'RRR' ರಿಲೀಸ್ ಮುಂದೂಡಿಕೆ ಬಹುತೇಕ ಖಚಿತ: ಸದ್ಯದಲ್ಲೇ ಅಧಿಕೃತ ಮಾಹಿತಿ?

ಭಾರತೀಯ ಚಿತ್ರ ರಂಗದ ಬಹುನೀರೀಕ್ಷಿತ ಚಿತ್ರ ಆರ್‌ಆರ್‌ಆರ್‌ ಇದೇ ಜನವರಿ 7ರಂದು ತೆರೆಗೆ ಬರಲು ಸಜ್ಜಾಗಿದೆ. ವರ್ಷಗಳಿಂದ ಈ ಚಿತ್ರಕ್ಕಾಗಿ ಜನ ಕಾಯ್ತಿದ್ದಾರೆ. ಆರ್‌ಆರ್‌ಆರ್‌ ಸಿನಿಮಾವನ್ನು ನೋಡಲು ವಿಶ್ವದಾದ್ಯಂತ ಜನ ತುದಿಗಾಲಲ್ಲಿ ನಿಂತಿದ್ದಾರೆ. ಇನ್ನೇನು 2022 ಜನವರಿ ಬಂದೇ ಬಿಟ್ಟಿದೆ. ಹಾಗಾಗಿ ಆರ್‌ಆರ್‌ಆರ್‌ ರಿಲೀಸ್‌ಗೆ ದಿನಗಳನ್ನು ಪ್ರೇಕ್ಷಕರು ಲೆಕ್ಕ ಹಾಕುತ್ತಿದ್ದಾರೆ.

ಆದರೆ ಆರ್‌ಆರ್‌ಆರ್‌ ಚಿತ್ರ ತಂಡ ಮಾತ್ರ ಎಲ್ಲರಿಗೂ ಶಾಕ್‌ ಕೊಡಲು ಮುಂದಾಗಿದೆ. ಅಂದರೆ ಸದ್ಯ RRR ಚಿತ್ರದ ರಿಲೀಸ್‌ ಪೋಸ್ಟ್‌ ಪೋನ್ ಆಗುತ್ತೆ ಎನ್ನಲಾಗುತ್ತಿದೆ. ಕೊನೆ ಗಳಿಗೆಯಲ್ಲಿ ಆರ್‌ಆರ್ಆರ್ ಬಿಡುಗಡೆ ಮುಂದೆ ಹೋಗುವ ಸಾಧ್ಯತೆ ಹೆಚ್ಚಿದೆ ಎಂದು ಟಾಲಿವುಡ್‌ನಲ್ಲಿ ಗುಸುಗುಸು ಕೇಳಿ ಬರುತ್ತಿದೆ.

ಈ ಚಿತ್ರವನ್ನು ಆರ್‌ಆರ್‌ಆರ್‌ ಚಿತ್ರ ಮೂಲಕ ಬರ ಮಾಡಿಕೊಳ್ಳಲು ಸಿನಿಮಾ ಮಂದಿ ಕಾತರರಾಗಿದ್ದರು. ಹಾಗಾಗಿ ಒಂದಷ್ಟು ಚಿತ್ರಗಳ ರಿಲೀಸ್ ದಿನಾಂಕವನ್ನು ಕೂಡ ಬದಲಾಯಿಲಾಗಿದೆ. ಆದರೆ ಈಗ ಆರ್‌ಆರ್‌ಆರ್‌ ಖಚಿತವಾಗಿ ಪೋಸ್ಟ್‌ ಪೋನ್‌ ಆಗುತ್ತದೆ ಎನ್ನಲಾಗುತ್ತಿದೆ.

RRR ರಿಲೀಸ್‌ಗೆ ಓಮಿಕ್ರಾನ್ ಅಡ್ಡಗಾಲು!

RRR ರಿಲೀಸ್‌ಗೆ ಓಮಿಕ್ರಾನ್ ಅಡ್ಡಗಾಲು!

ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಹಲವು ಕಡೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಜಾರಿ ಆಗುತ್ತಿದೆ. ಚಿತ್ರ ಮಂದಿರಗಳಿಗೆ ಬೀಗ ಬೀಳುತ್ತಿದೆ. ದೆಹಲಿ, ಮುಂಬೈ, ಕರ್ನಾಕಟದಲ್ಲಿ ಅದಾಗಲೇ ಓಮಿಕ್ರಾನ್ ನಿಯಂತ್ರಣಕ್ಕೆ ನಿಯಮಗಳು ಜಾರಿ ಆಗಿವೆ. ರಾತ್ರಿ ಕರ್ಫ್ಯೂ ಕೂಡ ಜಾರಿ ಆಗಿದೆ. ಇನ್ನು ಚಿತ್ರ ಮಂದಿರಗಳಲ್ಲಿನ ಶೋಗಳನ್ನು ಕಡಿತಗೊಳಿಸಲಾಗಿದೆ. ಹೆಚ್ಚು ಜನ ಸೇರುವ ಕಾರಣಕ್ಕೆ ಚಿತ್ರ ಮಂದಿರಗಳಿಗೆ ಬೀಗ ಹಾಕಿದರೂ ಅಚ್ಚರಿ ಇಲ್ಲ. ಹಾಗಾಗಿ ಈ ಸಮಯದಲ್ಲಿ ಆರ್‌ಆರ್‌ಆರ್‌ ರಿಲೀಸ್ ಆದರೆ ತೊಂದರೆ ಕಟ್ಟಿಟ್ಟ ಬುತ್ತಿ. ಹಾಗಾಗಿ ಚಿತ್ರದ ರಿಲೀಸ್‌ ಪೋಸ್ಟ್‌ ಪೋನ್‌ ಮಾಡಲು ಚಿಂತನೆ ನಡೆಸಿದೆಯಂತೆ ಚಿತ್ರ ತಂಡ.

ಪೋಸ್ಟ್ ಪೋನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿರುವ ಚಿತ್ರ ತಂಡ!

ಪೋಸ್ಟ್ ಪೋನ್‌ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿರುವ ಚಿತ್ರ ತಂಡ!

ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇದ್ದರೂ, ಚಿತ್ರವನ್ನು ರಿಲೀಸ್ ಮಾಡುವ ದಾರಿ ಮುಚ್ಚಿದೆ. ಅನಿವಾರ್ಯವಾಗಿ ಚಿತ್ರವನ್ನು ಮುಂದೂಡುವ ಸಂದರ್ಭ ಚಿತ್ರ ತಂಡಕ್ಕೆ ಎದುರಾಗಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಹೆಚ್ಚಿನ ಚರ್ಚೆ ನಡೆಯುತ್ತಿದೆ. ಆದರೆ ಚಿತ್ರ ತಂಡ ಮಾತ್ರ ಇನ್ನೂ ಚಿತ್ರ ಪೋಸ್ಟ್ ಪೋನ್‌ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಸದ್ಯದಲ್ಲೆ ಆರ್‌ಆರ್‌ಆರ್‌ ಮುಂದೂಡಿಕೆಯ ಬಗ್ಗೆ ಅಧಿಕೃತವಾಗಿ ಚಿತ್ರ ತಂಡ ಮಾಹಿತಿ ನೀಡಲಿದೆ.

RRR ಚಿತ್ರಕ್ಕೆ ದಾರಿ ಬಿಟ್ಟ ಹಲವು ಚಿತ್ರಗಳು!

RRR ಚಿತ್ರಕ್ಕೆ ದಾರಿ ಬಿಟ್ಟ ಹಲವು ಚಿತ್ರಗಳು!

ಇನ್ನು ಆರ್‌ಆರ್‌ಆರ್‌ ಚಿತ್ರಕ್ಕಾಗಿ ಹಲವು ಚಿತ್ರಗಳು ದಾರಿ ಮಾಡಿ ಕೊಟ್ಟಿವೆ. ಆರ್‌ಆರ್‌ಆರ್ ಚಿತ್ರಕ್ಕೂ ಮುನ್ನ ರಿಲೀಸ್ ದಿನಾಂಕವನ್ನು ಜನವರಿಯಲ್ಲಿ ಹಲವು ಚಿತ್ರಗಳು ರಿಲೀಸ್ ದಿನಾಂಕವನ್ನು ನಿಗಧಿ ಮಾಡಿಕೊಂಡಿದ್ದವು. ಆದರೆ ಆರ್‌ಆರ್‌ಆರ್‌ ಚಿತ್ರಕ್ಕಾಗಿ ಇತಮ್ಮ ಚಿತ್ರ ರಿಲೀಸ್ ದಿನಾಂಕವನ್ನು ಮುಂದೂಡಿ ಆರ್‌ಆರ್‌ಆರ್‌ ಚಿತ್ರಕ್ಕೆ ಬೆಂಬಲ ನೀಡಿವೆ. ಈ ಸಾಲಿನಲ್ಲಿ, ಗಂಗೂಬಾಯಿ ಕಾಐಆಯಾವಾಡಿ, ಭೀಮ್ಲಾ ನಾಯಕ್, ಸರ್ಕಾರು ವಾರಿ ಪಾಠ, ಫನ್ 3 ಚಿತ್ರಗಳು ಇವೆ. ಹಾಗಾಗಿ ಈಗ ಚಿತ್ರದ ರಿಲೀಸ್‌ ಪೋಸ್ಟ್‌ ಆದರೆ ಆ ಚಿತ್ರಗಳಿಗೂ ತೊಂದರೆ ಆಗುತ್ತದೆ.

RRR ರಿಲೀಸ್‌ಗೆ ದಿನಗಣನೆ ಆರಂಭ!

RRR ರಿಲೀಸ್‌ಗೆ ದಿನಗಣನೆ ಆರಂಭ!

ಆರ್‌ಆರ್‌ಆರ್‌ ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಜನವರಿ 7 ಅಂದು, ಶುಕ್ರವಾರ ಚಿತ್ರ ತೆರೆಗೆ ಬರಲಿದೆ. ಜನವರಿ 7ಕ್ಕೆ ರಿಲೀಸ್ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿದೆ. ಈಗಾಗಲೇ ಚಿತ್ರದ ಪ್ರಚಾರವನ್ನು ಕೂಡ ಅದ್ಧೂರಿಯಾಗಿ ಮಾಡುತ್ತಿದೆ ಚಿತ್ರ ತಂಡ. ಪ್ರಚಾರಕ್ಕಾಗಿಯೇ ಹೆಚ್ಚಿನ ಹಣವನ್ನು ಚಿತ್ರ ತಂಡ ಖರ್ಚು ಮಾಡುತ್ತಿದೆ. ಪ್ರೇಕ್ಷಕರು ಕೂಡ ಚಿತ್ರವನ್ನು ನೋಡಲು ಸಜ್ಜಾಗಿದ್ದಾರೆ. ಆದರೆ ಆ ಸಾಧ್ಯತೆ ಕಡಿಮೆ ಇದೆ.

More from Filmibeat

English summary
RRR Will Be Postponed Indefinitely: It Will Be Announce Soon,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X