ಆಸ್ಕರ್‌ಗೆ 'RRR'! ಇಲ್ಲಿದೆ ಇತರೆ ಸಂಭವನೀಯ ಸಿನಿಮಾಗಳ ಪಟ್ಟಿ

ವಿಶ್ವದಲ್ಲಿಯೇ ಅತಿ ಹೆಚ್ಚು ಸಿನಿಮಾಗಳು ಭಾರತ ಚಿತ್ರರಂಗದಲ್ಲಿ ನಿರ್ಮಾಣಗೊಳ್ಳುತ್ತವೆ. ಆದರೆ ಈವರೆಗೆ ಒಮ್ಮೆ ಸಹ ಭಾರತೀಯ ಸಿನಿಮಾವೊಂದು ಆಸ್ಕರ್ ಗೆದ್ದಿಲ್ಲ. ಕೆಲವು ಭಾರತೀಯರು ಆಸ್ಕರ್ ಗೆದ್ದಿದ್ದಾರಾದರೂ ಭಾರತೀಯ ಸಿನಿಮಾಕ್ಕೆ ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಆಸ್ಕರ್‌ ಲಭಿಸಿಲ್ಲ! ಆಸ್ಕರ್ ಗೆಲ್ಲುವುದಿರಲಿ ನಾಮಿನೇಷನ್ ಹಂತಕ್ಕೂ ಸಹ ಏರಿಲ್ಲ.

ಆದರೆ ಕಳೆದ ಬಾರಿಯ ಆಸ್ಕರ್‌ನಲ್ಲಿ ಭಾರತದ ಕೆಲವು ಸಿನಿಮಾಗಳು ಉತ್ತಮ ಪ್ರದರ್ಶನ ತೋರಿವೆ. ತಮಿಳಿನ 'ಕೂಳಂಗಲ್' ಸಿನಿಮಾ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದರೆ, 'ಜೈ ಭೀಮ್' ಸಹ ಆಸ್ಕರ್‌ಗೆ ಪ್ರವೇಶ ಪಡೆದಿದ್ದಲ್ಲದೆ ಒಂದು ಹಂತ ಮೇಲೇರಿ ನಿರೀಕ್ಷೆಯನ್ನು ಹುಟ್ಟಿಸಿತ್ತು. ಆಸ್ಕರ್‌ ತಮ್ಮ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ 'ಜೈ ಭೀಮ್' ಸಿನಿಮಾದ ದೃಶ್ಯವನ್ನು ಸಹ ಹಂಚಿಕೊಂಡಿದ್ದು ಹೆಮ್ಮೆಯ ವಿಚಾರ.

ಆದರೆ ಈ ಬಾರಿ, ಅಂದರೆ 2023 ರ ಆಸ್ಕರ್‌ನಲ್ಲಿ ಭಾರತ ಸಿನಿಮಾಗಳಿಗೆ ಅವಕಾಶ ಇನ್ನಷ್ಟು ಹೆಚ್ಚಿರಲಿದೆ ಎನ್ನಲಾಗುತ್ತಿದೆ. ಅಂತರಾಷ್ಟ್ರೀಯ ಸಿನಿಮಾ ವಿಶ್ಲೇಷಕರ ಪ್ರಕಾರ ಭಾರತೀಯ ಸಿನಿಮಾರಂಗವು ಸರಿಯಾದ ಸಿನಿಮಾವನ್ನು 'ಆಸ್ಕರ್‌'ನ ಸರಿಯಾದ ವಿಭಾಗದಲ್ಲಿ ಸ್ಪರ್ಧೆಗೆ ಕಳಿಸುವಲ್ಲಿ ಮೊದಲಿನಿಂದಲೂ ಎಡವುತ್ತಿದೆ. ಆದರೆ ಈ ಬಾರಿ ಒಂದೊಳ್ಳೆ ಅವಕಾಶ ಇದೆ ಎಂದಿದ್ದಾರೆ.

RRR Movie May Enter Oscars 2023, Here Is The Probable List

ಕೆಲವು ಟ್ರೇಡ್ ವಿಶ್ಲೇಷಕರ ಪ್ರಕಾರ 'RRR' ಸಿನಿಮಾಕ್ಕೆ ಆಸ್ಕರ್‌ ಗೆಲ್ಲುವ ಅರ್ಹತೆ ಇದೆಯಂತೆ. ಈ ಭಾರಿ ಆಸ್ಕರ್‌ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಗೆಲ್ಲುವ ಅರ್ಹತೆ 'RRR' ಸಿನಿಮಾಕ್ಕೆ ಇದೆ. RRR ಸಿನಿಮಾವು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ನಾಮಿನೇಶನ್ ಹಂತಕ್ಕೆ ಏರಲಿದೆ, ಪ್ರಶಸ್ತಿ ಗೆಲ್ಲುವ ಅವಕಾಶವೂ ಇದೆ ಎಂದಿದ್ದಾರೆ.

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಮಾರ್ಚ್ 25 ರಂದು ಬಿಡುಗಡೆ ಆಗಿ ಸೂಪರ್-ಡೂಪರ್ ಹಿಟ್ ಆಗಿದೆ. ಸಿನಿಮಾವನ್ನು ಹಾಲಿವುಡ್‌ನ ಜನಪ್ರಿಯ ಸಿನಿಮಾಕರ್ಮಿಗಳು ಸಹ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ ಸಿಇಓ ಸಹ 'RRR' ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು.

2023 ರಲ್ಲಿ ಆಸ್ಕರ್‌ನ ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸಲಿರುವ ಸಂಭಾವ್ಯ ಸಿನಿಮಾಗಳ ಪಟ್ಟಿ ಇಲ್ಲಿದೆ...

'ಬೋತ್ ಸೈಡ್ಸ್ ಆಫ್‌ ದಿ ಬ್ಲೇಡ್' (ಫ್ರ್ಯಾನ್ಸ್)

'ಕಾರ್ಸೇಜ್' (ಆಸ್ಟ್ರಿಯಾ)

'ಡಿಸಿಶನ್ ಟು ಲೀವ್' (ಕೊರಿಯಾ)

'ಹೋಲಿ ಸ್ಪೈಡರ್' (ಡೆನ್ಮಾರ್ಕ್)

'ಒನ್ ಫೈನ್ ಮಾರ್ನಿಂಗ್' (ಫ್ರ್ಯಾನ್ಸ್)

'RRR' (ಭಾರತ)

'ಟೋರಿ ಮತ್ತು ಲೋಕಿತಾ' (ಬೆಲ್ಜಿಯಂ)

'ಉತಾಮಾ' (ಬೊಲಿವಿಯಾ)

'ಅಲ್ಕಾರಸ್' (ಸ್ಪೇನ್)

'ಅರ್ಜಂಟೈನಾ, 1985' (ಅರ್ಜಂಟೈನಾ)

'ಬಾರ್ಡೊ' (ಮೆಕ್ಸಿಕೊ)

'ಬ್ರೋಕರ್' (ಕೊರಿಯಾ)

'ಕ್ಲೋಸ್' (ಬೆಲ್ಜಿಯಂ)

'ದಿ ಏಯ್ಟ್ ಮೌಂಟೇನ್ಸ್' (ಇಟಲಿ)

'ಇಒ' (ಪೋಲಂಡ್)

'ಗರ್ಲ್‌ ಪಿಕ್ಚರ್' (ಐಸ್‌ಲೆಂಡ್)

'ಮದರ್ ಆಂಡ್ ಸನ್' (ಫ್ರಾನ್ಸ್)

'ದಿ ಕ್ವೈಟ್ ಗರ್ಲ್' (ಐಸ್‌ಲೆಂಡ್)

'ಆರ್‌ಎನ್‌ಎಂ' (ರೊಮೇನಿಯಾ)

More from Filmibeat

English summary
RRR movie may enter Oscars 2023, here is the probable list of the movies. Trade analyst said RRR may will Oscars in foreign movie category.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X