twitter
    For Quick Alerts
    ALLOW NOTIFICATIONS  
    For Daily Alerts

    RRR: ಚಿತ್ರೀಕರಣಕ್ಕಿಂತಲೂ ವಿಎಫ್‌ಎಕ್ಸ್‌ ಗೆ ಹೆಚ್ಚು ಹಣ ಖರ್ಚು!

    |

    ಬಹುನಿರೀಕ್ಷಿತ ಸಿನಿಮಾ ಆರ್‌ಆರ್ಆರ್ ನ ಚಿತ್ರೀಕರಣ ಶರವೇಗದಿಂದ ಸಾಗುತ್ತಿದೆ. ಆರಂಭದಲ್ಲಿ ಮಾಡಿದ್ದ ಯೋಜನೆಯನ್ನು ಲಾಕ್‌ಡೌನ್ ನಂತರ ಬದಲಾಯಿಸಿರುವ ರಾಜಮೌಳಿ, ಸಾಧ್ಯವಾದಷ್ಟು ಬೇಗ ಚಿತ್ರೀಕರಣ ಮುಗಿಸುತ್ತಿದ್ದಾರೆ.

    ಚಿತ್ರೀಕರಣ ಬೇಗ ಮುಗಿಸಿದರೂ ಸಹ ಸಿನಿಮಾ ಬಿಡುಗಡೆ ತಡವೇ ಆಗಲಿದೆ. ಅದಕ್ಕೆ ಪ್ರಮುಖ ಕಾರಣ ಪೋಸ್ಟ್ ಪ್ರೊಡಕ್ಷನ್‌ ಪ್ರಕ್ರಿಯೆ.

    ಹೌದು, ನಿರ್ದೇಶಕ ರಾಜಮೌಳಿ ಅವರು ಪೋಸ್ಟ್ ಪ್ರೊಡಕ್ಷನ್‌ಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಸಿನಿಮಾವೊಂದು ಸರಿಯಾಗಿ 'ಫೈನ್ ಟ್ಯೂನ್' ಆಗುವುದು ಪೋಸ್ಟ್ ಪ್ರೊಡಕ್ಷನ್‌ ಹಂತದಲ್ಲಿಯೇ ಹಾಗಾಗಿ ಈ ಹಂತದ ಬಗ್ಗೆ ರಾಜಮೌಳಿಗೆ ವಿಶೇಷ ಕಾಳಜಿ.

    RRR Movie VFX Budget Is More Than Shooting Budget

    ಅದರಲ್ಲಿಯೂ ಸಿನಿಮಾದ ವಿಎಫ್‌ಎಕ್ಸ್‌ ಎಫೆಕ್ಟ್‌ಗಳಿಗೆ ಭಾರಿ ಮೊತ್ತದ ಹಣ ವ್ಯಯ ಮಾಡಲಿದ್ದಾರೆ ರಾಜಮೌಳಿ. ಸಿನಿಮಾದ ಚಿತ್ರೀಕರಣಕ್ಕೆ ಖರ್ಚಾದುದ್ದಕ್ಕಿಂತಲೂ ಹೆಚ್ಚು ಹಣ ವಿಎಫ್‌ಎಕ್ಸ್‌ ಗೆ ಖರ್ಚಾಗಲಿದೆಯಂತೆ.

    ಲಾಕ್‌ಡೌನ್ ಕಾರಣದಿಂದಾಗಿ ಬಹುತೇಕ ಸೆಟ್‌ಗಳಲ್ಲಿಯೇ ಚಿತ್ರೀಕರಣ ನಡೆದಿದ್ದು, ಸೆಟ್‌ನ ಚಿತ್ರೀಕರಣದಲ್ಲಿ ಇದ್ದ ಕೊರತೆಗಳನ್ನು ನೀಗಿಸುವುದು, ಭಾರಿ ಪ್ರಮಾಣದ ಆಕ್ಷನ್‌ ದೃಶ್ಯಗಳು, ಸಾಹಸ ದೃಶ್ಯಗಳಿಗೆ ವಿಎಫ್‌ಎಕ್ಸ್‌ ಅತ್ಯಂತ ಅಗತ್ಯ ಹಾಗಾಗಿ ವಿಎಫ್‌ಎಕ್ಸ್‌ಗೆ ದೊಡ್ಡ ಮೊತ್ತ ಖರ್ಚಾಗುತ್ತಿದೆ. ಬಾಹುಬಲಿ ಸಿನಿಮಾದಲ್ಲಿಯೂ ಸಹ ವಿಎಫ್‌ಎಕ್ಸ್‌ ಅನ್ನು ದೊಡ್ಡ ಮಟ್ಟದಲ್ಲಿ ಬಳಸಿದ್ದರು ನಿರ್ದೇಶಕ ರಾಜಮೌಳಿ.

    ಆರ್‌ಆರ್‌ಆರ್ ಸಿನಿಮಾದ ಒಟ್ಟು ಬಜೆಟ್ 350-400 ಕೋಟಿ ಆಗಿದ್ದು, ಸುಮಾರು 150 ಕೋಟಿಗೂ ಹೆಚ್ಚು ಹಣ ವಿಎಫ್‌ಎಕ್ಸ್‌ಗೆ ಖರ್ಚಾಗಲಿದೆ ಎನ್ನಲಾಗುತ್ತಿದೆ. ಡಿವಿವಿ ದಾನಯ್ಯ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

    Recommended Video

    ಕುಂಬಳ ಕಾಯಿ ಹೊಡೆದ ಪ್ರಶಾಂತ್ ನೀಲ್ ಅಂಡ್ ಟೀಮ್ | Filmibeat Kannada

    ಆರ್‌ಆರ್‌ಆರ್ ಸಿನಿಮಾದಲ್ಲಿ ದೊಡ್ಡ ನಟರ ದಂಡೇ ಇದೆ. ಜೂ ಎನ್‌ಟಿಆರ್, ರಾಮ್ ಚರಣ್ ತೇಜಾ, ಆಲಿಯಾ ಭಟ್, ಒಲಿವಿಯಾ ಮೋರಿಸ್, ಅಜಯ್ ದೇವಗನ್ ಅವರುಗಳು ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

    English summary
    RRR movie VFX will cost more money than shooting expenses. RRR shooting going in high speed.
    Saturday, December 19, 2020, 17:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X