For Quick Alerts
  ALLOW NOTIFICATIONS  
  For Daily Alerts

  ಹೈದರಾಬಾದ್ ಬಳಿಕ ಪುಣೆಗೆ ಹಾರಲಿದೆ ಆರ್‌ಆರ್‌ಆರ್ ಚಿತ್ರತಂಡ

  |

  ಹೈದರಾಬಾದ್‌ನಲ್ಲಿ ಭರದಿಂದ ಸಾಗುತ್ತಿರುವ ಬಹುನಿರೀಕ್ಷಿತ ತೆಲುಗು ಸಿನಿಮಾ ಆರ್‌ಆರ್‌ಆರ್‌ ಸಿನಿಮಾ ತಂಡ ಹೈದರಾಬಾದ್‌ ನಂತರ ಪುಣೆ ಕಡೆ ಪ್ರಯಾಣ ಬೆಳೆಸಲಿದೆ.

  ಚಿತ್ರೀಕರಣ ಪ್ರಾರಂಭ ಮಾಡಿದಾಗ ಪುಣೆ ದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧಿರಿಸಿತ್ತು, ಆದರೆ ಕೊರೊನಾ ಅಡ್ಡಗಾಲು ಹಾಕಿ, ನಂತರ ಚಿತ್ರೀಕರಣ ಪ್ರಾರಂಭ ಮಾಡಿದಾಗ ಪುಣೆ ಸೇರಿದಂತೆ ಇನ್ನೂ ಕೆಲವು ಲೊಕೇಶನ್‌ಗಳ ಚಿತ್ರೀಕರಣವನ್ನು ಕೈಬಿಡಲಾಗಿತ್ತು.

  ಆದರೆ ಈಗ ಮತ್ತೆ ಪುಣೆಯಲ್ಲಿ ಚಿತ್ರೀಕರಣ ಮಾಡಲು ರಾಜಮೌಳಿ ನಿರ್ಧರಿಸಿದ್ದು, ಕೆಲವೇ ದಿನಗಳಲ್ಲಿ ಜೂ.ಎನ್‌ಟಿಆರ್, ರಾಮ್‌ಚರಣ್ ತೇಜಾ, ಆಲಿಯಾ ಭಟ್ ಇತರ ಕೆಲವು ನಟರು ಪುಣೆಗೆ ತೆರಳಲಿದ್ದಾರೆ. ಪುಣೆಯಲ್ಲಿ ಅರಮನೆಯಲ್ಲಿ ನಡೆವ ದೃಶ್ಯಗಳ ಚಿತ್ರೀಕರಣ ನಡೆಯಲಿದೆ.

  ಹೈದರಾಬಾದ್‌ನಲ್ಲಿ ಆಕ್ಷನ್ ದೃಶ್ಯಗಳ ಚಿತ್ರೀಕರಣ ನಡೆದಿದೆ. ಅನ್ನಪೂರ್ಣ ಸ್ಟುಡಿಯೋದ ದೊಡ್ಡ ಸೆಟ್‌ ಅನ್ನು ಹಾಕಿದ್ದ ಚಿತ್ರತಂಡ ಬಹುತೇಕ ಚಿತ್ರೀಕರಣವನ್ನು ಹೈದರಾಬಾದ್‌ನಲ್ಲಿಯೇ ಮುಗಿಸಿದೆ ಚಿತ್ರತಂಡ.

  ಆರ್‌ಆರ್‌ಆರ್‌ ಸಿನಿಮಾವು ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  English summary
  Rajamouli diroctorial RRR movie shooting shifting to Pune from Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X