For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್ ವಿದೇಶಿ ಚಿತ್ರೀಕರಣ ಮುಕ್ತಾಯ: ರಿಲೀಸ್ ಬಗ್ಗೆ ಸಿಕ್ಕ ಸುಳಿವು ಏನು?

  |

  ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದ ವಿದೇಶಿ ಚಿತ್ರೀಕರಣ ಮುಕ್ತಯವಾಗಿದೆ. ಈ ಮೂಲಕ ರಾಜಮೌಳಿಯ ಐತಿಹಾಸಿಕ ಚಿತ್ರದ ಟಾಕಿ ಪೋಷನ್ ಸಂಪೂರ್ಣವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವು ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿಯಿದೆ ಎಂದು ತಿಳಿದು ಬಂದಿದೆ. ರಷ್ಯಾ, ಉಕ್ರೇನ್‌ನ ವಿದೇಶಿ ಶೆಡ್ಯೂಲ್ ಪೂರ್ಣಗೊಂಡ ಹಿನ್ನೆಲೆ ಆರ್‌ಆರ್‌ಆರ್ ಚಿತ್ರತಂಡ ಸೆಟ್‌ನಲ್ಲಿ ಕೇಕ್ ಕತ್ತರಿಸಿ ಖುಷಿ ಹಂಚಿಕೊಂಡರು. ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಆಗಸ್ಟ್ ಮೊದಲ ವಾರದಲ್ಲಿ ಯೂರೋಪ್‌ಗೆ ತೆರಳಿದ್ದ ಆರ್‌ಆರ್‌ಆರ್ ಚಿತ್ರತಂಡ ಹದಿನೈದು ದಿನಗಳ ಶೆಡ್ಯೂಲ್ ಯಶಸ್ವಿಯಾಗಿ ಮುಗಿಸಿದೆ. ಶೂಟಿಂಗ್ ಮುಕ್ತಾಯಗೊಂಡ ಹಿನ್ನೆಲೆ ನಟ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ಹೈದರಾಬಾದ್‌ ಏರ್‌ಪೋರ್ಟ್‌ಗೆ ಬಂದಿಳಿದಿರುವ ಫೋಟೋಗಳು ವೈರಲ್ ಆಗಿದೆ. ಆಗಸ್ಟ್ 18 ರಂದು ಎನ್‌ಟಿಆರ್ ಬಂದರು. ಆಗಸ್ಟ್ 19 ರಂದು ರಾಮ್ ಚರಣ್ ತೇಜ ಬಂದಿಳಿದಿದ್ದಾರೆ. ಮುಂದೆ ಓದಿ....

  'ದೋಸ್ತಿ' ಹಾಡು ಟ್ರೆಂಡಿಂಗ್

  'ದೋಸ್ತಿ' ಹಾಡು ಟ್ರೆಂಡಿಂಗ್

  ಇತ್ತೀಚಿಗಷ್ಟೆ ಆರ್‌ಆರ್‌ಆರ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ದೋಸ್ತಿ ಹೆಸರಿನಲ್ಲಿ ಬಂದಿದ್ದ ಈ ಹಾಡು ಸಖತ್ ಟ್ರೆಂಡ್ ಆಗಿದೆ. ಐದು ಭಾಷೆಗಳಲ್ಲಿ ಈ ಹಾಡು ಮೂಡಿ ಬಂದಿದ್ದು, ಇದೊಂದು ರೀತಿ ಪ್ರಮೋಷನಲ್ ಹಾಡಿನ ರೀತಿ ಬಳಕೆ ಮಾಡಲಾಗುತ್ತಿದೆ. ಎಂಎಂ ಕೀರವಾಣಿ ಸಂಗೀತ ನಿರ್ದೇಶಿಸಿದ್ದು, ಐದು ಭಾಷೆಯಲ್ಲಿ ಐದು ಜನ ಗಾಯಕರು ದೋಸ್ತಿ ಹಾಡಿಗೆ ಧ್ವನಿಯಾಗಿದ್ದಾರೆ.

  ರಾಜಮೌಳಿ ಸಿನಿಮಾ ಸ್ಪೆಷಲ್: ಜೂ ಎನ್‌ಟಿಆರ್ ಐಡಿ ಕಾರ್ಡ್ ವೈರಲ್ರಾಜಮೌಳಿ ಸಿನಿಮಾ ಸ್ಪೆಷಲ್: ಜೂ ಎನ್‌ಟಿಆರ್ ಐಡಿ ಕಾರ್ಡ್ ವೈರಲ್

  ರಿಲೀಸ್ ದಿನಾಂಕ ಘೋಷಣೆ ಮಾಡಬಹುದು

  ರಿಲೀಸ್ ದಿನಾಂಕ ಘೋಷಣೆ ಮಾಡಬಹುದು

  ಆರ್‌ಆರ್ಆರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಸದ್ಯದ ಮಾಹಿತಿ ಪ್ರಕಾರ, ಟಾಕಿ ಪೋಷನ್ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಸಹ ನಡೆಯುತ್ತಿದೆ. ಎರಡು ಭಾಷೆಯಲ್ಲಿ ಡಬ್ಬಿಂಗ್ ಮುಗಿದಿದೆ ಎನ್ನಲಾಗಿದೆ. ಚಿತ್ರದ ಬಿಡುಗಡೆ ಬಗ್ಗೆ ಸದ್ಯಕ್ಕೆ ಅಧಿಕೃತವಾದ ಮಾಹಿತಿ ಇಲ್ಲ. ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್ ಚಿತ್ರ ತೆರೆಗೆ ಬರತ್ತಾ ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿರುವ ಚಿತ್ರತಂಡ ಹೊಸದಾಗಿ ರಿಲೀಸ್ ದಿನಾಂಕ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

  ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ

  ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ

  ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಅವರ ಸುತ್ತ ಕಥೆ ಮಾಡಲಾಗಿದ್ದು, ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450 ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ.

  ಯುರೋಪ್‌ಗೆ ಹಾರಿದ ರಾಜಮೌಳಿ 'RRR' ತಂಡ; ಕಾರಣವೇನು?ಯುರೋಪ್‌ಗೆ ಹಾರಿದ ರಾಜಮೌಳಿ 'RRR' ತಂಡ; ಕಾರಣವೇನು?

  ಶಂಕರ್ ಜೊತೆ ರಾಮ್ ಚರಣ್

  ಶಂಕರ್ ಜೊತೆ ರಾಮ್ ಚರಣ್

  ಆರ್‌ಆರ್‌ಆರ್‌ ಸಿನಿಮಾದ ಜೊತೆ ಜೊತೆಯಲ್ಲಿ ಚಿರಂಜೀವಿ ನಟಿಸಿರುವ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ನಟಿಸಿದ್ದರು. ಈಗ ಶಂಕರ್ ನಿರ್ದೇಶನದಲ್ಲಿ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ತೊಡಗಿಕೊಳ್ಳಲಿದ್ದಾರೆ. ಮತ್ತೊಂದೆಡೆ ಜೂನಿಯರ್ ಎನ್‌ಟಿಆರ್ ಸಹ ಆರ್‌ಆರ್‌ಆರ್ ಮುಗಿಸಿ ಪ್ರಶಾಂತ್ ನೀಲ್ ಹಾಗೂ ತ್ರಿವಿಕ್ರಮ ಶ್ರೀನಿವಾಸ್ ಜೊತೆ ಸಿನಿಮಾ ಮಾಡಬೇಕಿದೆ. ಈ ಮಧ್ಯೆ ಕೌನ ಬನೇಗಾ ಕರೋಡ್‌ಪತಿ ತೆಲುಗು ವರ್ಷನ್ ನಿರೂಪಣೆ ಮಾಡ್ತಿದ್ದಾರೆ.

  English summary
  RRR movie foreign schedule wrap up. Only patch works left to be completed. Release date announcement soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X