ಬೆಂಗಳೂರು ಅರಮನೆ ಮೈದಾನದಲ್ಲಿ RRR ಅದ್ಧೂರಿ ಕಾರ್ಯಕ್ರಮ: ಸಿ.ಎಂ ಉದ್ಘಾಟನೆ!

ಭಾರತೀಯ ಬಹು ನಿರೀಕ್ಷಿತ ಚಿತ್ರ ಆರ್ಆರ್ಆರ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಹೊಸ ವರ್ಷದ ಹರ್ಷ ಹೆಚ್ಚಿಸಲು RRR ಚಿತ್ರ ತೆರೆಗೆ ಬರ್ತಿದೆ. ಜನವರಿ 7ರಂದು ಚಿತ್ರ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಚಿತ್ರ ರಿಲೀಸ್ ಹತ್ತಿರ ಆಗುತ್ತಿದ್ದ ಕಾರಣ, RRR ಚಿತ್ರದ ಪ್ರಚಾರ ಕೆಲಸಗಳು ಭರದಿಂದ ಸಾಗಿದೆ. ಮತ್ತೊಮ್ಮೆ ಬೆಂಗಳೂರಿಗೆ ಬರುತ್ತಿದೆ RRR ಟೀಮ್.

ಇತ್ತೀಚೆಗೆ ಚಿತ್ರದ ಟ್ರೇಲರ್‌ ರಿಲೀಸ್‌ ಸಮಯದಲ್ಲಿ ಆರ್‌ಆರ್‌ಆರ್‌ ಚಿತ್ರತಂಡ ಬೆಂಗಳೂರಿಗೆ ಆಗಮಿಸಿತ್ತು. ಸುದ್ಧಿಗೋಷ್ಠಿ ನಡೆಸಿ ಕಾರ್ಯಕ್ರಮದಲ್ಲಿ ಚಿತ್ರದ ಬಗ್ಗೆ ಮಾತನಾಡಿತ್ತು ಚಿತ್ರ ತಂಡ. ಆರ್‌ಆರ್‌ಆರ್‌ ಪ್ಯಾನ್‌ ಇಂಡಿಯಾ ಸಿನಿಮಾ. ಹಾಗಾಗಿ ಭಾರತದಾದ್ಯಂತ ಸುತ್ತಿ ಚಿತ್ರವನ್ನು ಪ್ರಚಾರ ಮಾಡಲಾಗುತ್ತಿದೆ.

ಆರ್‌ಆರ್‌ಆರ್‌ ಕನ್ನಡದಲ್ಲೂ ರಿಲೀಸ್‌ ಆಗುತ್ತಿದೆ. ಹಾಗಾಗಿ ಕರ್ನಾಟದಲ್ಲೂ ಚಿತ್ರತಂಡ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿದೆ. ಈಗ ಮತ್ತೊಮ್ಮೆ ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮ ಮಾಡಲು ಆರ್‌ಆರ್‌ ಚಿತ್ರ ತಂಡ ತಯಾರಿ ನಡೆಸಿದೆ. ಹಾಗಿದ್ದರೆ ಈ ಕಾರ್ಯಕ್ರಮ ಎಲ್ಲಿ ಹೇಗೆ ನಡೆಯಲಿದೆ ಎನ್ನುವ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಬೆಂಗಳೂರಿನಲ್ಲಿ ನಡೆಯಲಿದೆ RRR ಅದ್ಧೂರಿ ಪ್ರೀ-ರಿಲಿಸ್ ಕಾರ್ಯಕ್ರಮ!

ಬೆಂಗಳೂರಿನಲ್ಲಿ ನಡೆಯಲಿದೆ RRR ಅದ್ಧೂರಿ ಪ್ರೀ-ರಿಲಿಸ್ ಕಾರ್ಯಕ್ರಮ!

ಆರ್‌ಆರ್‌ಆರ್‌ ಚಿತ್ರದ ಪ್ರೀ- ರಿಲೀಸ್ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ಸಕಲ ಸಿದ್ಧತೆ ನಡೆಯುತ್ತಿದೆ. ಜನವರಿ 2ರಂದು ಅದ್ಧೂರಿ ಕಾರ್ಯಮ ನಡೆಯಲಿದೆ. ಈ ಕಾರ್ಯಮದಲ್ಲಿ ಆರ್‌ಆರ್‌ಆರ್‌ ಇಡೀ ಚಿತ್ರ ತಂಡ ಭಾಗಿ ಆಗಲಿದೆ. ಜೊತೆಗೆ ಸ್ಯಾಂಡಲ್‌ವುಡ್‌ ಗಣ್ಯರು ಕೂಡ ಭಾಗಿ ಆಗಲಿದ್ದಾರೆ.

ಒಂದೇ ವೇದಿಕೆಯಲ್ಲಿ ಯಶ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ಉಪೇಂದ್ರ!

ಒಂದೇ ವೇದಿಕೆಯಲ್ಲಿ ಯಶ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ಉಪೇಂದ್ರ!

ಬೆಂಗಳೂರಿನಲ್ಲಿ ನಡೆಯಲಿರುವ ಆರ್‌ಆರ್‌ಆರ್‌ ಪ್ರೀ-ರಿಲೀಸ್‌ ಕಾರ್ಯಕ್ರಮಕ್ಕೆ ಕನ್ನಡದ ಸ್ಟಾರ್‌ ನಟರು ಸಾಥ್ ನೀಡಲಿದ್ದಾರೆ. ನಟ ಶಿವರಾಜ್‌ಕುಮಾರ್, ಉಪೇಂದ್ರ, ಯಶ್, ಧ್ರುವ ಸರ್ಜಾ ಆರ್ಆರ್ಆರ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳು. ಇನ್ನು ಈ ಕಾರ್ಯಕ್ರಮವನ್ನು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಆದರೆ ಚಿತ್ರ ತಂಡ ಈ ವಿಚಾರವನ್ನು ಇನ್ನೂ ಅಧಿಕೃತಗೊಳಿಸಿಲ್ಲ.

ಕೇರಳ, ಚೆನ್ನೈ ಬಳಿಕ ಕರ್ನಾಟಕದಲ್ಲಿ ಆರ್‌ಆರ್‌ಆರ್‌!

ಕೇರಳ, ಚೆನ್ನೈ ಬಳಿಕ ಕರ್ನಾಟಕದಲ್ಲಿ ಆರ್‌ಆರ್‌ಆರ್‌!

ಈಗಾಗಲೇ ಕೇರಳ ಮತ್ತು ಚೆನ್ನೈನಲ್ಲಿ ಆರ್‌ಆರ್‌ಆರ್‌ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮ ನೆರವೇರಿದೆ. ಈಗ ಕರ್ನಾಟಕದತ್ತ ಚಿತ್ರ ತಂಡ ಮುಖ ಮಾಡಿದೆ. ಬೆಂಗಳೂರಿನಲ್ಲಿ ಅದ್ಧೂರಿ ಕಾರ್ಯಕ್ರಮ ಮಾಡಲು ಚಿತ್ರ ತಂಡ ಮುಂದಾಗಿದೆ. ಕಳೆದ ಬಾರಿ ಕೇವಲ ಸುದ್ದಿಗೋಷ್ಠಿ ಮಾಡಲಾಗಿತ್ತು. ಈಗ ಅದ್ಧೂರಿ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಮತ್ತಷ್ಟು ಹತ್ತಿರ ಆಗುವ ಯೋಜನೆ ಹೊಂದಿದೆ ಆರ್‌ಆರ್‌ಆರ್‌.

ಪ್ರಚಾರಕ್ಕಾಗಿ ಕೋಟಿ, ಕೋಟಿ ಖರ್ಚು!

ಪ್ರಚಾರಕ್ಕಾಗಿ ಕೋಟಿ, ಕೋಟಿ ಖರ್ಚು!

ಮೂಲಗಳ ಪ್ರಕಾರ 'ಆರ್‌ಆರ್‌ಆರ್‌' ಸಿನಿಮಾದ ಪ್ರಚಾರಕ್ಕಾಗಿಯೇ ಸುಮಾರು 20 ಕೋಟಿ ರುಪಾಯಿ ಖರ್ಚು ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೈದರಾಬಾದ್‌ನ ಪ್ರೀ ರಿಲೀಸ್ ಕಾರ್ಯಕ್ರಮದ ಖರ್ಚು ಇನ್ನೂ ಮೂರು-ನಾಲ್ಕು ಕೋಟಿ ಆಗಲಿದೆ. ಅಲ್ಲಿಗೆ ಸರಿ ಸುಮಾರು 25 ಕೋಟಿ ಹಣ ಕೇವಲ ಪ್ರಚಾರಕ್ಕೆ ಖರ್ಚಾದಂತಾಗುತ್ತದೆ ಆಗುತ್ತದೆ.

More from Filmibeat

English summary
RRR Movie Pre-Release Event Take Place In Bengaluru At January 2nd, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X