ಅನಿರೀಕ್ಷಿತ ಕಾರಣದಿಂದಾಗಿ ಕೊಟ್ಟ ಮಾತು ತಪ್ಪಿದ ರಾಜಮೌಳಿ!

ಅಭಿಮಾನಿಗಳ ಭಾವನೆಗಳಿಗೆ ಬಹುವಾಗಿ ಬೆಲೆ ಕೊಡುವ ವ್ಯಕ್ತಿ ನಿರ್ದೇಶಕ ರಾಜಮೌಳಿ. ಸಿನಿಮಾದ ಬಗ್ಗೆಯೂ ಅಪಾರ ಶಿಸ್ತು ಹೊಂದಿರುವ ಅವರು ಸಾಮಾನ್ಯವಾಗಿ ಅಭಿಮಾನಿಗಳಿಗೆ ಕೊಟ್ಟ ಮಾತು ತಪ್ಪುವುದಿಲ್ಲ, ಈ ಬಾರಿ ಏಕೋ ಮಾತು ತಪ್ಪಿದ್ದಾರೆ.

ಕೊರೊನಾ ಕಾರಣದಿಂದ 'ಆರ್ಆರ್ಆರ್' ಸಿನಿಮಾವನ್ನು ಹೇಳಿದ ದಿನಾಂಕಕ್ಕೆ ಬಿಡುಗಡೆ ಮಾಡಲಾಗಿಲ್ಲ ಎನ್ನುವುದು ಹಳೆಯ ವಿಷಯ. ಅದರಲ್ಲಿ ರಾಜಮೌಳಿಯ ತಪ್ಪೇನೂ ಇರಲಿಲ್ಲ. ಆದರೆ ಈಗ ಸಿನಿಮಾದ ಟ್ರೇಲರ್ ಬಿಡುಗಡೆಗೆ ವಿಚಾರವಾಗಿ ಅಭಿಮಾನಿಗಳಿಗೆ ಬೇಸರ ಮೂಡಿಸಿದ್ದಾರೆ.

ಈಗಾಗಲೇ ಕೆಲವು ಟೀಸರ್‌ಗಳು, ಪೋಸ್ಟರ್‌ಗಳು, ಹಾಡಿನ ತುಣುಕುಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ರಾಜಮೌಳಿ, ಡಿಸೆಂಬರ್ 03ರಂದು ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ ಡಿಸೆಂಬರ್ 03ಕ್ಕೆ ಟ್ರೇಲರ್ ಬಿಡುಗಡೆ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಟ್ರೇಲರ್ ಬಿಡುಗಡೆ ಮುಂದೂಡಿಕೆ

ಟ್ರೇಲರ್ ಬಿಡುಗಡೆ ಮುಂದೂಡಿಕೆ

''ಕೆಲವು ಅನಿರೀಕ್ಷಿತ ಕಾರಣಗಳಿಂದಾಗಿ 'ಆರ್ಆರ್ಆರ್' ಸಿನಿಮಾದ ಟ್ರೇಲರ್ ಅನ್ನು ಡಿಸೆಂಬರ್ 03ರಂದು ಬಿಡುಗಡೆ ಮಾಡಲಾಗುತ್ತಿಲ್ಲ. ಟ್ರೇಲರ್ ಬಿಡುಗಡೆ ಮಾಡುವ ಮುಂದಿನ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸಲಾಗುವುದು'' ಎಂದು 'ಆರ್ಆರ್ಆರ್' ಚಿತ್ರತಂಡ ಟ್ವೀಟ್ ಮಾಡಿದೆ. ಟ್ರೇಲರ್ ಬಿಡುಗಡೆ ಮುಂದೂಡಲು ಕಾರಣವನ್ನು ಚಿತ್ರತಂಡ ತಿಳಿಸಿಲ್ಲ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

'ಆರ್ಆರ್ಆರ್' ಸಿನಿಮಾ ಜನವರಿ 07ರಂದು ಬಿಡುಗಡೆ ಆಗಲಿದೆ. ಆದರೆ ಈಗ ಟ್ರೇಲರ್ ಬಿಡುಗಡೆ ಮುಂದೂಡಿರುವುದರಿಂದ ಸಿನಿಮಾದ ಬಿಡುಗಡೆಯೂ ಮುಂದೂಡಬಹುದೇ ಎಂಬ ಅನುಮಾನವನ್ನು ಕೆಲವು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದೂ ಅಲ್ಲದೆ ಡಿಸೆಂಬರ್ 03ರಂದು ಮನರಂಜನಾ ಉದ್ಯಮಕ್ಕೆ ಸಂಬಂಧಿಸಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳು ಇವೆ ಹಾಗಾಗಿ ಆ ದಿನ ಟ್ರೇಲರ್ ಬಿಡುಗಡೆ ಬೇಡವೆಂದು ಚಿತ್ರತಂಡ ನಿರ್ಧರಿಸಿರುವ ಸಾಧ್ಯತೆ ಇದೆ.

ಹಾಡು ಬಿಡುಗಡೆ ಮಾಡಿದ್ದ ರಾಜಮೌಳಿ

ಹಾಡು ಬಿಡುಗಡೆ ಮಾಡಿದ್ದ ರಾಜಮೌಳಿ

ಕೆಲವು ದಿನಗಳ ಹಿಂದೆ ನಿರ್ದೇಶಕ ರಾಜಮೌಳಿ, 'ಆರ್ಆರ್ಆರ್' ಸಿನಿಮಾದ 'ಸೋಲ್ ಸಾಂಗ್' ಅನ್ನು ಬಿಡುಗಡೆ ಮಾಡಿದ್ದರು. 'ಜನನಿ' ಹೆಸರಿನ ಈ ಹಾಡು 'ಆರ್ಆರ್ಆರ್' ಸಿನಿಮಾದ ಆತ್ಮವಾಗಿದೆ ಎಂದು ರಾಜಮೌಳಿ ಹೇಳಿದ್ದರು. ಬೆಂಗಳೂರಿಗೆ ಆಗಮಿಸಿದ್ದ ರಾಜಮೌಳಿ ಇಲ್ಲಿ ಹಾಡಿನ ಕನ್ನಡ ವರ್ಷನ್ ಬಿಡುಗಡೆ ಮಾಡಿದ್ದರು.

ಜನವರಿ 07ಕ್ಕೆ ಸಿನಿಮಾ ಬಿಡುಗಡೆ

ಜನವರಿ 07ಕ್ಕೆ ಸಿನಿಮಾ ಬಿಡುಗಡೆ

'ಆರ್ಆರ್ಆರ್' ಸಿನಿಮಾವು ಭಾರತದ ಅತ್ಯಂತ ನಿರೀಕ್ಷೆಯ ಸಿನಿಮಾ ಆಗಿದ್ದು, ಸ್ಟಾರ್ ನಟರಾದ ರಾಮ್ ಚರಣ್ ತೇಜ, ಜೂ ಎನ್‌ಟಿಆರ್ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದಾರೆ. ಸಿನಿಮಾವನ್ನು ಸ್ಟಾರ್ ನಿರ್ದೇಶಕ ರಾಜಮೌಳಿ ನಿರ್ದೇಶನ ಮಾಡಿದ್ದು, ನಾಯಕಿಯಾಗಿ ಬಾಲಿವುಡ್‌ನ ಆಲಿಯಾ ಭಟ್ ನಟಿಸಿದ್ದಾರೆ. ಸಿನಿಮಾದಲ್ಲಿ ವಿದೇಶಿ ನಟರೂ ಸಹ ಇದ್ದಾರೆ. ತೆಲುಗು ರಾಜ್ಯಗಳ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ್ ಕುರಿತಾದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದಲ್ಲಿ ರಾಮ್ ಚರಣ್ ತೇಜ ಅಲ್ಲೂರಿ ಸೀತಾರಾಮ ರಾಜು ಆಗಿಯೂ ಜೂ ಎನ್‌ಟಿಆರ್ ಕೋಮರಂ ಭೀಮ್ ಆಗಿಯೂ ನಟಿಸಿದ್ದಾರೆ. ಸಿನಿಮಾವು ಜನವರಿ 07 ರಂದು ಬಿಡುಗಡೆ ಆಗಲಿದೆ.

More from Filmibeat

English summary
RRR movie trailer release date postponed. Trailer expected to release on December 03. But RRR team said trailer will release on other day soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X