'ಬಾಹುಬಲಿ2' ದಾಖಲೆಯನ್ನು ಮುರಿದ 'RRR' ಟ್ರೇಲರ್!
ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ 'ಆರ್‌ಆರ್‌ಆರ್' ಸಿನಿಮಾದ ಟ್ರೇಲರ್ ಇಂದು ಬಿಡುಗಡೆ ಆಗಿದೆ. 3:15 ನಿಮಿಷದ ಟ್ರೇಲರ್ ಮೈನವಿರೇಳಿಸುವಂತಿದೆ. ಚಿತ್ರದ ಬಗ್ಗೆ ಕೌತುಕ ಹೆಚ್ಚು ಮಾಡಿದೆ ಆರ್‌ಆರ್‌ಆರ್ ಟ್ರೇಲರ್.
ನಿರೀಕ್ಷೆ ಅಂತೆಯೇ ಟ್ರೇಲರ್ ಮೂಡಿ ಬಂದಿದೆ. ಆಡು ಭಾಷೆಯಲ್ಲಿ ಹೇಳುವುದಾದರೆ ಆರ್‌ಆರ್‌ಆರ್ ಟ್ರೇಲರ್ ಚಿಂದಿ ಆಗಿದೆ. ಚಿತ್ರದ ಟ್ರೇಲರ್ ಸಿನಿಮಾ ಪ್ರೇಕ್ಷಕರ ಮನ ಮುಟ್ಟಿದೆ. ಹಾಗಾಗಿ ಸಿನಿಮಾ ಗೆದ್ದಷ್ಟೆ ಖುಷಿಯನ್ನು ಕೊಡುತ್ತಿದೆ ಟ್ರೇಲರ್.
ಆರ್‌ಆರ್‌ಆರ್ ಟ್ರೇಲರ್ ರಿಲೀಸ್ ಆಗಿದ್ದೇ ತಡ ಇರೋ ಬರೋ ದಾಖಲೆಗಳನ್ನೆಲ್ಲ ಪುಡಿ ಮಾಡುತ್ತಿದೆ. ಸದ್ಯ ಸಾಲು ಸಾಲು ದಾಖಲೆ ಮಾಡುತ್ತಿದೆ ಆರ್‌ಆರ್‌ಆರ್.

ಬಾಹುಬಲಿ2 ರೆಕಾರ್ಡ್ ಮುರಿದ RRR!
RRR ಚಿತ್ರ ದಾಖಲೆ ಮೇಲೆ ದಾಖಲೆ ಮಾಡುತ್ತಿದೆ. ಸದ್ಯ ಈ ಹಿಂದೆ ರಾಜಮೌಳಿ ನಿರ್ದೇಶನ ಮಾಡಿದ್ದ ಬಾಹುಬಲಿ ಚಿತ್ರದ ದಾಖಲೆಯನ್ನೇ ಮೀರಿಸಿದೆ RRR. ಜೊತೆಗೆ ನೀಕ್ಷಿತ ಚಿತ್ರ ಪುಷ್ಪ ಟ್ರೇಲರ್ ಮಾಡಿದ್ದ ರೆಕಾರ್ಡ್ ಕೂಡ RRR ಚಿತ್ರದ ಮುಂದೆ ಮಕಾಡೆ ಮಲಗಿದೆ. ಅತಿ ವೇಗವಾಗಿ 5 ಲಕ್ಷ ಲೈಕ್ಸ್ ಪಡೆದ ಮೊದಲ ಟ್ರೇಲರ್ ಆಗಿ ದಾಖಲೆ ಮಾಡಿದೆ RRR.
ಯಾವ ಚಿತ್ರದ ರೆಕಾರ್ಡ್ ಏನೇನು? ಇತ್ತೀಚೆಗೆ ಯಾವ ಚಿತ್ರದ ಟ್ರೇಲರ್ ಹೆಚ್ಚು ಸದ್ದು ಮಾಡಿ ದಾಖಲೆ ಮಾಡಿದೆ. ಯಾವೆಲ್ಲಾ ದಾಖಲೆಗಳನ್ನು RRR ಮುರಿದಿದೆ ಎನ್ನುವ ವಿವರ ಇಲ್ಲಿದೆ.

ತೆಲುಗಿನಲ್ಲಿ ಅತಿ ವೇಗವಾಗಿ 3ಲಕ್ಷ ಲೈಕ್ಸ್ ಪಡೆದ ಟ್ರೇಲರ್‌ಗಳು!
'RRR' - 32 ನಿಮಿಷ+, ವಕೀಲ್ ಸಾಬ್ - 40 ನಿಮಿಷ, ಪುಷ್ಪಾ - 1 ಗಂಟೆ 49 ನಿಮಿಷ, ಸಾಹೋ - 4 ಗಂಟೆ 50 ನಿಮಿಷ, ಬಾಹುಬಲಿ 2 - 6 ಗಂಟೆ 7 ನಿಮಿಷ, ಲವ್ ಸ್ಟೋರಿ - 10 ಗಂಟೆ 8 ನಿಮಿಷ, ಸೈ ರಾ ಟ್ರೈಲರ್ - 12 ಗಂಟೆ 15 ನಿಮಿಷ, ಗಣರಾಜ್ಯ - 12 ಗಂಟೆ 48 ನಿಮಿಷಗಳು, ಅಖಂಡ ಟ್ರೈಲರ್ - 14 ಗಂಟೆ 41 ನಿಮಿಷ,
ಸರಿಲೇರು ನೀಕೆವ್ವರು - 19 ಗಂಟೆ. ಅರವಿಂದ ಸಮೇತ ವೀರ ರಾಘವ -20 ಗಂಟೆ 2 ನಿಮಿಷ, ಜಾತಿ ರತ್ನಲು - 20 ಗಂಟೆ 9 ನಿಮಿಷ, ಅಲಾ ವೈಕುಂಠಪುರಮುಲೋ - 20 ಗಂಟೆ 27 ನಿಮಿಷ, ವಿನಯ ವಿಧೇಯ ರಾಮ - 45 ಗಂಟೆ 15 ನಿಮಿಷ. ಈ ಚಿತ್ರಗಳ ಪೈಕಿ RRR ಚಿತ್ರ ಮುಂಚೂಣಿಯಲ್ಲಿದೆ.

ಅತಿ ವೇಗವಾಗಿ 4ಲಕ್ಷ ಲೈಕ್ಸ್ ಗಟ್ಟಿಸಿ ಕೊಂಡ ಚಿತ್ರದ ಟ್ರೇಲರ್‌ಗಳ ಪಟ್ಟಿ!
ಚಿತ್ರವನ್ನು ನೋಡಲು ಟ್ರೇಲರ್‌ಗಳು ಅಮಂತ್ರಣ ಇದ್ದ ಹಾಗೆ. ಅದೆಷ್ಟೋ ಸಿನಿಮಾಗಳು ಟ್ರೇಲರ್ ಹುಟ್ಟಿಸೋ ನಿರೀಕ್ಷೆ ಇಂದಲೇ ಗೆದ್ದು ಬಿಡುತ್ತದೆ. ಹಾಗಾಗಿ ಪ್ರತಿ ಚಿತ್ರಕ್ಕೂ ಟ್ರೇಲರ್ ಮಾಡುವ ದಾಖಲೆ ಅತಿ ಮುಖ್ಯ ಆಗಿರುತ್ತದೆ. ತೆಲುಗಿನ ಇತ್ತೀನ ಚಿತ್ರಗಳಲ್ಲಿ ಅತಿ ವೇಗವಾಗಿ 400 ಸಾವಿರ ಲೈಕ್ಸ್ ಪಡೆದು ಮೊದಲ ಸ್ಥಾನದಲ್ಲಿ ಇದೆ RRR ಚಿತ್ರದ ಟ್ರೇಲರ್. RRR - 52 ನಿಮಿಷಗಳು, ವಕೀಲ್ ಸಾಬ್ - 71 ನಿಮಿಷಗಳು, ಪುಷ್ಪಾ - 10ಗಂಟೆ 16 ನಿಮಿಷಗಳು, ಬಾಹುಬಲಿ 2 - 10 ಗಂಟೆ 30 ನಿಮಿಷ, ಸಾಹೋ - 25 ಗಂಟೆ.

500K ಮೆಚ್ಚುಗೆ ಪಡೆದು ಮೊದಲ ಸ್ಥಾನದಲ್ಲಿ RRR!
ಇನ್ನು ತೆಲುಗು ಸಿನಿಮಾಗಳ ಪೈಕಿ ಮೊದಲು ಅತಿ ವೇಗವಾಗಿ 5 ಲಕ್ಷ ಮೆಚ್ಚುಗೆ ಪಡೆದ ಟ್ರೇಲರ್ ಎನ್ನುವ ಹೆಗ್ಗಲಿಕೆಗೆ ಪಾತ್ರವಾಗಿದೆ ಆರ್‌ಆರ್‌ಆರ್ ಚಿತ್ರದ ಟ್ರೇಲರ್.1 ಗಂಟೆ 20 ನಿಮಿಷದಲ್ಲಿ RRR ಚಿತ್ರದ ಟ್ರೇಲರ್‌ಗೆ ಲಕ್ಷ ಲೈಕ್ಸ್ ಬಂದಿವೆ. ಇದಕ್ಕೆ ಹೊಲಿಸಿದರೆ ತೆಲುಗಿನ ನಿರೀಕ್ಷಿತ ಚಿತ್ರಗಳಾದ 'ವಕೀಲ್ ಸಾಬ್' - 1 ಗಂಟೆ 57 ನಿಮಿಷ ತೆಗೆದುಕೊಂಡಿದೆ. 'ಪುಷ್ಪಾ'- 11 ಗಂಟೆ 44 ನಿಮಿಷ, ಇನ್ನು ರಾಜಮೌಳಿ ಅವರೇ ನಿರ್ದೇಶನ ಮಾಡಿದ್ದ ಬಾಹುಬಲಿ 2 ಚಿತ್ರ 24 ಗಂಟೆ 3 ನಿಮಿಷದಲ್ಲಿ 500k ಲೈಕ್ಸ್ ಪಡೆದುಕೊಂಡಿದೆ. ಈ ಮೂಲಕ RRR ಚಿತ್ರದ ಹೊಸ ದಾಖಲೆ ಮಾಡಿದೆ.


Click it and Unblock the Notifications











