RRR ಚಿತ್ರ ತಂಡ ಮಾಸ್ಟರ್ ಪ್ಲ್ಯಾನ್: ಠುಸ್ ಆಯ್ತು ಹೊಸ ತಂತ್ರ!
ಭಾರತೀಯ ಚಿತ್ರರಂಗದ ಬಹುನೀರೀಕ್ಷಿತ ಚಿತ್ರ ಆರ್‌ಆರ್‌ಆರ್ ಇದೇ ಜನವರಿ 7 ರಂದು ತೆರೆಗೆ ಬರಬೇಕಿತ್ತು. ವರ್ಷಗಳಿಂದ ಈ ಚಿತ್ರಕ್ಕಾಗಿ ಜನ ಕಾಯ್ತಿದ್ದಾರೆ. ಆರ್‌ಆರ್‌ಆರ್ ಸಿನಿಮಾವನ್ನು ನೋಡಲು ವಿಶ್ವದಾದ್ಯಂತ ಜನ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸಿನಿಮಾ ರಿಲೀಸ್ ಪೋಸ್ಟ್ ಆಗಿದೆ. ಆದರೂ ಚಿತ್ರದ ಮುಂದಿನ ರಿಲೀಸ್ ಯಾವಾಗ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ.
Recommended Video
ಸಿನಿಮಾ ರಿಲೀಸ್ ದಿನಾಂಕ ಅನೌನ್ಸ್ ಮಾಡಿದ್ದೇ ಮಾಡಿದ್ದು, ಭರ್ಜರಿ ಪ್ರಚಾರ ಕಾರ್ಯಗಳಲ್ಲಿ ತೊಡಗಿ ಕೊಂಡಿತ್ತು. ದೇಶದಾದ್ಯಂತ ಸುತ್ತಿ ಚಿತ್ರದ ಪ್ರಚಾರ ಕಾರ್ಯಕ್ರಮಗಳನ್ನು ಚಿತ್ರ ಮಾಡಿ ಮುಗಿಸಿತ್ತು. ಆದರೆ ಕೊರೊನಾದಿಂದ ಚಿತ್ರದ ರಿಲೀಸ್ ಮುಂದೂಡಲಾಗಿದೆ.
ಆರ್‌ಆರ್‌ಆರ್ ಚಿತ್ರವನ್ನು ಪೋಸ್ಟ್ ಪೋನ್ ಮಾಡಿದ ಬಳಿಕ ಚಿತ್ರದ ಬಗ್ಗೆ ಯಾವುದೇ ಸುಳಿವು ಇರಲಿಲ್ಲ. ಆದರೆ ಈಗ ಹೊಸ ಯೋಜನೆಯೊಂದಿಗೆ RRR ಚಿತ್ರ ತಂಡ ಹಾಜರಾಗಿದೆ. ಈ ಮೂಕ ಸಿನಿಮಾ ಪ್ರೇಕ್ಷಕರ ಬಳಗದಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಕಡಿಮೆ ಆಗಬಾರದು ಎಂದು ಜನರಿಗೆ ಹೊಸ ಚಾಲೆಂಜ್ ನೀಡಿದೆ ಚಿತ್ರ ತಂಡ.

RRR ಚಿತ್ರದ ಹೊಸ ಪೋಸ್ಟರ್ ರಿಲೀಸ್!
ಆರ್‌ಆರ್‌ಆರ್ ಚಿತ್ರ ತಂಡ ಸಂಕ್ರಾಂತಿ ಹಬ್ಬದ ಸಂಭ್ರಮಕ್ಕೆ ಚಿತ್ರದ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಚಿತ್ರದ ನಾಯಕ ನಟರಾದ ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಇದಾರೆ. ಇಬ್ಬರು ಸ್ಟೈಲ್ ಆಗಿ ಗುಡ್ಡದ ಮೇಲೆ ನಡೆದುಕೊಂಡು ಬರುತ್ತಿದ್ದಾರೆ. ಈ ಹೊಸ ಪೋಸ್ಟರ್ ರಿಲೀಸ್ ಮಾಡಿದೆ ಚಿತ್ರ ತಂಡ. ಹಬ್ಬಕ್ಕೆ ಚಿತ್ರ ರಿಲೀಸ್ ಖುಷಿ ಇರಬೇಕಿತ್ತು. ಆದರೆ ಪೋಸ್ಟರ್ ರಿಲೀಸ್ ಮಾಡಿ ಹೊಸ ಚಾಲೆಂಜ್ ನೀಡಲಾಗಿದೆ.
rrr ಬಳಗದಿಂದ ನಿಮಗೊಂದು ಚಾಲೆಂಜ್!
ಹೌದು ಆರ್‌ಆರ್‌ಆರ್ ಚಿತ್ರ ತಂಡ ಕೇವಲ ಹೊಸ ಪೋಸ್ಟರ್ ರಿಲೀಸ್ ಮಾಡಿರುವುದು ಮಾತ್ರ ಅಲ್ಲ. ಜೊತೆಗೆ ನಿಮಗೆಲ್ಲಾ ಒಂದು ಚಾಲೆಂಜ್ ನೀಡಿದೆ. ಈ ಪೋಸ್ಟರ್‌ನಲ್ಲಿ ನಟ ರಾಮ್ ಚಾರಣ್ ತೇಜ ಮತ್ತು ಜೂ.ಎನ್‌ಟಿಆರ್ ಹೇಗೆ ಪೋಸ್ ಕೊಟ್ಟಿದ್ದಾರೋ, ಅದೇ ರೀತಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ನೀವೂ ಪೋಸ್ ಕೊಟ್ಟು ಸಾಮಾಜಿಕ ಜಾಲತಾಣದ ಮೂಲಕ ಚಿತ್ರ ತಂಡಕ್ಕೆ ಟ್ಯಾಗ್ ಮಾಡ ಬೇಕಾಗಿ ಪೋಸ್ಟರ್‌ನಲ್ಲಿ ಬರೆದು ಕೊಂಡಿದೆ.

ಟ್ರೋಲ್‌ಗೆ ತುತ್ತಾಯ್ತು ಈ ಪೋಸ್ಟರ್!
ಆರ್‌ಆರ್‌ಆರ್ ಚಿತ್ರ ತಂಡದಿಂದ ಈ ರೀತಿಯ ಒಂದು ಚಾಲೆಂಜ್ ಬಂದಿದೆ. ಜನ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ಒಂದಷ್ಟು ಮಂದಿ ತಮ್ಮ ಪ್ರೀತಿ ಪಾತ್ರರೊಂದಿಗಿನ ಫೋಟೊಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವ ನಿರೀಕ್ಷೆಗಳು ಮನೆ ಮಾಡಿದ್ದವು. ಆದರೆ ಅದು ಸಾಧ್ಯ ಆಗಿಲ್ಲ. ಬದಲಿಗೆ ಈ ಪೋಸ್ಟರ್ ಟ್ರೋಲ್ ಆಗಿದೆ. ಸಿನಿಮಾ ರಿಲೀಸ್ ಮಾಡೊದಾಗಿ ಹೇಳಿ, ಚಿತ್ರವನ್ನು ಪೋಸ್ಟ್ ಪೋನ್ ಮಾಡಿ ಈಗ ಪೋಸ್ಟರ್ ರಿಲೀಸ್ ಮಾಡಿದ್ದೀರಾ ಎಂದು ಜನ ಆರ್‌ಆರ್‌ಆರ್ ಚಿತ್ರ ತಂಡವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇದರ ಬದಲಿಗೆ ರಿಲೀಸ್ ದಿನಾಂಕವನ್ನು ಹೇಳಿ ಎನ್ನುತ್ತಿದ್ದಾರೆ.

ಜನವರಿ 7ರಂದು ತೆರೆ ಕಾಣಬೇಕಿದ್ದ RRR ಚಿತ್ರ!
ಜನವರಿ 7ರಂದು RRR ಚಿತ್ರ ತಂಡ ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿತ್ತು. ಆದರೆ ಎಲ್ಲೆಡೆ ಲಾಕ್ ಡೌನ್, ಕರ್ಫ್ಯೂ ಆರಂಭ ಆಯಿತು. ಹಾಗಾಗಿ ಚಿತ್ರವನ್ನು ರಿಲೀಸ್ ಮಾಡಲಿಲ್ಲ ಚಿತ್ರ ತಂಡ. ಚಿತ್ರದ ರಿಲೀಸ್ ಅನಿವಾರ್ಯವಾಗಿ ಮುಂದೂಡಿತು ಚಿತ್ರ ತಂಡ. RRR ಚಿತ್ರಕ್ಕಾಗಿ ಸಾಕಷ್ಟು ಚಿತ್ರಗೂ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿವೆ. ಆದರೂ ಆರ್‌ಆರ್‌ಆರ್ ಪ್ಯಾನ್ ಇಂಡಿಯಾ ಸಿನಿಮಾ ಆದ ಕಾರಣ ರಿಲೀಸ್ ದಿನಾಂಕವನ್ನು ಮುಂದೂಡಬೇಕಾಯಿತು. ಅಂದುಕೊಂಡ ಹಾಗೆ ಸಿನಿಮಾ ರಿಲೀಸ್ ಆಗಿದ್ದರೆ. ಈಗ ರಿಲೀಸ್ ಆಗಿ ವಾರ ಕಳೆಯ ಬೇಕಿತ್ತು.


Click it and Unblock the Notifications











