ಆರ್‌ಆರ್‌ಆರ್‌ ಜೋಡಿಯ ಸ್ಟೈಲಿಶ್‌ ಅವತಾರ: ಬರಲಿದೆ ಮತ್ತೊಂದು ಭರ್ಜರಿ ಹಾಡು!

ಭಾರತೀಯ ಸಿನಿಮಾ ರಂಗದ ಬಹು ನಿರೀಕ್ಷಿತ ಸಿನಿಮಾ ಆರ್‌ಆರ್‌ಆರ್‌ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಮತ್ತೊಂದು ಹೊಸ ಅಪ್ಡೇಟ್ ನೀಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ ಚಿತ್ರತಂಡ. ಆರ್‌ಆರ್‌ಆರ್‌ ಚಿತ್ರದ ಹೊಸದೊಂದು ಪೋಸ್ಟರ್ ರಿಲೀಸ್ ಆಗಿದೆ. ಇದು ರಿಲೀಸ್ ಆಗಲಿರುವ ಮುಂದಿನ ಹಾಡಿನ ಪೋಸ್ಟರ್. ಈ ಪೋಸ್ಟರ್ ನಲ್ಲಿ ನಟ ರಾಮ್‌ ಚರಣ್ ತೇಜ ಮತ್ತು ಜೂನಿಯರ್‌ ಎನ್‌ಟಿಆರ್ ಇಬ್ಬರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಸಿನಿಮಾ ರಿಲೀಸ್ ಹತ್ತಿರ ಬರುತ್ತಿದ್ದಂತೆ ಚಿತ್ರದ ಬಗ್ಗೆ ಒಂದೊಂದೇ ಅಂಶವನ್ನು ಚಿತ್ರ ತಂಡ ಬಿಡುಗಡೆ ಮಾಡುತ್ತಿದೆ. ಈ ಹಾಡು ರಿಲೀಸ್ ಆಗುವ ದಿನಾಂಕವನ್ನು ಪೋಸ್ಟರ್ ಮೂಲಕ ಚಿತ್ರ ತಂಡ ಪ್ರಕಟ ಮಾಡಿದೆ. ತೆಲುಗಿನಲ್ಲಿ "ನಾಟು ನಾಟು'' ಎನ್ನುವ ಸಾಹಿತ್ಯ ಇದೆ. ಅದೇ ಕನ್ನಡದಲ್ಲಿ "ಹಳ್ಳಿ ನಾಡು" ಎನ್ನುವಂತಹ ಸಾಹಿತ್ಯ ಇರಲಿದೆ. ಆರ್ಆರ್‌ಆರ್‌ ಸಿನಿಮಾ ಬಹು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ತೆಲುಗು, ಕನ್ನಡ, ತಮಿಳು, ಹಿಂದಿ, ಮಲಯಾಳಂ ನಲ್ಲಿ ಒಟ್ಟಿಗೆ ರಿಲೀಸ್‌ ಆಗುತ್ತಿದೆ. ಹಾಗಾಗಿ ಚಿತ್ರದ ಈ ವಿಶೇಷ ಹಾಡು ಕೂಡ 5 ಭಾಷೆಯಲ್ಲಿ ಒಟ್ಟಿಗೆ ರಿಲೀಸ್‌ ಆಗಲಿದೆ. ಇದೇ ನವೆಂಬರ್ 10ರಂದು ಈ ಹಾಡು ರಿಲೀಸ್ ಆಗುತ್ತಿದೆ. ಈ ವಿಚಾರವನ್ನು ಚಿತ್ರ ತಂಡ ಪೋಸ್ಟರ್ ಮೂಲಕ ಹಂಚಿಕೊಂಡಿದೆ.

ಆರ್‌ಆರ್‌ಆರ್‌ ಸಿನಿಮಾವನ್ನು ನೋಡಲು ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ. ರಾಜಮೌಳಿ ನಿರ್ದೇಶನದಲ್ಲಿ ಬಾಹುಬಲಿ ನಂತರ ಬರುತ್ತಿರುವ ಸಿನಿಮಾ ಇದು. ಹಾಗಾಗಿ ನಿರೀಕ್ಷೆ ಹೆಚ್ಚಾಗಿದೆ. ಆದರೆ ಇದು ಯಾವುದೋ ಒಂದು ಭಾಷೆಗೆ ಸೀಮಿತ ಆಗಿರುವ ಸಿನಿಮಾ ಅಲ್ಲ. ಬಾಹುಬಲಿ ಆನಂತರ ರಾಜಮೌಳಿ ನಿರ್ದೇಶನಕ್ಕೆ ವಿಶ್ವದಾದ್ಯಂತ ಅಭಿಮಾನಿಗಳು ಹುಟ್ಟಿ ಕೊಂಡಿದ್ದಾರೆ. ಈಗ ರಾಜಮೌಳಿ ಯಾವುದೇ ಸಿನಿಮಾ ಮಾಡಿದರು ಅದನ್ನು ಜಾಗತಿಕವಾಗಿ ಇರುವ ಪ್ರೇಕ್ಷಕರಿಗಾಗಿಯೇ ಮಾಡಬೇಕಾಗುತ್ತದೆ. ಹಾಗಾಗಿ ಆರ್‌ಆರ್‌ಆರ್‌ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಈಗಾಗಲೇ ಚಿತ್ರದ ಟೀಸರ್ ಮತ್ತು ರಿಲೀಸ್ ಆಗಿರುವ ಹಾಡು ಸಿನಿಮಾದ ತಿರುಳನ್ನು ಬಿಚ್ಚಿಟ್ಟಿವೆ. ಜೊತೆಗೆ ಇತ್ತೀಚೆಗೆ ಚಿತ್ರದ ಮೇಕಿಂಗ್ ಕೂಡ ರಿಲೀಸ್‌ ಮಾಡಿದೆ ಚಿತ್ರ ತಂಡ. ಈ ಮೇಕಿಂಗ್‌ ಸಿನಿಮಾ ಯಾವ ರೇಂಜಿಗೆ ಇರಲಿದೆ ಎಂಬುದನ್ನು ಹೇಳಿತ್ತು.

RRR Movie New Song To Be Release On November 10th

ಚಿತ್ರದಲ್ಲಿರುವ ಅದ್ದೂರಿ ತಾರಾಗಣ ನಿರೀಕ್ಷೆಗೆ ಮತ್ತೊಂದು ಕಾರಣ ಅಂತ ಹೇಳಬಹುದು. ರಾಮ್‌ಚರಣ್, ಜೂನಿಯರ್ ಎನ್‌ಟಿಆರ್‌, ಆಲಿಯಾ ಭಟ್, ಅಜಯ್ ದೇವಗನ್‌ ಹೀಗೆ ದೊಡ್ಡ ದೊಡ್ಡ ಹೆಸರುಗಳು ಚಿತ್ರ ತಂಡದಲ್ಲಿದೆ. ಈಗಾಗಲೇ ಆಲಿಯಾ ಭಟ್ ಮತ್ತು ಅಜಯ್ ದೇವಗನ್ ಲುಕ್‌ ಮತ್ತು ಪಾತ್ರದ ಪರಿಚಯ ಕೂಡ ಚಿತ್ರತಂಡ ಮಾಡಿಕೊಟ್ಟಿದೆ.

ಇದು ಸ್ವಾತಂತ್ರ ಹೋರಾಟಗಾರ ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ್ ಕುರಿತಾದ ಕಥೆ. ಈ ಇಬ್ಬರೂ ಮಹಾ ನಾಯಕರು ಒಂದಾಗಿದ್ದರೆ ಹೋರಾಟ ಹೇಗೆ ಸಾಗುತ್ತಿತ್ತು ಎನ್ನುವ ನಿಟ್ಟಿನಲ್ಲಿ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಅಪ್ಪನ ಕಥೆಗೆ ಜೀವ ತುಂಬಿ ಬೆಳ್ಳಿ ಪರದೆ ಮೇಲೆ ತರುಲು ಸಿದ್ಧವಾಗಿದ್ದಾರೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಬಾಹುಬಲಿ ಸಿನಿಮಾ ಅದ್ದೂರಿ ಯಶಸ್ಸು ಕಂಡು ಭಾರತೀಯ ಸಿನಿಮಾ ರಂಗಕ್ಕೆ ಹೆಗ್ಗಳಿಕೆ ತಂದು ಕೊಟ್ಟಿತ್ತು. ರಾಜಮೌಳಿ ಒಂದು ಸಿನಿಮಾವನ್ನು ಮಾಡುತ್ತಾರೆ ಎಂದರೆ ಅದು ಯಶಸ್ಸು ಕಾಣುವುದು ಖಂಡಿತ ಎನ್ನುವಂತಹ ಅಚಲ ನಂಬಿಕೆ ಚಿತ್ರರಂಗದಲ್ಲಿ ಮನೆಮಾಡಿದೆ. ಹಾಗಾಗಿಯೇ ಸ್ಟಾರ್ ನಟರು ರಾಜಮೌಳಿಯ ಹಿಂದೆ ಬಿದ್ದಿದ್ದಾರೆ. ಇಂದು ಟಾಲಿವುಡ್‌ನಲ್ಲಿ ಸ್ಟಾರ್ ಗಿರಿಯನ್ನು ಹೊತ್ತು ಕೊಂಡಿರುವ ನಟರಲ್ಲಿ ಹಲವರಿಗೆ ರಾಜಮೌಳಿ ಅವರೇ ಅದೃಷ್ಟ ರೇಖೆಯನ್ನು ಎಳೆದಿರುವುದು. ಬಾಹುಬಲಿ ಸಿನಿಮಾದಿಂದ ಪ್ರಭಾಸ್ ಚಿತ್ರ ರಂಗದಲ್ಲಿ ಯಾಶಸ್ಸಿನ ಉತ್ತುಂಗಕ್ಕೆ ಏರದ್ದಾರೆ. ಈ ಚಿತ್ರದ ಮೂಲಕ ರಾಮ್‌ಚರಣ್ ಮತ್ತು ಝೂನಿಯರ್‌ ಎನ್‌ಟಿಆರ್‌ ಕೂಡ ತಮ್ಮ ಸಿನಿಮಾ ಜರ್ನಿಯಲ್ಲಿ ಹೊಸ ಮೈಲಿಗಲ್ಲು ಸಾಧಿಸುವುದು ಪಕ್ಕ.

ಬೆಂಕಿ ನೀರಿನ ಪ್ರತಿ ರೂಪದಂತೆ ಕಾಣುತ್ತಿದ್ದ ರಾಮ್‌ಚರಣ್ ಮತ್ತು ಎನ್‌ಟಿಆರ್ ಈಗ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರೆಟ್ರೋ ಉಡುಪು ತೊಟ್ಟು ಇಬ್ಬರು ಈ ಹಾಡಿನಲ್ಲಿ ಮಸ್ತ್‌ ಹೆಜ್ಜೆ ಹಾಕಿದ್ದಾರಂತೆ. ಇದು ಸಿನಿಮಾದ ಅದ್ದೂರಿ ಡಾನ್ಸ್‌ ನಂಬರ್ ಎಂದೇ ಹೇಳಲಾಗುತ್ತಿದೆ. ರಾಮ್‌ ಚರಣ್ ಮತ್ತು ಜೂನಿಯರ್ ಎನ್‌ಟಿಆರ್‌ ಇಬ್ಬರೂ ಈ ಹಾಡಿನಲ್ಲಿ ಅದ್ಭುತವಾಗಿ ಡಾನ್ಸ್‌ ಮಾಡಿದ್ದಾರಂತೆ. ಇದೇ ನವೆಂಬರ್‌ 10ರಂದು ಹಾಡು ರಿಲೀಸ್ ಆಗುತ್ತಿದೆ. ಇನ್ನು ಆರ್ಆರ್ಆರ್ ಸಿನಿಮಾ 2022 ಜನವರಿ 7ಕ್ಕೆ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿದೆ. ಚಿತ್ರ ರಿಲೀಸ್ ದಿನಕ್ಕಾಗಿ ಅದೆಷ್ಟೋ ಅಭಿಮಾನಿಗಳು, ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
Actor Raam Charan And Jr Ntr Looks Stylish In RRR Movie New Song Poster,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X