RRR ಸಿನಿಮಾ ನಿರ್ಮಾಪಕರಿಗೆ ಹೃದಯ ಸಮಸ್ಯೆ: ಅಡಕತ್ತರಿಯಲ್ಲಿ ಸಿನಿಮಾ?

ಜ್ಯೂನಿಯರ್ ಎನ್‌ಟಿಆರ್, ರಾಮ್‌ ಚರಣ್ ತೇಜಾ ನಟಿಸುತ್ತಿರುವ ರಾಜಮೌಳಿ ನಿರ್ದೇಶಿಸುತ್ತಿರುವ ಆರ್‌ಆರ್ಆರ್‌ ಸಿನಿಮಾ ಭಾರತದಾದ್ಯಂತ ಸಿನಿ ಪ್ರೇಕ್ಷಕರು ಕುತೂಹಲದಿಂದ ಎದುರು ನೋಡುತ್ತಿರುವ ಸಿನಿಮಾಗಳಲ್ಲಿ ಒಂದು.

Recommended Video

Puneeth Rajkumar sweats out at home with these heavy workout | Power stars Powerful workout

ಕೊರೊನಾ ಲಾಕ್‌ಡೌನ್‌ ನಿಂದಾಗಿ ಪ್ರಸ್ತುತ RRR ಸಿನಿಮಾದ ಚಿತ್ರೀಕರಣ ನಿಂತಿದೆ. ಆದರೆ ಈ ಸಿನಿಮಾಕ್ಕೆ ಮತ್ತೊಂದು ಆಘಾತ ಎದುರಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ.

ಬೃಹತ್ ಬಜೆಟ್‌ನ ಈ ಸಿನಿಮಾವನ್ನು ಖ್ಯಾತ ನಿರ್ಮಾಪಕ ಡಿವಿವಿ ದಾನಯ್ಯ ನಿರ್ಮಿಸುತ್ತಿದ್ದು, ದಾನಯ್ಯ ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದ್ದು, ಆಪರೇಷನ್‌ ಗೆ ಒಳಗಾಗಿದ್ದಾರೆ. ಇದು ಸಿನಿಮಾದ ಮೇಲೆ ಪರಿಣಾಮ ಬೀರುತ್ತದೆಯಾ? ಎಂಬ ಅನುಮಾನ ಮೂಡಿದೆ.

ಡಿವಿವಿ ದಾನಯ್ಯ ಅವರಿಗೆ ಹೃದಯ ಬೇನೆ

ಡಿವಿವಿ ದಾನಯ್ಯ ಅವರಿಗೆ ಹೃದಯ ಬೇನೆ

ಡಿವಿವಿ ದಾನಯ್ಯ ಅವರಿಗೆ ಕೆಲವು ದಿನಗಳ ಹಿಂದೆ ಹೃದಯ ಬೇನೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪೂರ್ಣ ಪರೀಕ್ಷೆಯ ಬಳಿಕ ಅವರಿಗೆ ಹೃದಯ ಸಮಸ್ಯೆ ಇದ್ದು, ಆಪರೇಷನ್ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ್ದರು.

ಹೃದಯ ಸಂಬಂಧಿ ಆಪರೇಷನ್ ಮಾಡಲಾಗಿದೆ

ಹೃದಯ ಸಂಬಂಧಿ ಆಪರೇಷನ್ ಮಾಡಲಾಗಿದೆ

ಅಂತೆಯೇ ದಾನಯ್ಯ ಅವರಿಗೆ ತಜ್ಞ ವೈದ್ಯರ ಸಮಕ್ಷಮದಲ್ಲಿ ಹೃದಯದ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಹೃದಯವು ಸೂಕ್ತವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಸ್ಟಂಟ್ ಅನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ದಾನಯ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ

ಹಲವು ಹಿಟ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ

1992 ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿರುವ ದಾನಯ್ಯ, ಶಿವಮಣಿ, ದೇಶಮುದುರು, ದುಬೈ ಸೀನು, ಓಯ್, ವರುಡು, ಜುಲೈ, ಕ್ಯಾಮೆರಾಮನ್ ಗಂಗ ತೋ ರಾಮ್‌ಬಾಬು, ನಾಯಕ್, ಬ್ರೂಸ್‌ ಲೀ, ನಿನ್ನು ಕೋರಿ, ಭರತ್ ಅನೆ ನೇನು, ವಿನಯ ವಿಧೇಯ ರಾಮ ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ಸಿನಿಮಾ ಮೇಲೆ ಯಾವುದೇ ಪರಿಣಾಮವಿಲ್ಲ

ಸಿನಿಮಾ ಮೇಲೆ ಯಾವುದೇ ಪರಿಣಾಮವಿಲ್ಲ

ಆರ್‌ಆರ್‌ಆರ್‌ ಸಿನಿಮಾ ಬಹುತಾರಾಗಣದ ಬಹು ಬಜೆಟ್‌ನ ಸಿನಿಮಾ ಆಗಿದ್ದು ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇದೆ. ದಾನಯ್ಯ ಅವರ ಆರೋಗ್ಯ ಪರಿಸ್ಥಿತಿ ಸಿನಿಮಾ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು ನಿರ್ಮಾಪಕರ ಆಪ್ತರು ಸ್ಪಷ್ಟಪಡಿಸಿದ್ದಾರೆ. ಲಾಕ್‌ಡೌನ್ ಮುಗಿದ ಕೂಡಲೇ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

More from Filmibeat

English summary
RRR movie producer DVV Danayya undergo heart surgery few days back. His close aids said his health in stable and it not affect on RRR movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X