'ಪುಷ್ಪ' ಚಿತ್ರಕ್ಕೆ ವರದಾನವಾಯ್ತು 'RRR' ಪೋಸ್ಟ್‌ ಪೋನ್‌ !

ಸದ್ಯಕ್ಕೆ ರಿಲೀಸ್ ಆಗಿ ಬಾಕ್ಸಾಫೀಸ್‌ನಲ್ಲಿ ಭಾರಿ ಸದ್ದು ಮಾಡುತ್ತಿರುವ ಚಿತ್ರಗಳ ಸಾಲಲ್ಲಿ ಪುಷ್ಪ ಮತ್ತು ಶ್ಯಾಮ್‌ ಸಿಂಗ ರಾಯ್‌ ಚಿತ್ರಗಳು ಇವೆ. ಶ್ಯಾಮ್‌ ಸಿಂಗ ರಾಯ್‌ ಚಿತ್ರ ಬಾಕ್ಸಾಫೀಸ್‌ನಲ್ಲಿ ನಿಧಾನವಾಗಿ ಹೆಚ್ಚು ಗಳಿಕೆಯತ್ತ ದಾಪುಗಾಲು ಇಡುತ್ತಿದೆ. ಆದರೆ ಪುಷ್ಪ ಗಳಿಕೆಯಲ್ಲಿ ದಾಖಲೆ ಬರೆಯುತ್ತಿದೆ.

ಪುಷ್ಪ ಚಿತ್ರಕ್ಕೆ, ಪುಷ್ಪ ಚಿತ್ರವೇ ಸರಿ ಸಾಟಿ. ಸದ್ಯಕ್ಕೆ ಪುಷ್ಪ ಚಿತ್ರಕ್ಕೆ ಕಾಂಪಿಟೇಷನ್‌ ನೀಡಲು ಯಾವ ಚಿತ್ರಗಳೂ ಇಲ್ಲ. ಯಾವ ದೊಡ್ಡ ಚಿತ್ರಗಳೂ ಇಲ್ಲದ ಕಾರಣ ಪುಷ್ಪ ಚಿತ್ರ ಸುಲಭವಾಗಿ ಸಾಧನೆ ಮಾಡಲು ದಾರಿ ಆಗಿದೆ. ಪುಷ್ಪ ಚಿತ್ರದ ಗಳಿಕೆಯ ದಾಖಲೆಯನ್ನು ಅದೇ ಚಿತ್ರ ಮುರಿದು ಹಾಕಿದೆ.

ಇನ್ನು RRR ಚಿತ್ರದ ರಿಲೀಸ್‌ ಪೋಸ್ಟ್‌ ಪೋನ್ ಆಗಿರುವುದು ಕೂಡ ಪುಷ್ಪ ಚಿತ್ರಕ್ಕೆ ವರದಾನ ಆಗಲಿದೆ. ಜನವರಿ 7ಕ್ಕೆ RRR ಚಿತ್ರದ ರಿಲೀಸ್‌ ದಿನಾಂಕ ನಿಗದಿ ಆಗಿತ್ತು. ಆದರೆ ಆ ಚಿತ್ರದ ರಿಲೀಸ್ ಮುಂದೆ ಹೋದ ಕಾರಣ ಪುಷ್ಪ ಚಿತ್ರ ತಂಡ ನಿಟ್ಟುಸಿರು ಬಿಡುವಂತೆ ಆಗಿದೆ.

rrr ಪೋಸ್ಟ್‌ ಪೋನ್‌ : ಪುಷ್ಪ ಚಿತ್ರಕ್ಕೆ ಮತ್ತಷ್ಟು ಪುಷ್ಟಿ!

rrr ಪೋಸ್ಟ್‌ ಪೋನ್‌ : ಪುಷ್ಪ ಚಿತ್ರಕ್ಕೆ ಮತ್ತಷ್ಟು ಪುಷ್ಟಿ!

ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ಕಳೆದ ವರ್ಷ ಡಿಸೆಂಬರ್‌ 17ಕ್ಕೆ ತೆರೆಗೆ ಬಂದಿದೆ. ಚಿತ್ರ ರಿಲೀಸ್ ಆಗಿ ಮೂರು ವಾರ ಕಳೆಯುತ್ತಿದೆ. ಇನ್ನು ಜನವರಿ 7ಕ್ಕೆ RRR ರಿಲೀಸ್ ಬಳಿಕ ಪುಷ್ಪ ಹವಾ ಸಂಪೂರ್ಣವಾಗಿ ಕುಂದುತ್ತದೆ ಎಂದು ಹೇಳಲಾಗುತ್ತಿತ್ತು. ಯಾಕೆಂದರೆ ಆರ್‌ಆರ್ಆರ್ ಚಿತ್ರದ ರಿಲೀಸ್‌ಗಾಗಿ ನಿರೀಕ್ಷೆಯಿಂದ ವರ್ಷದಿಂದ ಕಾದಿದ್ದರು ಪ್ರೇಕ್ಷಕರು. ಹಾಗಾಗಿ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆ ಮನೆ ಮಾಡಿದ್ದವು. ಆದರೆ ಈಗ ಆರ್‌ಆರ್‌ಆರ್‌ ಚಿತ್ರದ ರಿಲೀಸ್ ಪೋಸ್ಟ್‌ ಪೋನ್‌ ಆಗಿರುವ ಕಾರಣಕ್ಕೆ ಪುಷ್ಪ ಚಿತ್ರಕ್ಕೆ ಮತ್ತಷ್ಟು ಕಾಲಾವಕಾಶ ಸಿಕ್ಕಿದೆ. ಈ ಗ್ಯಾಪ್‌ನಲ್ಲಿ ಚಿತ್ರ ಮತ್ತಷ್ಟು ಗಳಿಕೆ ಮಾಡಲಿದೆ.

ತನ್ನ ದಾಖಲೆ, ತಾನೇ ಮುರಿದ ಪುಷ್ಪ ಚಿತ್ರ ತಂಡ!

ತನ್ನ ದಾಖಲೆ, ತಾನೇ ಮುರಿದ ಪುಷ್ಪ ಚಿತ್ರ ತಂಡ!

ಇನ್ನು ಪುಷ್ಪ ಚಿತ್ರದ ದಾಖಲೆಯನ್ನು ಸದ್ಯ ಅದೇ ಚಿತ್ರ ಬ್ರೇಕ್‌ ಮಾಡಿದೆ. ಮೊದಲ ವಾರಾಂತ್ಯದಲ್ಲಿ ಮಾಡಿದ ದಾಖಲೆಯನ್ನು ಮೂರನೇ ವಾರಾಂತ್ಯದಲ್ಲಿ ಪುಷ್ಪ ಚಿತ್ರ ಬ್ರೇಕ್‌ ಮಾಡಿದೆ. ಪುಷ್ಪ ಚಿತ್ರ ಮೊದಲ ವಾರದಲ್ಲಿ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಂಡಿದೆ. ಮೊದಲ ವಾರಾಂತ್ಯಕ್ಕೆ ಪುಷ್ಪ 12.68 ಕೋಟಿ ಕಲೆಕ್ಷನ್‌ ಆಗಿತ್ತು. ಮೂರನೇ ವಾರಾಂತ್ಯಕ್ಕೆ ಚಿತ್ರದ ಕಲೆಕ್ಷನ್ 15.85 ಕೋಟಿಯನ್ನು ಗಳಿಕೆ ಮಾಡಿದೆ. ಎರಡನೇ ವಾರಂತ್ಯಕ್ಕೆ 10.31 ಕೋಟಿ ರೂ ಹಣವನ್ನು ಗಳಿಕೆ ಮಾಡಿತ್ತು. ಈ ವಿಚಾರವನ್ನು ಟ್ರೇಡ್‌ ಅನಾಲಿಸ್ಟ್‌ಗಳು ತೆರೆದಿಟ್ಟಿದ್ದಾರೆ.

83, ಸ್ಪೈಡರ್‌ ಮ್ಯಾನ್‌ ಚಿತ್ರಗಳ ನಡುವೆ ಗೆದ್ದ ಪುಷ್ಪ!

83, ಸ್ಪೈಡರ್‌ ಮ್ಯಾನ್‌ ಚಿತ್ರಗಳ ನಡುವೆ ಗೆದ್ದ ಪುಷ್ಪ!

ಪುಷ್ಪ ಚಿತ್ರ ಪ್ಯಾನ್‌ ಇಂಡಿಯಾ ಹೆಸರಲ್ಲಿ ಬಹು ಭಾಷೆಗೆ ಡಬ್ ಆಗಿ ರಿಲೀಸ್ ಆಗಿದೆ. ಆದರೆ ತೆಲುಗು ಜೊತೆಗೆ ಈ ಚಿತ್ರಕ್ಕೆ ಹಿಂದಿಯಲ್ಲಿ ಉತ್ತಮ ರೆಸ್ಪಾನ್ಸ್‌ ಸಿಗುತ್ತಿದೆ. ಪುಷ್ಪ ಹಿಂದಿ ಅವತರಣಿಕೆಯಲ್ಲಿ ದಾಖಲೆ ಮಟ್ಟದ ಕಲೆಕ್ಷನ್‌ ಮಾಡುತ್ತಿದೆ. ಜೊತೆಗೆ ಹೊಸ, ಹೊಸ ಹೆಜ್ಜೆ ಗುರುತುಗಳನ್ನು ಮೂಡಿಸಿದೆ. ರಿಲೀಸ್ ಮೊದಲ ದಿನ 3.33 ಕೋಟಿ ಗಳಿಕೆ ಮಾಡಿದ ಪುಷ್ಪ, 17ನೇ ದಿನಕ್ಕೆ 6 ಕೋಟಿಗೂ ಅಧಿಕ ದಾಖಲೆ ಮಾಡಿದೆ. 83 ಮತ್ತು ಸ್ಪೈಡರ್ ಮ್ಯಾನ್‌ ಚಿತ್ರಗಳ ಸ್ಪರ್ಧೆ ಇದ್ದರೂ ಕೂಡ ಪುಷ್ಪ ಅವುಗಳನ್ನು ಗಳಿಕೆಯಲ್ಲಿ ಹಿಂದಿಕ್ಕಿದೆ.

ನಾಲ್ಕನೇ ವಾರವೂ ದಾಖಲೆ ಬರೆಯಲಿರುವ ಪುಷ್ಪ!

ನಾಲ್ಕನೇ ವಾರವೂ ದಾಖಲೆ ಬರೆಯಲಿರುವ ಪುಷ್ಪ!

ಇನ್ನು ಪುಷ್ಪ ಚಿತ್ರಕ್ಕೆ ಎದುರಾಗಿ ಸದ್ಯ ಯಾವುದೇ ದೊಡ್ಡ ಚಿತ್ರ ಇಲ್ಲ. ಹಾಗಾಗಿ ಪುಷ್ಪ ಚಿತ್ರ ನಾಲ್ಕನೇ ವಾರವೂ ಕೂಡ ಭರ್ಜರಿ ಕಲೆಕ್ಷನ್‌ ಮಾಡುವ ಸೂಚನೆ ಕೊಟ್ಟಿದೆ. ಅಷ್ಟಕ್ಕೂ ಕೊರೊನಾ ಹಾವಳಿ, ಲಾಕ್‌ಡೌನ್‌ ಇಂದಾಗಿ ಯಾವುದೇ ದೊಡ್ಡ ಚಿತ್ರಗಳು ರಿಲೀಸ್‌ ಆಗಲು ಧೈರ್ಯ ಮಾಡುತ್ತಿಲ್ಲ. ಹಾಗಾಗಿ 'ಪುಷ್ಪ' ಚಿತ್ರ ಯಾವುದೇ ಭಯವಿಲ್ಲದೆ, ಇನ್ನು ಒಂದಷ್ಟು ಕಾಲ ಚಿತ್ರ ಮಂದಿರದಲ್ಲಿ ಉಳಿಯಲಿದೆ. ಈ ಮೂಲಕ ಮತ್ತಷ್ಟು ದಾಖಲೆಗಳನ್ನು ಮಾಡಲಿದೆ ಪುಷ್ಪ ಚಿತ್ರ.

More from Filmibeat

English summary
RRR Postpone Is Lucky For ALLu Arjun, Samantha, Rashmika Starrer Puhpa,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X