ಬೆಂಗಳೂರು ಬದಲಿಗೆ ಕರ್ನಾಟಕದ ಬೇರೆ ನಗರದಲ್ಲಿ 'RRR' ಅದ್ಧೂರಿ ಕಾರ್ಯಕ್ರಮ!

ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'RRR' ಬಿಡುಗಡೆ ದಿನಾಂಕ ಸನಿವಾಗುತ್ತಿದೆ. ಈ ಮೊದಲು ಫೆಬ್ರವರಿ 7 ರಂದು ಬಿಡುಗಡೆ ಆಗಬೇಕಿದ್ದ ಸಿನಿಮಾ ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲ್ಪಟ್ಟಿದೆ.

ಫೆಬ್ರವರಿ 07 ರಂದು ಸಿನಿಮಾ ಬಿಡುಗಡೆ ಯೋಜನೆ ಹಾಕಿದ್ದಾಗ ಸಿನಿಮಾ ಪ್ರಚಾರ ಜೋರಾಗಿ ನಡೆಸಲಾಗುತ್ತಿತ್ತು. ರಾಮ್ ಚರಣ್, ಜೂ ಎನ್‌ಟಿಆರ್, ಆಲಿಯಾ ಭಟ್, ರಾಜಮೌಳಿ ಇತರರು ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದರು. ಟಿವಿ ಸಂದರ್ಶನ, ಯೂಟ್ಯೂಬ್ ಸಂದರ್ಶನ ಇತರೆಗಳು ಮುಗಿದಿದ್ದವು.

ಸಿನಿಮಾದ ಪ್ರಿ ರಿಲೀಸ್ ಇವೆಂಟ್ ಅನ್ನು ದೊಡ್ಡದಾಗಿ ಆಯೋಜಿಸಿ ಅದರ ದಿನಾಂಕ ಸಹ ಪ್ರಕಟ ಮಾಡಲಾಗಿತ್ತು. ಬೆಂಗಳೂರಿನಲ್ಲಿಯೂ ಕೆವಿಎನ್ ಸಹಯೋಗದೊಂದಿಗೆ ಸಿನಿಮಾದ ಪ್ರೀ ರಿಲೀಸ್ ಇವೆಂಟ್ ಆಯೋಜಿಸಲಾಗಿತ್ತು. ಅಷ್ಟರಲ್ಲಿ ಕೊರೊನಾ ಕಾರಣಕ್ಕೆ ಸಿನಿಮಾದ ಬಿಡುಗಡೆ ಮುಂದೂಡಲಾಗಿ, ಕಾರ್ಯಕ್ರಮ ರದ್ದಾಗಿತ್ತು. ಇದೀಗ ಮತ್ತೆ ಕರ್ನಾಟಕದಲ್ಲಿ ಪ್ರೀ ರಿಲೀಸ್ ಇವೆಂಟ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಆದರೆ ಈ ಬಾರಿ ಬೆಂಗಳೂರಿನ ಬದಲಿಗೆ ರಾಜ್ಯದ ಬೇರೆ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ.

ಬೆಂಗಳೂರು ಬದಲಿಗೆ ಚಿಕ್ಕಬಳ್ಳಾಪುರ

ಬೆಂಗಳೂರು ಬದಲಿಗೆ ಚಿಕ್ಕಬಳ್ಳಾಪುರ

'RRR' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವು ಬೆಂಗೂರಿನ ಬದಲಿಗೆ ಚಿಕ್ಕಬಳ್ಳಾಪುರದಲ್ಲಿ ನಡೆಸಲು ಚಿತ್ರತಂಡ ಯೋಜಿಸಿದೆ. ಚಿಕ್ಕಬಳ್ಳಾಪುರವು ತೆಲುಗು ರಾಜ್ಯಕ್ಕೆ ಗಡಿಯಾಗಿದ್ದು ಚಿಕ್ಕಬಳ್ಳಾಪುರದ ಸುತ್ತ ಮುತ್ತ ಶಿಡ್ಲಘಟ್ಟ, ಗೌರಿಬಿದನೂರು, ಚಿಂತಾಮಣಿ, ದೇವನಹಳ್ಳಿ, ಬಾಗೇಪಲ್ಲಿ, ಗುಡಿಬಂಡೆ, ಕೋಲಾರ ಈ ಭಾಗಗಳಲ್ಲಿ ತೆಲುಗು ಪ್ರಭಾವ ಹೆಚ್ಚಿದೆ. ಜೊತೆಗೆ ತೆಲುಗು ರಾಜ್ಯಗಳ ಗಡಿ ಭಾಗಕ್ಕೂ ಚಿಕ್ಕಬಳ್ಳಾಪುರ ಹತ್ತಿರವಾಗಿರುವ ಕಾರಣ ಅವರನ್ನೂ ಕಾರ್ಯಕ್ರಮಕ್ಕೆ ಸೆಳೆಯಬಹುದೆಂಬ ಲೆಕ್ಕಾಚಾರದಿಂದ 'RRR' ಚಿತ್ರತಂಡ ಈ ಲೆಕ್ಕಾಚಾರ ಹಾಕಿದೆ.

ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ

ಅದ್ಧೂರಿ ಪ್ರೀ ರಿಲೀಸ್ ಕಾರ್ಯಕ್ರಮ

'RRR' ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ ಆಗುತ್ತಿದ್ದು, ಇದೀಗ ಎರಡನೇ ಹಂತದ ಪ್ರಚಾರ ಆರಂಭವಾಗಿದೆ. ಈ ಬಾರಿ ಟಿವಿ, ಯೂಟ್ಯೂಬ್ ಸಂದರ್ಶನಗಳು, ಪತ್ರಕರ್ತರೊಂದಿಗೆ ಸಂವಾದದಂಥ ಕಾರ್ಯಕ್ರಮಗಳ ಬದಲಾಗಿ ಅದ್ಧೂರಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿತ್ರತಂಡ ನಿರ್ಧರಿಸಿದೆ. ಚಿಕ್ಕಬಳ್ಳಾಪುರದಲ್ಲಿ 'RRR' ಪ್ರೀ ರಿಲೀಸ್ ಕಾರ್ಯಕ್ರಮ ಮಾರ್ಚ್ 20 ರಂದು ನಡೆಯುವ ಸಾಧ್ಯತೆ ಇದೆ.

ಹಲವು ನಗರಗಳಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ

ಹಲವು ನಗರಗಳಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮ

ಚಿಕ್ಕಬಳ್ಳಾಪುರ ಮಾತ್ರವೇ ಅಲ್ಲದೆ ತೆಲಂಗಾಣ ರಾಜ್ಯದ ಹೈದರಾಬಾದ್‌ ನಗರದಲ್ಲಿ ಹಾಗೂ ಆಂಧ್ರದ ವಿಶಾಕಪಟ್ಟಣಂನಲ್ಲಿ ಅದ್ಧೂರಿಯಾಗಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ. ತಮಿಳುನಾಡಿದ ಚೆನ್ನೈ, ಕೇರಳದ ತಿರುವನಂತಪುರಂ, ದುಬೈನಲ್ಲಿ, ಮುಂಬೈನಲ್ಲಿ ಇನ್ನೂ ಕೆಲವು ನಗರಗಳಲ್ಲಿ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮವು ಅದ್ಧೂರಿಯಾಗಿ ನೆರವೇರಲಿದೆ.

ಮಾರ್ಚ್ 25 ಕ್ಕೆ ಸಿನಿಮಾ ಬಿಡುಗಡೆ

ಮಾರ್ಚ್ 25 ಕ್ಕೆ ಸಿನಿಮಾ ಬಿಡುಗಡೆ

'RRR' ಸಿನಿಮಾವು ತೆಲುಗು ರಾಜ್ಯಗಳ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಜೀವನ ಕುರಿತಾದ ಸಿನಿಮಾ ಆಗಿದ್ದು, ಕೋಮರಂ ಭೀಮ್ ಆಗಿ ಜೂ ಎನ್‌ಟಿಆರ್, ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ನಟಿಸಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾದಲ್ಲಿ ಆಲಿಯಾ ಭಟ್, ಅಜಯ್ ದೇವಗನ್, ಶ್ರೆಯಾ ಘೋಷಾಲ್ ಸಹ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳ ಹೂಡಿರುವುದು ಡಿವಿವಿ ದಯಾನಂದ್. ಸಂಗೀತ ನೀಡಿರುವುದು ಎಂಎಂ ಕೀರವಾಣಿ ಸಿನಿಮಾವು ಮಾರ್ಚ್ 25 ರಂದು ಬಿಡುಗಡೆ ಆಗಲಿದೆ.

More from Filmibeat

English summary
RRR movie pre release event will organized in Chikkaballapura instead of Bengaluru. Chikkaballapura is near to Andhra Pradesh and had huge Telugu influence.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X