For Quick Alerts
  ALLOW NOTIFICATIONS  
  For Daily Alerts

  ರಾಮ್ ಚರಣ್ ಹುಟ್ಟುಹಬ್ಬ; 'RRR' ತಂಡದಿಂದ ಅದ್ದೂರಿ ಆಚರಣೆ

  |

  ತೆಲುಗಿನ ನಟ ಖ್ಯಾತ ರಾಮ್ ಚರಣ್ 36ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ಇಂದು (ಮಾರ್ಚ್ 27) ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಮೆಗಾಸ್ಟಾರ್ ಪುತ್ರನಿಗೆ ತಾರೆಯರು, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

  ರಾಮ್ ಚರಣ್ ಸದ್ಯ ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ RRR ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ಆರ್ ಆರ್ ಆರ್ ಚಿತ್ರದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಚಿತ್ರೀಕರಣ ನಡುವೆಯೂ ಇಡೀ ಸಿನಿಮಾತಂಡ ರಾಮ್ ಚರಣ್ ಹುಟ್ಟುಹಬ್ಬ ಆಚರಿಸಿ ಸಂಭ್ರಮಿಸಿದ್ದಾರೆ. ಮುಂದೆ ಓದಿ..

  ರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಆಗ್ತಾರಾ 'ಕಬೀರ್ ಸಿಂಗ್' ಸುಂದರಿರಾಮ್ ಚರಣ್ ಪ್ಯಾನ್ ಇಂಡಿಯಾ ಸಿನಿಮಾಗೆ ನಾಯಕಿ ಆಗ್ತಾರಾ 'ಕಬೀರ್ ಸಿಂಗ್' ಸುಂದರಿ

  RRR ತಂಡದಿಂದ ರಾಮ್ ಚರಣ್ ಹುಟ್ಟುಹಬ್ಬ ಆಚರಣೆ

  RRR ತಂಡದಿಂದ ರಾಮ್ ಚರಣ್ ಹುಟ್ಟುಹಬ್ಬ ಆಚರಣೆ

  ರಾತ್ರಿ ಚಿತ್ರೀಕರಣ ಸೆಟ್ ನಲ್ಲೇ ಕೇಕ್ ಕತ್ತರಿಸಿ ರಾಮ್ ಚರಣ್ ಜನ್ಮದಿನಾಚರಣೆಯನ್ನು ಆಚರಣೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲೂ ನಿರ್ದೇಶಕ ರಾಜಮೌಳಿ, ರಾಮ್ ಚರಣ್ ಗೆ ಪ್ರೀತಿಯಿಂದ ಕೇಕ್ ತಿನಿಸುತ್ತಿರುವ ಫೋಟೋ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

  ರಾಮ ರಾಜುಗೆ ವಿಶ್ ಮಾಡಿದ ಇಡೀ ತಂಡ

  ರಾಮ ರಾಜುಗೆ ವಿಶ್ ಮಾಡಿದ ಇಡೀ ತಂಡ

  ಈ ಸಮಯದಲ್ಲಿ ಚಿತ್ರದಲ್ಲಿ ಕೆಲಸ ಮಾಡುತ್ತಿರುವ ಸಂಪೂರ್ಣ ತಂಡ ಹಾಜರಿದ್ದು, ರಾಮ ರಾಜು ರಾಮ್ ಚರಣ್ ಗೆ ಶುಭಕೋರಿದ್ದಾರೆ. ಸಂಪೂರ್ಣ ಸಂಭ್ರಮಿಸಿ ರಾಮ್ ಚರಣ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಅಂದಹಾಗೆ ರಾಮ ರಾಜು ಆರ್ ಆರ್ ಆರ್ ಸಿನಿಮಾದಲ್ಲಿ ರಾಮ್ ಚರಣ್ ಪಾತ್ರದ ಹೆಸರು.

  RRR ತಂಡದಿಂದ ಅದ್ಭುತ ಗಿಫ್ಟ್

  RRR ತಂಡದಿಂದ ಅದ್ಭುತ ಗಿಫ್ಟ್

  ರಾಮ ರಾಜು ಪೋಸ್ಟರ್ ರಿಲೀಸ್ ಮಾಡುವ ಮೂಲಕ ಚಿತ್ರತಂಡ ರಾಮ್ ಚರಣ್ ಗೆ ಅದ್ಭುತವಾದ ಗಿಫ್ಟ್ ನೀಡಿದೆ. ಪೋಸ್ಟರ್ ಗೆ ಉತ್ತಮವಾದ ಪ್ರತಿಕ್ರಿಯೆ ಸಹ ವ್ಯಕ್ತವಾಗುತ್ತಿದೆ. ಇನ್ನು ರಾಮ್ ಚರಣ್ ಆರ್ ಆರ್ ಆರ್ ಜೊತೆಗೆ ಆಚಾರ್ಯ ಸಿನಿಮಾದಲ್ಲೂ ನಿರತರಾಗಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಚಾರ್ಯ ಸಿನಿಮಾದ ಲುಕ್ ಕೂಡ ರಿವೀಲ್ ಆಗಿದೆ.

  ರಾಮ್ ಚರಣ್-ಶಂಕರ್ ಚಿತ್ರಕ್ಕೆ ರಶ್ಮಿಕಾ ಬದಲು ಮತ್ತೋರ್ವ ಸ್ಟಾರ್ ನಟಿ ಆಯ್ಕೆರಾಮ್ ಚರಣ್-ಶಂಕರ್ ಚಿತ್ರಕ್ಕೆ ರಶ್ಮಿಕಾ ಬದಲು ಮತ್ತೋರ್ವ ಸ್ಟಾರ್ ನಟಿ ಆಯ್ಕೆ

  ನೇಪಾಳದಲ್ಲಿ ಹೆಚ್ಚಾಯ್ತು KGF 2 ಹವಾ | Yash | Filmibeat Kannada
  ಆಚಾರ್ಯ ಸಿನಿಮಾದ ಪೋಸ್ಟರ್ ಬಿಡುಗಡೆ

  ಆಚಾರ್ಯ ಸಿನಿಮಾದ ಪೋಸ್ಟರ್ ಬಿಡುಗಡೆ

  ಪೋಸ್ಟರ್ ನಲ್ಲಿ ಮೆಗಾಸ್ಟಾರ್ ಜೊತೆ ಗನ್ ಹಿಡಿದು ನಡೆದುಕೊಂಡು ಹೋಗುತ್ತಿದ್ದಾರೆ. ಇಬ್ಬರು ಕಪ್ಪು ಬಟ್ಟೆ ಧರಿಸಿದ್ದು ಈ ಪೋಸ್ಟರ್ ಸಹ ಅಭಿಮಾನಿಗಳ ಮನಸೆಳೆಯುತ್ತಿದೆ. ಎರಡು ಸಿನಿಮಾಗಳ ಜೊತೆಗೆ ರಾಮ್ ಚರಣ್ ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಇನ್ನು ಹೆಸರಿಡದ ಪ್ಯಾನ್ ಇಂಡಿಯಾ 3ಡಿ ಸಿನಿಮಾದಲ್ಲೂ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಇನ್ನು ಪ್ರಿ ಪ್ರೊಡಕ್ಷನ್ ಕೆಲಸದಲ್ಲಿದ್ದು, ಮೇ ಅಥವಾ ಜೂನ್ ಬಳಿಕ ಸೆಟ್ಟೇರುವ ಸಾಧ್ಯತೆ ಇದೆ.

  English summary
  RRR movie team celebrates Ram Charan birthday in Shooting set.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X