twitter
    For Quick Alerts
    ALLOW NOTIFICATIONS  
    For Daily Alerts

    ಒಟಿಟಿಗೆ ಬಂದ ನಂತರ RRR ಸಿನಿಮಾ ಮತ್ತೆ ಥಿಯೇಟರ್‌ಗಳಲ್ಲಿ ರೀ-ರಿಲೀಸ್

    |

    ಭಾರತೀಯ ಚಿತ್ರರಂಗದಲ್ಲೇ ರಾಜಮೌಳಿ ನಿರ್ದೇಶನದ RRR ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಟಾಲಿವುಡ್‌ನ ಸೂಪರ್‌ ಸ್ಟಾರ್‌ಗಳಾದ ಜ್ಯೂನಿಯರ್ ಎನ್‌ಟಿಆರ್‌ ಹಾಗೂ ರಾಮ್‌ ಚರಣ್ ತೇಜ ಒಟ್ಟಾಗಿ ನಟಿಸುವ ಮೂಲಕ ಸಿನಿ ಪ್ರೇಕ್ಷರನ್ನು ರಂಜಿಸಿದ್ದರು. ಹೀಗಾಗಿ ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿತ್ತು.

    ರಾಜಮೌಳಿ ನಿರ್ದೇಶನ ಅಂದರೆ ಆ ಚಿತ್ರದಲ್ಲಿ ಏನಾದರೂ ಒಂದು ವಿಶೇಷತೆ ಇದ್ದೇ ಇರುತ್ತದೆ. ಹೀಗಾಗಿ ರಾಜಮೌಳಿ ಸಿನಿಪ್ರೇಕ್ಷಕರಿಗೆ ಎಲ್ಲೂ ನಿರಾಸೆಯಾಗದಂತೆ ಸಿನಿಮಾ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. RRR ಸಿನಿಮಾವೂ ಕೂಡ ನಿರೀಕ್ಷೆಗೂ ಮೀರಿ ಪ್ರೇಕ್ಷಕರ ಮನಮುಟ್ಟಿದೆ. ಹೀಗಾಗಿ ಬಾಕ್ಸಾಫೀಸ್‌ ಕಲೆಕ್ಷನ್ ಕೂಡ ಭರ್ಜರಿಯಾಗಿ ಸಿಕ್ಕಿದೆ.

    ಎರಡು ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ 'RRR': ಯಾವಾಗ? ಎಲ್ಲಿ?ಎರಡು ಒಟಿಟಿಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ 'RRR': ಯಾವಾಗ? ಎಲ್ಲಿ?

    ಸದ್ಯ ಸಿನಿಮಾ ರಿಲೀಸ್‌ ಆಗಿ 50 ದಿನಗಳೂ ಕಳೆದಿವೆ. ಹಾಗಿದ್ದರೂ ಕೂಡ ಸಿನಿಮಾದ ಕ್ರೇಜ್ ಕಡಿಮೆಯಾಗಿಲ್ಲ. ಇನ್ನು ಕೆಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶಗೊಳುತ್ತಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲೂ ಕೂಡ RRR ಸಿನಿಮಾಗೆ ಉತ್ತಮ ಸ್ಪಂದನೆ ಸಿಕ್ಕಿದೆ. ವಿದೇಶದಲ್ಲೂ RRR ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಈಗ ಇದೆ ಸಿನಿಮಾ ಬಗ್ಗೆ ಹೊಸದೊಂದು ವಿಷಯ ಹೊರಬಿದ್ದಿದ್ದು, ಅಮೆರಿಕದ ಚಿತ್ರಮಂದಿರಗಳಲ್ಲಿ ಮತ್ತೆ RRR ಸಿನಿಮಾ ರೀ- ರಿಲೀಸ್‌ ಆಗುತ್ತಿದೆ. ಸದ್ಯ ಈ ವಿಷಯ ಅಭಿಮಾನಿಗಳಲ್ಲಿ ಸಂತಸ ತಂದಿದೆ.

    ಎಲ್ಲರೂ 1000 ಕೋಟಿಯಲ್ಲಿ ಸಿಕ್ಕೊಂಡಿದ್ದು, ಕಥೆ-ನಟನೆ ಬಗ್ಗೆ ಯಾರೂ ಮಾತಾಡುತ್ತಿಲ್ಲ: ಮನೋಜ್ ಬಾಜಪೇಯಿ ಎಲ್ಲರೂ 1000 ಕೋಟಿಯಲ್ಲಿ ಸಿಕ್ಕೊಂಡಿದ್ದು, ಕಥೆ-ನಟನೆ ಬಗ್ಗೆ ಯಾರೂ ಮಾತಾಡುತ್ತಿಲ್ಲ: ಮನೋಜ್ ಬಾಜಪೇಯಿ

     ಅಮೆರಿಕದಲ್ಲೂ ಅಬ್ಬರಿಸಿದ್ದ RRR

    ಅಮೆರಿಕದಲ್ಲೂ ಅಬ್ಬರಿಸಿದ್ದ RRR

    RRR ಸಿನಿಮಾ ವಿಶ್ವದಾದ್ಯಂತ ಮಾರ್ಚ್ 18 ರಂದು ರಿಲೀಸ್‌ ಆಗಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿತ್ತು. ಅಮೆರಿಕದಲ್ಲೂ RRR ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಭಾರತೀಯ ಸಿನಿಮಾಗಳ ಪೈಕಿ ಅಮೆರಿಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ಸಿನಿಮಾ ಎನ್ನುವ ಖ್ಯಾತಿ RRR ಸಿನಿಮಾಗೆ ಸಿಕ್ಕಿತು. ಅಷ್ಟರ ಮಟ್ಟಿಗೆ ರಾಮ್‌ ಚರಣ್ ಹಾಗೂ ಜ್ಯೂನಿಯರ್ ಎನ್‌ಟಿಆರ್ ಅಭಿನಯ ಮೋಡಿ ಮಾಡಿತ್ತು. 'ಬಾಹುಬಲಿ 2' ಸಿನಿಮಾ ಅಮೆರಿಕದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿಕೊಂಡ ಮೊದಲ ಸಿನಿಮಾವಾಗಿದ್ದು, ಇದು ಕೂಡ ರಾಜಮೌಳಿ ನಿರ್ದೇಶನದ ಚಿತ್ರವಾಗಿರುವುದು ವಿಶೇಷ.

     100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ RRR ಸದ್ದು

    100ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ RRR ಸದ್ದು

    RRR ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿ 50 ದಿನಗಳೂ ಕಳೆದರೂ ಅಮೆರಿಕದಲ್ಲಿ ಇನ್ನು ಕೆಲವರಿಗೆ ಸಿನಿಮಾ ನೋಡಲು ಸಾಧ್ಯವಾಗಿರಲಿಲ್ಲ. 'ಕೆಜಿಎಫ್ 2' ಅಬ್ಬರದಿಂದಾಗಿ RRR ಎಲ್ಲಾ ಕಡೆ ಶೋ ಕೊಡಲು ಸಾಧ್ಯವಾಗಿರಲಿಲ್ಲ. ಸದ್ಯ ಈಗ RRR ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡದೆ ಮಿಸ್‌ ಮಾಡಿಕೊಂಡವರಿಗೆ ಚಿತ್ರತಂಡ ಸಿಹಿಸುದ್ದಿ ನೀಡಿದೆ. ಸಿನಿಮಾ ಮಿಸ್‌ ಮಾಡಿಕೊಂಡವರಿಗೋಸ್ಕರ ಮತ್ತೆ ಅಮೆರಿಕದ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ RRR ಚಿತ್ರವನ್ನು ರೀ-ರಿಲೀಸ್ ಮಾಡುತ್ತಿದೆ. ಜೂನ್ 1 ರ ರಾತ್ರಿ RRR ಸಿನಿಮಾ ಅಮೆರಿಕದಲ್ಲಿ ಮರು ಬಿಡುಗಡೆಯಾಗಲಿದೆ. ಒಟಿಟಿಯಲ್ಲಿ ರಿಲೀಸ್ ಆದ ಬಳಿಕ ಮತ್ತೆ ಥಿಯೇಟರ್‌ನಲ್ಲಿ ರೀ ರಿಲೀಸ್ ಆಗಲಿದೆ.

    RRR ಅಧಿಕೃತ ಖಾತೆ ಮೂಲಕ ಘೋಷಣೆ

    ಅಮೆರಿಕದಲ್ಲಿ ಮತ್ತೆ RRR ಸಿನಿಮಾವನ್ನು ಮರು ಬಿಡುಗಡೆ ಮಾಡುವುದಾಗಿ RRR ಅಧಿಕೃತ ಟ್ವಿಟರ್‌ನಲ್ಲಿ ಖಚಿತ ಪಡಿಸಿದೆ. ಈ ಕುರಿತು ಟ್ವೀಟ್ ಮಾಡಿರುವ ಚಿತ್ರತಂಡ ಅಮೆರಿಕದ ಜನತೆ ತೋರಿದ ಪ್ರೀತಿಗೆ ಧನ್ಯವಾದ. ಜೂನ್ 1 ರಂದು ಅಮೆರಿಕದ 100ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಮತ್ತೆ RRR ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ಬರೆದುಕೊಂಡಿದೆ. ಈಗಾಗಲೇ ಟಿಕೆಟ್ ಬುಕಿಂಗ್ ಆರಂಭವಾಗಿದ್ದು, ಬಹುತೇಕ ಟಿಕೆಟ್‌ಗಳು ಸೋಲ್ಡ್ ಆಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಸಿನಿಮಾ ನೋಡದೇ ಇರುವವರು ಮತ್ತೆ 3ಡಿ ಅವತರಣಿಕೆಯಲ್ಲಿರುವ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದಾರೆ.

     ಒಟಿಟಿಯಲ್ಲಿ ಬಂದ ಬಳಿಕ ಥಿಯೇಟರ್‌ಗೆ ಲಗ್ಗೆ

    ಒಟಿಟಿಯಲ್ಲಿ ಬಂದ ಬಳಿಕ ಥಿಯೇಟರ್‌ಗೆ ಲಗ್ಗೆ

    ಥಿಯೇಟರ್‌ನಲ್ಲಿ ಧೂಳೆಬ್ಬೆಸಿದ್ದ RRR ಸಿನಿಮಾ ಈಗ ಒಟಿಟಿ ಪ್ಲಾಟ್ ಫಾರ್ಮ್‌ಗೆ ಲಗ್ಗೆ ಇಡಲು ಸಜ್ಜಾಗಿದೆ. RRR ಸಿನಿಮಾ ಯಾವಾಗ ಒಟಿಟಿಗೆ ಬರುತ್ತೆ ಅಂತ ಅಭಿಮಾನಿಗಳು ಕಾದು ಕುಳಿತಿದ್ದರು. ಸದ್ಯ ಅಂತಹವರಿಗೆಲ್ಲಾ ಸಿಹಿ ಸುದ್ದಿ ಸಿಕ್ಕಿದ್ದು, ಜೂನಿಯರ್ ಎನ್‌ಟಿಆರ್ ಹುಟ್ಟುಹಬ್ಬದ ದಿನದಂದು, ಅಂದರೆ, ಮೇ 20 ರಂದು RRR ಸಿನಿಮಾ ಜೀ5 ಮೂಲಕ ಪ್ರಸಾರವಾಗಲಿದೆ. ಕನ್ನಡ, ಹಿಂದಿ ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಡಬ್‌ ಆಗಿರುವ ಈ ಸಿನಿಮಾ ಎಲ್ಲಾ ವರ್ಷನ್‌ಗಳಲ್ಲೂ ಮೇ 20ರಿಂದ ವೀಕ್ಷಣೆಗೆ ಸಿಗಲಿದೆ. ಇದಾದ ಬಳಿಕ ಜೂನ್ 1 ರಂದು ಅಮೆರಿಕದ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಸಿನಿಮಾ ಮರುಬಿಡುಗಡೆಯಾಗಲಿದೆ. ಈ ಮೂಲಕ ಮತ್ತೆ ಭರ್ಜರಿ ಕಲೆಕ್ಷನ್ ಮಾಡಿಕೊಳ್ಳುವ ಸಾಧ್ಯತೆ ಇದೆ.

    English summary
    RRR Film re-releaseing in america. This is Last chance for U.S. moviegoers to see RRR.
    Monday, May 16, 2022, 8:27
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X