For Quick Alerts
  ALLOW NOTIFICATIONS  
  For Daily Alerts

  ಪ್ರತಿಷ್ಠಿತ ಹಾಲಿವುಡ್ ಅವಾರ್ಡ್ ಗೋಲ್ಡನ್ ಗ್ಲೋಬ್ಸ್ ಗೆದ್ದ ಆರ್‌ಆರ್‌ಆರ್‌ನ 'ನಾಟು ನಾಟು' ಹಾಡು!

  |

  ಆರ್ ಆರ್ ಆರ್ ಚಿತ್ರದ ಪ್ರಶಸ್ತಿ ಬೇಟೆ ಮುಂದುವರಿದಿದೆ. ಇತ್ತೀಚೆಗಷ್ಟೆ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನು ಅತ್ಯುತ್ತಮ ಚಿತ್ರಕ್ಕಾಗಿ ಪಡೆದುಕೊಂಡಿದ್ದ ಆರ್ ಆರ್ ಆರ್ ಇದೀಗ ಹಾಲಿವುಡ್‌ನ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಹೌದು, ಚಿತ್ರದ ನಾಟು ನಾಟು ಹಾಡು ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿ ಅಡಿಯಲ್ಲಿ ಈ ಪ್ರಶಸ್ತಿಯನ್ನು ಗೆದ್ದಿದೆ.

  ಯುನೈಟೆಡ್ ಸ್ಟೇಟ್ಸ್‌ನ ಬೆವೆರ್ಲಿ ಹಿಲ್ಸ್‌ನಲ್ಲಿರುವ ಬೆವೆರ್ಲಿ ಹಿಲ್ಟನ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ ಎಸ್ ಎಸ್ ರಾಜಮೌಳಿ ಕುಟುಂಬ, ಜೂನಿಯರ್ ಎನ್‌ಟಿಆರ್ ಕುಟುಂಬ ಹಾಗೂ ರಾಮ್ ಚರಣ್ ಕುಟುಂಬ ಹಾಗೂ ಆರ್ ಆರ್ ಆರ್‌ನ ಇತರೆ ಸದಸ್ಯರು ಭಾಗವಹಿಸಿದ್ದರು. ಪ್ರಶಸ್ತಿಯನ್ನು ಹಾಡಿಗೆ ಸಂಗೀತ ಸಂಯೋಜಿಸಿದ್ದ ಎಂ ಎಂ ಕೀರವಾಣಿ ಸ್ವೀಕರಿಸಿದರು. ಈ ಮೂಲಕ ಆರ್ ಆರ್ ಆರ್ ಐತಿಹಾಸಿಕ ಸಾಧನೆಯನ್ನು ಮಾಡಿದೆ.


  ಇನ್ನು ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿ ಅಡಿಯಲ್ಲಿ ವೇರ್ ದ ಕ್ರಾಡಾಡ್ಸ್ ಸಿಂಗ್ ಚಿತ್ರದ 'ಕೆರೊಲಿನ', ಗ್ಯಲ್ಲೆರ್ಮೊ ಡೆಲ್ ಟೊರೊಸ್ ಪಿನೊಷಿಯೊ ಚಿತ್ರದ 'ಸಿಯೊ ಪಾಪ', ಟಾಪ್ ಗನ್ ಮ್ಯಾವೆರಿಕ್ ಚಿತ್ರದ 'ಹೋಲ್ಡ್ ಮೈ ಹ್ಯಾಂಡ್' ಹಾಗೂ ಬ್ಲಾಕ್ ಪ್ಯಾಂಥರ್ ವಕೆಂಡ ಫಾರ್‌ಎವರ್ ಚಿತ್ರದ 'ಲಿಫ್ಟ್ ಮಿ ಅಪ್' ಹಾಡುಗಳು ನಾಮಿನೇಟ್ ಆಗಿದ್ದವು. ಈ ಘಟಾನುಘಟಿ ಚಿತ್ರಗಳ ಹಾಡುಗಳನ್ನೇ ಹಿಂದಿಕ್ಕಿದ ನಾಟು ನಾಟು ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

  ನಾಟು ನಾಟು ಪ್ರಶಸ್ತಿಯನ್ನು ಗೆದ್ದಿದೆ ಎಂದು ಘೋಷಿಸಿದ ಕೂಡಲೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಸ್ ಎಸ್ ರಾಜಮೌಳಿ, ಎನ್‌ಟಿಆರ್, ರಾಮ್ ಚರಣ್ ಹಾಗೂ ಎಂ ಎಂ ಕೀರವಾಣಿ ಸೇರಿದಂತೆ ತಂಡದ ಉಳಿದ ಸದಸ್ಯರು ಚಪ್ಪಾಳೆ ತಟ್ಟಿ ಕುಣಿದು ಸಂಭ್ರಮಿಸಿದರು.

  English summary
  RRR movie's Naatu Naatu bags best original song award at Golden Globes 2023. Read on,
  Wednesday, January 11, 2023, 9:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X