For Quick Alerts
  ALLOW NOTIFICATIONS  
  For Daily Alerts

  Big News: ಆರ್‌ಆರ್‌ಆರ್ ರಿಲೀಸ್ ದಿನಾಂಕ ಲಾಕ್: ತಲೆಬಿಸಿ ಹೆಚ್ಚಿಸಿದ ರಾಜಮೌಳಿ?

  |

  ಎಸ್ ಎಸ್ ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್ ಸಿನಿಮಾದ ವಿದೇಶಿ ಚಿತ್ರೀಕರಣ ಮುಕ್ತಯವಾಗಿದೆ. ಜೊತೆಗೆ ಜೂನಿಯರ್ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ಅವರ ಪೋಷನ್ ಸಹ ಪೂರ್ಣಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.

  ಕೆಲವು ಸಣ್ಣ-ಪುಟ್ಟ ಕೆಲಸಗಳು ಮಾತ್ರ ಬಾಕಿಯಿದ್ದು, ಶೀಘ್ರದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರಂತೆ. ಈ ನಡುವೆ ಆರ್‌ಆರ್‌ಆರ್ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಹೊಸ ಸುದ್ದಿ ಹೊರಬಿದ್ದಿದೆ. ಈ ವರ್ಷ ಸಿನಿಮಾ ತೆರೆಗೆ ಬರಲ್ಲ. ಆದರೆ, ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ ಎಂಬ ಸುದ್ದಿ ವೈರಲ್ ಆಗಿದೆ.

  ಸಂಕ್ರಾಂತಿ ವಾರ್‌ಗೆ ಮತ್ತೊಂದು ಮೆಗಾ ಸಿನಿಮಾ ಎಂಟ್ರಿಸಂಕ್ರಾಂತಿ ವಾರ್‌ಗೆ ಮತ್ತೊಂದು ಮೆಗಾ ಸಿನಿಮಾ ಎಂಟ್ರಿ

  ಸಂಕ್ರಾಂತಿ ಹಬ್ಬಕ್ಕೆ ಆರ್‌ಆರ್‌ಆರ್ ಬಿಡುಗಡೆ ಮಾಡಲು ನಿರ್ಧರಿಸಿದ್ದೆ ಆದರೆ ಈಗಾಗಲೇ ಘೋಷಿಸಿರುವ ಚಿತ್ರಗಳು ಮುಂದೂಡುವ ಸಾಧ್ಯತೆ ಇದೆ. ಸಂಕ್ರಾಂತಿ ಹಬ್ಬದ ವಿಶೇಷವಾಗಿ ತೆಲುಗು ಮತ್ತು ತಮಿಳಿನ ಸ್ಟಾರ್ ನಟರ ಚಿತ್ರಗಳು ರಿಲೀಸ್ ಆಗುತ್ತಿದೆ. ಈಗ ಆರ್‌ ಅರ್‌ ಆರ್ ಸಹ ಅದೇ ದಿನದ ಮೇಲೆ ಕಣ್ಣಿಟ್ಟಿದೆ ಎಂಬ ಸುದ್ದಿ ವರದಿಯಾಗಿದೆ.

  ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರಗಳು

  ತೆಲುಗು ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ', ಪ್ರಭಾಸ್ ಅಭಿನಯದ 'ರಾಧೆಶ್ಯಾಮ್', ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಭೀಮ್ಲಾ ನಾಯ್ಕ್, ವೆಂಕಟೇಶ್ ನಟನೆಯ 'ಎಫ್ 3 'ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಪ್ರಕಟಿಸಿಕೊಂಡಿದೆ. ತಮಿಳಿನಿಂದ 'ವಾಲಿಮೈ' ಸಿನಿಮಾ ರೇಸ್‌ನಲ್ಲಿದೆ. ಇದರ ಜೊತೆ ಆರ್‌ಆರ್‌ಆರ್ ಎನ್ನುವ ಸುದ್ದಿ ಈಗ ಚರ್ಚೆಯಲ್ಲಿದೆ.

  ಆರ್‌ಆರ್‌ಆರ್ ವಿದೇಶಿ ಚಿತ್ರೀಕರಣ ಮುಕ್ತಾಯ: ರಿಲೀಸ್ ಬಗ್ಗೆ ಸಿಕ್ಕ ಸುಳಿವು ಏನು?ಆರ್‌ಆರ್‌ಆರ್ ವಿದೇಶಿ ಚಿತ್ರೀಕರಣ ಮುಕ್ತಾಯ: ರಿಲೀಸ್ ಬಗ್ಗೆ ಸಿಕ್ಕ ಸುಳಿವು ಏನು?

  ಅಂದ್ಹಾಗೆ, ಆರ್‌ಆರ್ಆರ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಟಾಕಿ ಪೋಷನ್ ಚಿತ್ರೀಕರಣ ಮುಗಿದಿದ್ದು, ಡಬ್ಬಿಂಗ್ ಸಹ ನಡೆಯುತ್ತಿದೆ. ಎರಡು ಭಾಷೆಯಲ್ಲಿ ಡಬ್ಬಿಂಗ್ ಮುಗಿದಿದೆ ಎನ್ನಲಾಗಿದೆ. ಈ ಹಿಂದೆ ಪ್ರಕಟಿಸಿದಂತೆ ಅಕ್ಟೋಬರ್ 13ಕ್ಕೆ ಆರ್‌ಆರ್‌ಆರ್ ಚಿತ್ರ ತೆರೆಗೆ ಬರತ್ತಾ ಎನ್ನುವುದರ ಬಗ್ಗೆಯೂ ಸ್ಪಷ್ಟತೆ ಇಲ್ಲ. ಕೋವಿಡ್ ಮೂರನೇ ಅಲೆಯ ಭೀತಿಯಲ್ಲಿರುವ ಚಿತ್ರತಂಡ ಹೊಸದಾಗಿ ರಿಲೀಸ್ ದಿನಾಂಕ ಪ್ರಕಟಿಸುವ ಸಾಧ್ಯತೆ ಹೆಚ್ಚಿದೆ.

  RRR movie Planning to Release On sankranthi 2022?

  ಸ್ವಾತಂತ್ರ್ಯ ಹೋರಾಟಗಾರ ಕೊಮ್ಮರನ್ ಭೀಮ್ ಮತ್ತು ಅಲ್ಲುರಿ ಸೀತಾರಾಮರಾಜು ಅವರ ಸುತ್ತ ಕಥೆ ಮಾಡಲಾಗಿದ್ದು, ಜೂ ಎನ್‌ಟಿಆರ್ ಮತ್ತು ರಾಮ್ ಚರಣ್ ತೇಜ ನಟಿಸಿದ್ದಾರೆ. ಬಾಲಿವುಡ್ ಖ್ಯಾತ ನಟ ಅಜಯ್ ದೇವಗನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೀತಾ ಪಾತ್ರದಲ್ಲಿ ಹಿಂದಿ ನಟಿ ಅಲಿಯಾ ಭಟ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಹಾಲಿವುಡ್ ಕಲಾವಿದರು ಚಿತ್ರದಲ್ಲಿದ್ದಾರೆ. ಡಿವಿವಿ ದಾನಯ್ಯ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಸುಮಾರು 450 ಕೋಟಿಗೂ ಅಧಿಕ ಬಜೆಟ್ ಆಗಿದೆ ಎಂದು ಹೇಳಲಾಗಿದೆ.

  English summary
  SS Rajamouli's RRR movie planning to release on sankranthi 2022?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X