ಎಲ್ಲಾ ಸರಿ ಇದ್ದಿದ್ದರೆ ಆ ಬಿಗ್ ಬಜೆಟ್ ಸಿನಿಮಾ ಇಂದು ಬಿಡುಗಡೆ ಆಗಿರುತ್ತಿತ್ತು

ಕೊರೊನಾ ಬಂದು ಚಿತ್ರರಂಗದ ಸ್ಥಿತಿಯೇ ಬದಲಾಗಿ ಹೋಗಿದೆ. ಹೊಸ ಸಿನಿಮಾವೊಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿ ಆರು ತಿಂಗಳಾಗುತ್ತಾ ಬಂತು.

Recommended Video

ಮದುವೆಗೂ ಮುಂಚೆ ಅಪ್ಪನಾದ ಹಾರ್ದಿಕ್ ಪಾಂಡ್ಯ | Hardik Pandya

ಸೆಟ್ಟೇರಿರುವ ಸಿನಿಮಾಗಳಂತೂ ಚಿತ್ರೀಕರಣ ಬಂದ್ ಮಾಡಿ ಕೊರೊನಾ ದೇಶಬಿಟ್ಟುತೊಲಗಲು ಕಾಯುತ್ತಾ ಕೂತಿವೆ. ಸಿನಿಮಾ ಕಾರ್ಮಿಕರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಸಾಲ ತಂದು ಸಿನಿಮಾ ಮೇಲೆ ಹಣ ಹೂಡಿರುವ ನಿರ್ಮಾಕರು ಬಡ್ಡಿ ಮೊತ್ತ ಹೆಚ್ಚಾಗುತ್ತಿರುವುದಕ್ಕೆ ಆತಂಕಿತರಾಗಿದ್ದಾರೆ.

ಸ್ಟಾರ್ ಕ್ರೇಜ್ ಹೆಚ್ಚಿಗಿರುವ ದಕ್ಷಿಣ ಭಾರತದಲ್ಲಿ ಸ್ಟಾರ್ ನಟರ ಸಿನಿಮಾಗಳಿಗಾಗಿ ಸಿನಿಪ್ರೇಕ್ಷಕರು ಕಾಯುತ್ತಿದ್ದಾರೆ. ಸಿನಿಮಾ ಪೂರ್ಣ ರೆಡಿಯಾಗಿರುವ, ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿಯಾಗಿರುವ ಸಿನಿಮಾಗಳು ಸಹ ಡಬ್ಬದಲ್ಲೇ ಕೊಳೆಯುತ್ತಿವೆ.

ಇಂದು ಬಿಡುಗಡೆ ಆಗಬೇಕಿತ್ತು ಆರ್‌ಆರ್‌ಆರ್‌

ಇಂದು ಬಿಡುಗಡೆ ಆಗಬೇಕಿತ್ತು ಆರ್‌ಆರ್‌ಆರ್‌

ತೆಲುಗಿನ ಮಾತ್ರವಲ್ಲದೆ ದೇಶದ ಸಿನಿ ಪ್ರೇಮಿಗಳಿಗೆ ಕುತೂಹಲದಿಂದ ಎದುರು ನೋಡುತ್ತಿರುವ ರಾಜಮೌಳಿ ನಿರ್ದೇಶನದ ಸಿನಿಮಾ ಆರ್‌ಆರ್‌ಆರ್‌ ಇಂದು (ಜುಲೈ 30) ಬಿಡುಗಡೆ ಆಗಬೇಕಿತ್ತು. ಆದರೆ ಸಿನಿಮಾದ ಚಿತ್ರೀಕರಣ ಅರ್ಧದಷ್ಟೂ ಸಹ ಆಗಿಲ್ಲ!

ಎನ್‌ಟಿಆರ್-ರಾಮ್‌ಚರಣ್ ತೇಜಾ ನಾಯಕ

ಎನ್‌ಟಿಆರ್-ರಾಮ್‌ಚರಣ್ ತೇಜಾ ನಾಯಕ

ಹೌದು, ಚಿತ್ರತಂಡವು ಈ ಮೊದಲೇ ಘೋಷಿಸಿದ್ದಂತೆ, ಎನ್‌ಟಿಆರ್-ರಾಮ್‌ಚರಣ್ ನಟಿಸಿರುವ ಆರ್‌ಆರ್‌ಆರ್‌ ಸಿನಿಮಾ ಈ ದಿನ ಬಿಡುಗಡೆ ಆಗಿರಬೇಕಿತ್ತು. ಆದರೆ ಕೊರೊನಾ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣ ಅರ್ಧದಷ್ಟೂ ಸಹ ಮುಗಿದಿಲ್ಲ. ಅಷ್ಟೇ ಅಲ್ಲದೆ ಬೇರೆ ಕೆಲವು ವಿಘ್ನಗಳು ಸಹ ಎದುರಾದವು.

ದಿನಾಂಕ ಬದಲಾವಣೆ ಮಾಡಲಾಯಿತು

ದಿನಾಂಕ ಬದಲಾವಣೆ ಮಾಡಲಾಯಿತು

ಸಿನಿಮಾವು ಜುಲೈ 30 ಕ್ಕೆ ಬಿಡುಗಡೆ ಆಗುತ್ತದೆಯೆಂದು ಸಿನಿಮಾ ಸೆಟ್ಟೇರಿದಾಗ ಚಿತ್ರತಂಡ ಹೇಳಿತ್ತು. ಆದರೆ ನಂತರ ಇದನ್ನು ಬದಲಾಯಿಸಿ 2021 ರ ಜನವರಿ 21 ಕ್ಕೆ ಸಿನಿಮಾ ಬಿಡುಗಡೆ ಆಗುತ್ತದೆ ಎನ್ನಲಾಯಿತು. ಆದರೆ ಇದೂ ಸಹ ಸುಳ್ಳಾಗುವ ಸಾಧ್ಯತೆ ದಟ್ಟವಾಗಿದೆ.

ರಾಜಮೌಳಿಗೆ ಕೊರೊನಾ ಸೋಂಕು

ರಾಜಮೌಳಿಗೆ ಕೊರೊನಾ ಸೋಂಕು

ಆರ್‌ಆರ್‌ಆರ್‌ ಸಿನಿಮಾದ ನಿರ್ದೇಶಕ ರಾಜಮೌಳಿ ಅವರಿಗೇ ಕೊರೊನಾ ಸೋಂಕು ತಗುಲಿದ್ದು, ಪ್ರಸ್ತುತ ಅವರು ಮನೆಯಲ್ಲಿಯೇ ಐಸೋಲೇಶನ್‌ಗೆ ಒಳಗೊಂಡಿದ್ದಾರೆ. ರಾಜಮೌಳಿ ಮಾತ್ರವಲ್ಲದೆ ಅವರ ಕುಟುಂಬ ಎಲ್ಲರಿಗೂ ಕೊರೊನಾ ಸೋಂಕಾಗಿದೆ.

More from Filmibeat

English summary
Rajamouli's movie RRR would have released on July 30 if coronavirus pandemic not happened.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X