ಅಬ್ಬಾ..! ಅಲಿಯಾ ಭಟ್ ಸಿಬ್ಬಂದಿಗೆ 'RRR'ತಂಡ 1 ದಿನಕ್ಕೆ ಇಷ್ಟೊಂದು ಹಣ ಖರ್ಚು ಮಾಡುತ್ತಿದೆಯೇ?

ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಬಾಲಿವುಡ್ ನಟಿ ಅಲಿಯಾ ಭಟ್ ಇತ್ತೀಚಿಗಷ್ಟೆ ಸಿನಿಮಾತಂಡ ಸೇರಿಕೊಂಡಿದ್ದಾರೆ.

ಅಲಿಯಾ ಆರ್ ಆರ್ ಆರ್ ಸಿನಿಮಾತಂಡ ಸೇರಿಕೊಂಡ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ನಿರ್ದೇಶಕ ರಾಜಮೌಳಿ ಸಹ ಅಲಿಯಾಗೆ ಸ್ವಾಗತ ಕೋರಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡಿದ್ದರು. ಅಲಿಯಾ ಎಂಟ್ರಿ ಅಭಿಮಾನಿಗಳಿಗೆ ಸಂತಸ ತಂದಿದೆ. ಇದೀಗ ಆರ್ ಆರ್ ಆರ್ ತಂಡದಿಂದ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.

ಅಲಿಯಾ ಭಟ್ ವೈಯಕ್ತಿಕ ಸಿಬ್ಬಂದಿಗೆ ಖರ್ಚು ಮಾಡುತ್ತಿರುವ ಹಣದ ಬಗ್ಗೆ ಕೇಳಿದ್ರೆ ನಿಜಕ್ಕೂ ಅಚ್ಚರಿಯಾಗುತ್ತೆ. ಮುಂದೆ ಓದಿ..

ಅಲಿಯಾ ಭಟ್ ಸಿಬ್ಬಂದಿಗೆ ದಿನಕ್ಕೆ 1 ಲಕ್ಷ ಖರ್ಚು

ಅಲಿಯಾ ಭಟ್ ಸಿಬ್ಬಂದಿಗೆ ದಿನಕ್ಕೆ 1 ಲಕ್ಷ ಖರ್ಚು

ಹೌದು, ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಲು ಮುಂಬೈಯಿಂದ ಹೈದರಾಬಾದ್ ಗೆ ಬಂದಿರುವ ಅಲಿಯಾ ಭಟ್ ಜೊತೆಗೆ ಸಿಬ್ಬಂದಿ ಸಹ ಬಂದಿದ್ದಾರೆ. ಅಲಿಯಾ ಭಟ್ ಸಿಬ್ಬಂದಿಗೆ ಚಿತ್ರತಂಡ ದಿನಕ್ಕೆ 1 ಲಕ್ಷ ರೂಪಾಯಿ ಖರ್ಚು ಮಾಡುತ್ತಿದೆಯಂತೆ. ಅಂದಹಾಗೆ ಅಲಿಯಾ ಜೊತೆ ಒಟ್ಟು 10 ಜನ ಬಂದಿದ್ದಾರೆ.

ಅಲಿಯಾ ಜೊತೆ 10 ಸಿಬ್ಬಂದಿ ಹೈದರಾಬಾದ್ ಗೆ ಆಗಮನ

ಅಲಿಯಾ ಜೊತೆ 10 ಸಿಬ್ಬಂದಿ ಹೈದರಾಬಾದ್ ಗೆ ಆಗಮನ

ಅಲಿಯಾ ಭಟ್ ಜೊತೆ ಮುಂಬೈನಿಂದ 10 ಸಿಬ್ಬಂದಿ ಬಂದಿದ್ದಾರಂತೆ. 4 ಬೌನ್ಸರ್ಸ್, 1 ವೈಯಕ್ತಿಕ ಸಹಾಯಕ, 1 ಮೇಕಪ್ ಮ್ಯಾನ್, 1 ಕೇಶ ವಿನ್ಯಾಸಕಿ, 1 ಕಾಸ್ಟ್ಯೂಮ್ ಅಸಿಸ್ಟೆಂಟ್, 1 ವ್ಯವಸ್ಥಾಪಕ ಮತ್ತು 1 ಚಾಲಕ ಹೈದರಾಬಾದ್ ಗೆ ಬಂದಿದ್ದು, ಅಲಿಯಾ ಜೊತೆ ಬೀಡುಬಿಟ್ಟಿದ್ದಾರೆ. ಎಲ್ಲರೂ ಹೈದರಾಬಾದ್ ನ ಸ್ಟಾರ್ ಹೋಟೆಲ್ ನಲ್ಲಿ ತಂಗಿದ್ದು, ಹೋಟೆಲ್ ವೆಚ್ಚ ಒಂದು ದಿನಕ್ಕೆ 1 ಲಕ್ಷ ಖರ್ಚಾಗುತ್ತಿದೆಯಂತೆ.

ಅಲಿಯಾಗೆ ಸ್ವಾಗತ ಕೋರಿದ ರಾಜಮೌಳಿ

ಅಲಿಯಾಗೆ ಸ್ವಾಗತ ಕೋರಿದ ರಾಜಮೌಳಿ

ಚಿತ್ರೀಕರಣದಲ್ಲಿ ಭಾಗಿಯಾದ ಅಲಿಯಾ ಭಟ್ ಗೆ ನಿರ್ದೇಶಕ ರಾಜಮೌಳಿ ಅದ್ದೂರಿ ಸ್ವಾಗತ ಕೋರಿದ್ದಾರೆ. ಅಲಿಯಾ ಭಟ್ ಜೊತೆ ಫೋಟೋ ಶೇರ್ ಮಾಡಿ, 'ನಮ್ಮ ಪ್ರೀತಿಯ ಸೀತಾ, ಅತ್ಯಂತ ಪ್ರತಿಭಾವಂತೆ ಮತ್ತು ಸುಂದರ ಅಲಿಯಾ ಭಟ್ ಗೆ ಆರ್ ಆರ್ ಆರ್ ಸಿನಿಮಾಗೆ ಆತ್ಮೀಯ ಸ್ವಾಗತ' ಎಂದು ರಾಜಮೌಳಿ ಹೇಳಿದ್ದಾರೆ.

Recommended Video

ಜೀವನದಲ್ಲಿ ಯಾವತ್ತು ಒಂದೇ ಗುರಿ ಇರ್ಬೇಕು | Shivraj K R Pete | Filmibeat Kannada
ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

ಸೀತಾ ಪಾತ್ರದಲ್ಲಿ ಅಲಿಯಾ ಅಭಿನಯ

ನಟಿ ಅಲಿಯಾ ಭಟ್ ರಾಮ್ ಚರಣ್ ಗೆ ನಾಯಕಿಯಾಗಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೀಗ ಅಧಿಕೃತವಾಗಿದೆ. ರಾಮ್ ಚರಣ್ ಚಿತ್ರದಲ್ಲಿ ಅಲ್ಲುರಿ ಸೀತಾರಾಮ ರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೀತಾರಾಮ ರಾಜು ಪ್ರೇಯಸಿ ಸೀತಾ ಪಾತ್ರಕ್ಕೆ ಅಲಿಯಾ ಬಣ್ಣ ಹಚ್ಚುತ್ತಿದ್ದಾರೆ. ಈ ಬಗ್ಗೆ ಸ್ವತಃ ರಾಜಮೌಳಿ ಅವರೇ ಬಹಿರಂಗ ಪಡಿಸಿದ್ದಾರೆ.

More from Filmibeat

English summary
RRR movie team spends 1 lakh for one day for Alia Bhatt personal staff.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X