RRR Day 1 Box Office Collection: ಮೊದಲ ದಿನವೇ 200 ಕೋಟಿ ದಾಟಿದ RRR ಬಾಕ್ಸಾಫೀಸ್ ಕಲೆಕ್ಷನ್
RRR ರಿಲೀಸ್ ಆಗಿ ಒಂದು ದಿನ ಕಳೆದಿದೆ. ಮೊದಲ ದಿನವೆ ಸಿನಿಮಾ ನೋಡಿದ ಮಂದಿ ಚಿತ್ರಕ್ಕೆ ಜೈಕಾರ ಹಾಕುತ್ತಿದ್ದಾರೆ. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಪಾತ್ರಗಳನ್ನು ಮೆಚ್ಚಿ ಕೊಂಡಾಡಿದ್ದಾರೆ. ಈ ಹಿಂದೆ ಈ ಇಬ್ಬರು ನಟರನ್ನು ಈ ರೀತಿ ಅವತಾರದಲ್ಲಿ ನೋಡಿರದ ಪ್ರೇಕ್ಷಕರು ರಾಜಮೌಳಿ ನಿರ್ದೇಶನದಲ್ಲಿ ಇವರ ಪಾತ್ರಗಳ ಕಂಡು ನಿಬ್ಬೆರಗಾಗಿದ್ದಾರೆ.
ಇನ್ನು ಸಿನಿಮಾದ ಮೇಲೆ ಹೆಚ್ಚಿನ ನಿರೀಕ್ಷೆ ಇರುವುದು ನಿಜ. ಅಂತೆಯೇ ಸಿನಿಮಾ ನಿರೀಕ್ಷೆ ಮುಟ್ಟುವಲ್ಲಿ ಯಶಸ್ಸು ಕಂಡಿದೆ. ಈ ಚಿತ್ರವನ್ನು ರಾಜಮೌಳಿಯ ಬಾಹುಬಲಿ ಚಿತ್ರಕ್ಕೆ ಹೋಲಿಕೆ ಮಾಡಲು ಸಾಧ್ಯವೇ ಆಗಿಲ್ಲ. ಇದು ತನ್ನದೇ ಪ್ರತ್ಯೇಕತೆಯಲ್ಲಿ ನಿರ್ಮಾಣ ಆಗಿದೆ. ಹಾಗಾಗಿ ಚಿತ್ರದ ಬಗ್ಗೆ ಹೆಚ್ಚಾಗಿ ಎಲ್ಲೂ ಕೂಡ ನೆಗೆಟಿಟವ್ ಕಮೆಂಟ್‌ಗಳು ಕೇಳಿ ಬಂದಿಲ್ಲ.
ಈ ಚಿತ್ರದ ರಿಲೀಸ್‌ಗೂ ಮುನ್ನವೇ ಚಿತ್ರ ಕಲೆಕ್ಷನ್ ಬಗ್ಗೆ ಹೆಚ್ಚಿನ ಲೆಕ್ಕಾಚಾರಗಳು ಹುಟ್ಟಿ ಕೊಂಡಿದ್ದವು. ಆದರೆ ಈಗ RRR ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಎನ್ನುವ ಬಗ್ಗೆ ಮಾಹಿತಿ ಹೊರ ಬಿದ್ದಿದೆ. ಬಾಕ್ಸ್ಆಫೀಸ್‌ನಲ್ಲಿ RRR ಮೊದಲ ದಿನ ದೊಡ್ಡ ಮಟ್ಟದ ದಾಖಲೆ ಬರೆದಿದೆ. ವರದಿಯ ಪ್ರಕಾರ RRR ಚಿತ್ರದ ಮೊದಲ ದಿನ ವಿಶ್ವದಾದ್ಯಂತ ಒಟ್ಟಾರೆ 260 ಕೋಟಿ. ಎಲ್ಲೆಲ್ಲಿ ಎಷ್ಟು ಗಳಿಕೆ ಮಾಡಿದೆ ಎನ್ನುವುದನ್ನು ಮುಂದೆ ಓದಿ.

RRR ತೆಕ್ಕೆಗೆ 260 ಕೋಟಿ!
ನಿರ್ದೇಶಕ ರಾಜಮೌಳಿ ನಿರ್ದೇಶನ, ರಾಮ್ ಚರಣ್, ಜೂ.ಎನ್‌ಟಿಆರ್ ಅಭಿನಯ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಇಷ್ಟು ಸಾಕು RRR ದೊಡ್ಡ ಮಟ್ಟದ ಮೊತ್ತವನ್ನು ಬಾಕ್ಸಾಫೀಸ್‌ನಲ್ಲಿ ಕಲೆ ಹಾಕಲು. RRR ಮಾರ್ಚ್ 25 ರಂದು ರಿಲೀಸ್ ಆಗಿದೆ. ಬಾಕ್ಸ್ ಆಫೀಸ್‌ನಲ್ಲಿ ಗುಡುಗು ಸದ್ದು ಮಾಡುತ್ತಿರುವ ಈ ಚಿತ್ರ ಮೊದಲ ದಿನವೇ 200 ಕೋಟಿಯ ಗಡಿ ದಾಟಿದೆ. ಇದು ನಿರೀಕ್ಷೆಯನ್ನು ಮೀರಿಸಿದ ಕಲೆಕ್ಷನ್. ವಿಶ್ವಾದ್ಯಂತ RRR ಮೊದಲ ದಿನದ ಬಾಕ್ಸಾಫೀಸ್ ಗಳಿಕೆ 260 ಕೋಟಿ ಆಗಿದೆ ಎಂದು ಅಮದಾಜಿಸಲಾಗಿದೆ.
Recommended Video


ಆಂಧ್ರ, ತೆಲಂಗಾಣದಲ್ಲಿ 120 ಕೋಟಿ ಗಳಿಗೆ!
RRR ಚಿತ್ರದಲ್ಲಿ ಇಬ್ಬರು ದೊಡ್ಡ ಸ್ಟಾರ್ ನಟರು ಇದ್ದಾರೆ. ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್ ಇಬ್ಬರಿಗೂ ದೊಡ್ಡ ಅಭಿಮಾನಿ ಬಳಗ ಇದೆ. ಇವರ ಚಿತ್ರಗಳಿಗೂ ಸಾಕಷ್ಟು ಪ್ರೇಕ್ಷಕರಿದ್ದಾರೆ. ಹಾಗಾಗಿ ಇಬ್ಬರೂ ಒಂದೇ ಚಿತ್ರದಲ್ಲಿ ಒಟ್ಟಿಗೆ ಎಂಟ್ರಿ ಕೊಟ್ಟಿರುವುದೂ ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಈ ಚಿತ್ರ ಆಂಧ್ರ ಮತ್ತು ತೆಲಂಗಾಣ ಸೇರಿ 120 ಕೋಟಿ ಗಳಿಕೆ ಮಾಡಿದೆ ಹೇಳಲಾಗಿದೆ.

ಕರ್ನಾಟದಲ್ಲಿ RRR ಬಾಚಿದ್ದು ಎಷ್ಟು?
ಇನ್ನು ಆಂಧ್ರ ಮತ್ತು ತೆಲಂಗಾಣವನ್ನು ಬಿಟ್ಟು ತಮಿಳುನಾಡಿನಲ್ಲಿ ಸುಮಾರು ರೂ 10 ಕೋಟಿ ಗಳಿಸಿದರೆ, ಕರ್ನಾಟಕ ಮತ್ತು ಕೇರಳದಲ್ಲಿ ಕ್ರಮವಾಗಿ ರೂ 14 ಕೋಟಿ ಮತ್ತು ರೂ 4 ಕೋಟಿ ಗಳಿಸಿದೆ. ಆದರೆ ಮುಖ್ಯವಾಗಿ ಈ ಚಿತ್ರ ನಾರ್ತ್‌ನಲ್ಲಿ ಎಷ್ಟು ಗಳಿಸಿದೆ ಎನ್ನುವ ಕುತೂಹಕ್ಕೂ ತೆರೆ ಬಿದ್ದಿದೆ. RRR ಹಿಂದಿ ಅವತರಣಿಕೆ ಮೊದಲ ದಿನ 25 ಕೋಟಿ ರೂ ಸಂಗ್ರಹಿಸ ಮಾಡಿದೆ. ಇನ್ನುಳಿದಂತೆ ಚಿತ್ರಕ್ಕೆ ಓವರ್ಸೀಸ್‌ನಲ್ಲಿ 75 ಕೋಟಿ ರೂ ಗಳಿಸಿದೆ ಎಂದು ವರದಿ ಆಗಿದೆ. ಹಾಗಾಗಿ ಚಿತ್ರದ ಮೊದಲ ದಿನದ ಒಟ್ಟಾರೆ ಕಲೆಕ್ಷನ್ 260 ಕೋಟಿ ರೂ ಆಗಿದೆ.

RRR ಚಿತ್ರದ ಪ್ಯಾನ್ ಇಂಡಿಯಾ ಕಲೆಕ್ಷನ್ ಲೆಕ್ಕಾರ!
ಆಂಧ್ರ, ತೆಲಂಗಾಣ: Rs 120 ಕೋಟಿಗೂ ಅಧಿಕ
ತಮಿಳುನಾಡು: Rs 10 Crore
ಹಿಂದಿ: Rs 25 Crore
ಕರ್ನಾಟಕ: Rs 14 ಕೊಟಿಗೂ ಅಧಿಕ
ಕೇರಳ: Rs 4 ಕೋಟಿಗೂ ಅಧಿಕ
ಓವರ್‌ಸೀಸ್: Rs 75 ಕೋಟಿಗೂ ಅಧಿಕ
ಒಟ್ಟಾರೆ ಗಳಿಕೆ: Rs 260 Crore
ನಟ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಮತ್ತು ಕೊಮರಂ ಭೀಮ್ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ನಡೆದ ಕಥೆ ಇದಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ದಿನಗಳ ಕಾಲ್ಪನಿಕ ಕಥೆಯಾಗಿದೆ. ಬಾಲಿವುಡ್ ನಟರಾದ ಅಜಯ್ ದೇವಗನ್ ಮತ್ತು ಆಲಿಯಾ ಭಟ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.


Click it and Unblock the Notifications











