Jr.NTRಗೆ ಬಿಗ್ ಸರ್ಪ್ರೈಸ್ ಕೊಡಲು 'RRR' ಸಿನಿಮಾತಂಡದ ಪ್ಲಾನ್

ಜೂ.ಎನ್.ಟಿ.ಆರ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಎಸ್.ರಾಜಮೌಳಿ ನಿರ್ದೇಶನದ ಭಾರಿ ನಿರೀಕ್ಷೆಯ ಸಿನಿಮಾ ಇದಾಗಿದ್ದು, ಈಗಾಗಲೆ ಸಾಕಷ್ಟು ಚಿತ್ರೀಕರಣ ಮಾಡಲಾಗಿದೆ. ಸದ್ಯ ಕೊರೊನಾ ಲಾಕ್ ಡೌನ್ ನಿಂದ ಚಿತ್ರೀಕರಣ ಬಂದ್ ಆಗಿದೆ.

ಈ ಇಡುವೆ ಚಿತ್ರತಂಡ ಮತ್ತೊಂದು ಪ್ಲಾನ್ ಮಾಡಿದೆ. ಹೌದು ಜೂ.ಎನ್ ಟಿ ಆರ್ ಗೆ ಆರ್ ಆರ್ ಆರ್ ತಂಡ ದೊಡ್ಡ ಸರ್ಪ್ರೈಸ್ ನೀಡಲು ಮುಂದಾಗಿದೆ. ಅಷ್ಟಕ್ಕು ಜೂ.ಎನ್ ಟಿ ಆರ್ ಗೆ ಸರ್ಪ್ರೈಸ್ ಯಾಕೆ ಅಂತೀರಾ? ಜೂ.ಎನ್ ಟಿ ಆರ್ ಹುಟ್ಟುಹಬ್ಬ ಹತ್ತಿರ ಬರುತ್ತಿದೆ. ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹುಟ್ಟುಹಬ್ಬಕ್ಕೆ ಆರ್ ಆರ್ ಆರ್ ಟೀಂ ಪುಟ್ಟ ಟೀಸರ್ ರಿಲೀಸ್ ಮಾಡುವ ಸಾಧ್ಯತೆ ಇದೆ.

ಇದೆ ತಿಂಗಳು ಮೇ 20ಕ್ಕೆ ಜೂ.ಎನ್ ಟಿ ಆರ್ ಹುಟ್ಟುಹಬ್ಬ. 37ನೇ ವಸಂತಕ್ಕೆ ಕಾಲಿಡುತ್ತಿರುವ ಜೂ.ಎನ್.ಟಿ.ಆರ್ ಈ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿದ್ದರು, ಸಿನಿಮಾತಂಡ ಅಭಿಮಾನಿಗಳ ಮನ ತಣಿಸುವ ಸಾಧ್ಯತೆ ಇದೆ. ಇನ್ನೂ ಹುಟ್ಟುಹಬ್ಬದ ದಿನ ಜೂ.ಎನ್ ಟಿ.ಆರ್ ಹೊಸ ಸಿನಿಮಾ ಸಹ ಅನೌನ್ಸ್ ಆಗಿಲಿದೆ ಎಂದು ಎಂದು ಹೇಳಲಾಗುತ್ತಿದೆ.

 RRR Movie Team Has Surprise Planned For Jr.NTR Birthday

ರಾಮ್ ಚರಣ್ ಹುಟ್ಟುಹಬ್ಬದ ದಿನ ಆರ್ ಆರ್ ಆರ್ ಸಿನಿಮಾದ ಪುಟ್ಟ ವಿಡಿಯೋ ರಿಲೀಸ್ ಮಾಡಲಾಗಿತ್ತು. ರಾಮ್ ಚರಣ್ ಅಲ್ಲೂರಿ ಸಿತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೂ.ಎನ್.ಟಿ.ಆರ್ ಕೊಮರಾಮ್ ಭೀಮ ಆಗಿ ಬಣ್ಣಹಚ್ಚಿದ್ದಾರೆ ಹುಟ್ಟುಹಬ್ಬ ದಿನ ಕೊಮರಾಮ್ ಭೀಮ ಪಾತ್ರದ ವಿಡಿಯೋ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

English summary
RRR movie team has surprise planned for Jr.NTR birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X