನಿರೀಕ್ಷೆ ದುಪ್ಪಟ್ಟು ಮಾಡಿದೆ.
ಚಿತ್ರದಲ್ಲಿರುವ ಅದ್ದೂರಿ ತಾರಾಗಣ ನಿರೀಕ್ಷೆಗೆ ಮತ್ತೊಂದು ಕಾರಣ. ರಾಮ್ ಚರಣ್, ಜೂನಿಯರ್ ಎನ್ ಟಿ ಆರ್, ಆಲಿಯಾ ಭಟ್, ಅಜಯ್ ದೇವಗನ್, ಹೀಗೆ ದೊಡ್ಡ ದೊಡ್ಡ ಹೆಸರುಗಳು ಚಿತ್ರ ತಂಡದಲ್ಲಿದೆ. ಈಗಾಗಲೇ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಲುಕ್ ಮತ್ತು ಪಾತ್ರದ ಪರಿಚಯ ಕೂಡ ಚಿತ್ರತಂಡ ಮಾಡಿಕೊಟ್ಟಿದೆ. ಆರ್ ಆರ್ ಆರ್ ಸಿನಿಮಾ 2022 ಜನವರಿ 7ಕ್ಕೆ ರಿಲೀಸ್ ಮಾಡುವ ನಿರ್ಧಾರ ಮಾಡಿಕೊಂಡಿದೆ. ಚಿತ್ರ ರಿಲೀಸ್ ದಿನಕ್ಕಾಗಿ ಅದೆಷ್ಟೋ ಅಭಿಮಾನಿಗಳು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











