'RRR' ಸಿನಿಮಾದಲ್ಲಿ ಅಜಯ್ ದೇವಗನ್ ಲುಕ್ ಹೀಗಿದೆ!

ಬಾಲಿವುಡ್ ಸ್ಟಾರ್ ನಟ ಅಜಯ್ ದೇವಗನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 52ನೇ ವಸಂತಕ್ಕೆ ಕಾಲಿಟ್ಟಿರುವ ನಟ ಅಜಯ್ ದೇವಗನ್ ಅವರಿಗೆ ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರಿಂದ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ.

ಇನ್ನು ವಿಶೇಷ ಎಂದರೆ ಅಜಯ್ ದೇವಗನ್ ಹುಟ್ಟುಹಬ್ಬಕ್ಕೆ ರಾಜಮೌಳಿ ಅವರ ಆರ್ ಆರ್ ಆರ್ ತಂಡದಿಂದ ಅದ್ದೂರಿ ಉಡುಗೊರೆ ನೀಡಿದ್ದಾರೆ. ಇಡೀ ಭಾರತೀಯ ಸಿನಿಮಾರಂಗವೇ ಕಾತರದಿಂದ ಕಾಯುತ್ತಿರುವ ಆರ್ ಆರ್ ಆರ್ ಸಿನಿಮಾದ ಅಜಯ್ ದೇವಗನ್ ಲುಕ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಅಜಯ್ ಕ್ರಾಂತಿಕಾರಿ ನಾಯಕನ ಪಾತ್ರ ನಿರ್ವಹಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.

ಗಾಯಗೊಂಡಿರುವ ಅಜಯ್ ನನ್ನು ಸುತ್ತುವರೆದಿರುವ ಜನ, ಬೆಲ್ಟ್ ನಲ್ಲಿ ಬುಲೆಟ್‌ಗಳನ್ನು ಕಟ್ಟಿಕೊಂಡಿರುವ ಅಜಯ್ ಲುಕ್ ಅಭಿಮಾನಿಗಳ ನಿರೀಕ್ಷೆ ಮತ್ತು ಕುತೂಹಲವನ್ನು ಇಮ್ಮಡಿಗೊಳಿಸಿದೆ. ಅಂದಹಾಗೆ ಆರ್ ಆರ್ ಆರ್ ಸಿನಿಮಾದಿಂದ ರಿಲೀಸ್ ಆಗುತ್ತಿರುವ ಮೊದಲ ಲುಕ್ ಇದಲ್ಲ. ಈಗಾಗಲೇ ರಾಮ್ ಚರಣ್, ಜಜೂ ಎನ್ ಟಿ ಆರ್ ಮತ್ತು ಅಲಿಯಾ ಲುಕ್ ರಿವೀಲ್ ಆಗಿದೆ.

RRR movie team unveiling Ajay Devgn first look motion poster on his birthday

ಇಂದು ಅಜಯ್ ಹುಟ್ಟುಹಬ್ಬದ ಪ್ರಯುಕ್ತ ಮೊದಲ ಪೋಸ್ಟರ್ ಬಿಡುಗಡೆ ಮಾಡಿ ಉಡುಗೊರೆ ನೀಡಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ನಿರ್ದೇಶಕ ರಾಜಮೌಳಿ, ಲೋಡ್, ಏಮ್, ಶೂಟ್..ಅವನು ಜನರಿಂದ ಶಕ್ತಿ ಪಡೆಯುತ್ತಾನೆ' ಎಂದು ಬರೆದುಕೊಂಡಿದ್ದಾರೆ.

ಇನ್ನು ನಟರಾದ ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಮೋಷನ್ ಪೋಸ್ಟರ್ ಶೇರ್ ಮಾಡು ಅಜಯ್ ದೇವಗನ್ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆದರೂ ಸಹ ಅಜಯ್ ದೇವಗನ್ ಪಾತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.

ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತರಾಮ ರಾಜು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೂ ಎನ್ ಟಿ ಆರ್ ಕೊಮರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಾಮ್ ಚರಣ್ ಪ್ರೇಯಸಿಯಾಗಿ ಅಲಿಯಾ ಭಟ್ ಕಾಣಿಸಿಕೊಳ್ಳುತ್ತಿದ್ದಾರೆ.

400 ಕೋಟಿಗೂ ಅಧಿಕ ವೆಚ್ಚದಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಲಂ, ಹಿಂದಿ ಸೇರಿದಂತೆ ಅನೇಕ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಬಹುನಿರೀಕ್ಷೆಯ ಸಿನಿಮಾ ಅಕ್ಟೋಬರ್ ತಿಂಗಳಿಗೆ ತೆರೆಗೆ ಬರುತ್ತಿದೆ.

More from Filmibeat

English summary
RRR movie team unveiling Ajay Devgn first look motion poster on his birthday.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X