For Quick Alerts
  ALLOW NOTIFICATIONS  
  For Daily Alerts

  ಅಬ್ಬಾ! 'ಆರ್‌ಆರ್‌ಆರ್' ಮೇಕಿಂಗ್‌ ಅದ್ಭುತ: ಬಿಡುಗಡೆ ದಿನಾಂಕದಲ್ಲಿ ಬದಲಾವಣೆಯಿಲ್ಲ

  |

  ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ತೆಲುಗಿನ 'ಆರ್‌ಆರ್‌ಆರ್'. 'ಬಾಹುಬಲಿ'ಯ ಭಾರಿ ದೊಡ್ಡ ಯಶಸ್ಸಿನ ಬಳಿಕ ರಾಜಮೌಳಿ ಕೈಗೆತ್ತಿಕೊಂಡಿರುವ ಈ ಸಿನಿಮಾವನ್ನು 'ಬಾಹುಬಲಿ'ಗಿಂತಲೂ ಉತ್ತಮವಾಗಿ ತೆರೆಗೆ ತರಲು ಸಕಲ ಯತ್ನಗಳನ್ನು ಮಾಡಿದ್ದಾರೆ.

  ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಇಬ್ಬರು ನಟಿಸಿರುವ ಈ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಚಿತ್ರತಂಡವು ಬಿಡುಗಡೆ ಮಾಡಿದ್ದು, ಮೇಕಿಂಗ್ ವಿಡಿಯೋದಿಂದಲೇ ಸಿನಿಮಾ ಎಷ್ಟು ಅದ್ಭುತವಾಗಿ, ಅದ್ಧೂರಿಯಾಗಿ ಇರಬಹುದೆಂದು ಸುಲಭವಾಗಿ ಊಹಿಸಬಹುದಾಗಿದೆ.

  ದೊಡ್ಡ ಚಿತ್ರತಂಡ, ವೈರ್‌ಗಳು, ರೋಫ್‌ಗಳು, ಸ್ಟಂಟ್‌ ಮ್ಯಾನ್‌ಗಳ ಸಾಹಸಗಳು, ಫ್ಯಾಕ್ಟರಿಯಲ್ಲಿ ಕೆಲಸ ಮಾಡುವಂತೆ ಕೆಲಸ ಮಾಡುತ್ತಿರುವ ವಸ್ತ್ರ ವಿನ್ಯಾಸಕರು ಮತ್ತು ತಂಡ, ಬಂದೂಕುಗಳ ದೊಡ್ಡ ಉಗ್ರಾಣ, ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಶ್ರಮ. ಶ್ರೆಯಾ ಶಿರಿನ್, ಆಲಿಯಾ ಭಟ್ ಸೌಂದರ್ಯ, ದೊಡ್ಡ ಸಂಖ್ಯೆ ವಿದೇಶಿ ನಟರು ಒಂದೇ ಎರಡೇ ಮೇಕಿಂಗ್ ವಿಡಿಯೋದಲ್ಲಿ ಸಿನಿಮಾಕ್ಕೆ ಚಿತ್ರತಂಡ ಹಾಕಿರುವ ಶ್ರಮದ ಜೊತೆಗೆ ಚಿತ್ರತಂಡದ ಪರಿಚಯವೂ ಆಗಿದೆ.

  ಹಲವು ವಿಷಯಗಳು ಮೇಕಿಂಗ್ ವಿಡಿಯೋದಲ್ಲಿವೆ

  ಹಲವು ವಿಷಯಗಳು ಮೇಕಿಂಗ್ ವಿಡಿಯೋದಲ್ಲಿವೆ

  ಚಿತ್ರತಂಡದ ಪ್ರಮುಖರ ಜೊತೆಗಿನ ರಾಜಮೌಳಿ ಮೀಟಿಂಗ್, ಮಿನಿಯೇಚರ್‌ ಶೂಟ್‌ಗಳು, ಪೋಷಕ ನಟರ ಶ್ರಮ, ಯುದ್ಧದ ದೃಶ್ಯಗಳು, ಬೈಕ್ ಸ್ಟಂಟ್‌ಗಳು, ಅದರ ಹಿಂದಿನ ಶ್ರಮ ಹೀಗೆ ಹಲವು ವಿಷಯಗಳನ್ನು 'ಆರ್‌ಆರ್‌ಆರ್' ಮೇಕಿಂಗ್ ವಿಡಿಯೋ ಒಳಗೊಂಡಿದೆ.

  ಅಕ್ಟೋಬರ್ 13ರಂದು ತೆರೆಗೆ

  ಅಕ್ಟೋಬರ್ 13ರಂದು ತೆರೆಗೆ

  'ಆರ್ಆರ್ಆರ್' ಸಿನಿಮಾವು ಅಕ್ಟೋಬರ್ 13 ರಂದು ಬಿಡುಗಡೆ ಆಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು. ಕೊರೊನಾ ಲಾಕ್‌ಡೌನ್ ಆದ ಕಾರಣ ಚಿತ್ರ ಬಿಡುಗಡೆ ದಿನಾಂಕ ಮುಂದೆ ಹೋಗಲಿದೆ ಎಂಬ ಸುದ್ದಿ ಹರಡಿತ್ತು, ಆದರೆ ಅದನ್ನು ನಿರಾಕರಿಸಿರುವ ಚಿತ್ರತಂಡ ಅಕ್ಟೋಬರ್ 13ರಂದೇ ಸಿನಿಮಾವನ್ನು ತೆರೆಗೆ ತರುವುದಾಗಿ ಘೋಷಿಸಿದೆ.

  ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಕತೆ

  ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಕತೆ

  'ಆರ್‌ಆರ್‌ಆರ್‌' ಸಿನಿಮಾವು ತೆಲುಗು ರಾಜ್ಯಗಳ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಂ ಜೀವನ, ಹೋರಾಟಗಳ ಕುರಿತಾಗಿದೆ. ಸಿನಿಮಾದ ಟೀಸರ್ ಈಗಾಗಲೇ ಬಿಡುಗಡೆ ಆಗಿದ್ದು, ಟೀಸರ್‌ಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ. ಡಿವಿವಿ ದಯಾನಂದ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು 300 ಕೋಟಿ ಬಜೆಟ್ ಅನ್ನು ಸಿನಿಮಾಕ್ಕೆ ಹೂಡಲಾಗಿದೆ.

  ದಲಿತ ಯುವಕನಿಗೆ ಮನಸ್ಸಿಗೆ ಬಂದಂತೆ ಹೊಡೆದ ದರ್ಶನ್ ಅಂಡ್ ಗ್ಯಾಂಗ್ | Filmibeat Kannada
  ಬಹುದೊಡ್ಡ ತಾರಾಗಣ ಸಿನಿಮಾಕ್ಕೆ ಇದೆ

  ಬಹುದೊಡ್ಡ ತಾರಾಗಣ ಸಿನಿಮಾಕ್ಕೆ ಇದೆ

  'ಆರ್‌ಆರ್‌ಆರ್' ಸಿನಿಮಾದಲ್ಲಿ ಜೂ.ಎನ್‌ಟಿಆರ್, ರಾಮ್ ಚರಣ್ ತೇಜ ಜೊತೆಗೆ ಬಾಲಿವುಡ್ ನಟ ಅಜಯ್ ದೇವಗನ್, ನಟಿ ಆಲಿಯಾ ಭಟ್ ಸಹ ನಟಿಸಿದ್ದಾರೆ. ಜೊತೆಗೆ ಶ್ರೆಯಾ ಶಿರಿನ್, ಒಲಿವಿಯಾ ಮೋರಿಸ್, ಅಲಿಸನ್ ಡೂಡಿ, ರೇಯ್ ಸ್ಟೀವ್‌ಸನ್, ರಾಹುಲ್ ರಾಮಕೃಷ್ಣ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಕೀರವಾಣಿ ಸಂಗೀತ ನೀಡಿದ್ದಾರೆ.

  English summary
  RRR movie making video released. Rajamouli is delivering yet another grand movie. RRR will hit theaters on October 13 as announced earlier.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X