'RRR' ರಿಲೀಸ್ ಮುಂದೂಡಿಕೆ: ಅಧಿಕೃತ ಮಾಹಿತಿ ಕೊಟ್ಟ ಚಿತ್ರತಂಡ!

ಭಾರತೀಯ ಚಿತ್ರರಂಗದ ಬಹುನೀರೀಕ್ಷಿತ ಚಿತ್ರ ಆರ್‌ಆರ್‌ಆರ್‌ ಇದೇ ಜನವರಿ 7ರಂದು ತೆರೆಗೆ ಬರಬೇಕಿತ್ತು. ವರ್ಷಗಳಿಂದ ಈ ಚಿತ್ರಕ್ಕಾಗಿ ಜನ ಕಾಯ್ತಿತ್ತಿದ್ದರು. ಆರ್‌ಆರ್‌ಆರ್‌ ಸಿನಿಮಾವನ್ನು ನೋಡಲು ವಿಶ್ವಾದ್ಯಂತ ಜನ ತುದಿಗಾಲಲ್ಲಿ ನಿಂತಿದ್ದರು. ಆರ್‌ಆರ್‌ಆರ್‌ ರಿಲೀಸ್‌ಗೆ ದಿನಗಳನ್ನು ಪ್ರೇಕ್ಷಕರು ಲೆಕ್ಕ ಹಾಕುತ್ತಿದ್ದರು. ಆದರೆ ರಿಲೀಸ್‌ ಮುಂದೂಡಿ ಚಿತ್ರ ತಂಡ ಶಾಕಿಂಗ್‌ ನ್ಯೂಸ್‌ ಕೊಟ್ಟಿದೆ.

ಕೆಲವು ದಿನಗಳಿಂದ ಚಿತ್ರ ಮುಂದೂಡಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಸದ್ಯ ಈ ಬಗ್ಗೆ ಚಿತ್ರ ತಂಡವೇ ಅಧಿಕೃತ ಮಾಹಿತಿ ಕೊಟ್ಟಿದೆ. ಇದು ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಶಾಕಿಂಗ್‌ ಸುದ್ದಿ ಆಗಿದೆ. ಆದರೂ ಇದು ಚಿತ್ರ ತಂಡಕ್ಕೆ ಅನಿವಾರ್ಯ ಆಗಿತ್ತು.

ಈ ಚಿತ್ರವನ್ನು ಆರ್‌ಆರ್‌ಆರ್‌ ಚಿತ್ರ ಮೂಲಕ ಬರ ಮಾಡಿಕೊಳ್ಳಲು ಸಿನಿಮಾ ಮಂದಿ ಕಾತರರಾಗಿದ್ದರು. ಹಾಗಾಗಿ ಒಂದಷ್ಟು ಚಿತ್ರಗಳ ರಿಲೀಸ್ ದಿನಾಂಕವನ್ನು ಕೂಡ ಬದಲಾಯಿಸಿ ಕೊಂಡಿವೆ. ಈಗ ಆ ಚಿತ್ರಗಳಿಗೂ ಕೂಡ ಗೊಂದಲ ಉಂಟಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಪೋನ್‌ ಬಗ್ಗೆ ಅಧಿಕೃತ ಮಾಹಿತಿ!

RRR ಚಿತ್ರದ ರಿಲೀಸ್ ಮುಂದೂಡಿಕೆಗೆ ಓಮಿಕ್ರಾನ್‌ ಹಬ್ಬುತ್ತಿರುವುದೇ ಕಾರಣ. ಓಮಿಕ್ರಾನ್‌ ಹೆಚ್ಚುತ್ತಿರುವುದರಿಂದ ಹಲವು ರಾಜ್ಯಗಳಲ್ಲಿ ಚಿತ್ರ ಮಂದಿರಗಳಿಗೆ ಬೀಗ ಬಿದ್ದಿದೆ. ಹಾಗಾಗಿ ಅನಿವಾರ್ಯವಾಗಿ ಚಿತ್ರದ ರಿಲೀಸ್ ಮುಂದೂಡ ಬೇಕಾಗಿದೆ ಎಂದಿದೆ ಚಿತ್ರ ತಂಡ. ಈ ಬಗ್ಗೆ ನಿರ್ಮಾಣ ಸಂಸ್ಥೆ ಟ್ವೀಟರ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.


"ಕೆಲವು ಸಂದರ್ಭಗಳು ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಭಾರತೀಯ ಹಲವು ರಾಜ್ಯಗಳಲ್ಲಿ ಚಿತ್ರ ಮಂದಿರಗಳಿಗೆ ಬೀಗ ಹಾಕಲಾಗಿದೆ. ನಮಗೆ ಬೇರೆ ದಾರಿ ಇಲ್ಲ. ನಿಮ್ಮ ನಿರೀಕ್ಷೆ, ಕಾತರತೆಯನ್ನು ಹಾಗೆ ಉಳಿಸಿಕೊಳ್ಳಿ, ಸರಿಯಾದ ಸಮಯದಲ್ಲಿ ಭಾರತೀಯ ಚಿತ್ರರಂಗದ ವೈಭವನ್ನು ಮರಳಿ ತರುತ್ತೇವೆ". ಎಂದು ಪೋಸ್ಟ್‌ನಲ್ಲಿ ಬರೆಯಲಾಗಿದೆ.

RRR ರಿಲೀಸ್‌ಗೆ ಓಮಿಕ್ರಾನ್ ಅಡ್ಡಗಾಲು!

RRR ರಿಲೀಸ್‌ಗೆ ಓಮಿಕ್ರಾನ್ ಅಡ್ಡಗಾಲು!

ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ಹಲವು ಕಡೆ ಲಾಕ್‌ಡೌನ್‌, ನೈಟ್‌ ಕರ್ಫ್ಯೂ ಜಾರಿ ಆಗುತ್ತಿದೆ. ಚಿತ್ರ ಮಂದಿರಗಳಿಗೆ ಬೀಗ ಬೀಳುತ್ತಿದೆ. ದೆಹಲಿ, ಮುಂಬೈ, ಕರ್ನಾಕಟದಲ್ಲಿ ಅದಾಗಲೇ ಓಮಿಕ್ರಾನ್ ನಿಯಂತ್ರಣಕ್ಕೆ ನಿಯಮಗಳು ಜಾರಿ ಆಗಿವೆ. ರಾತ್ರಿ ಕರ್ಫ್ಯೂ ಕೂಡ ಜಾರಿ ಆಗಿದೆ. ಇನ್ನು ಚಿತ್ರ ಮಂದಿರಗಳಲ್ಲಿನ ಶೋಗಳನ್ನು ಕಡಿತ ಗೊಳಿಸಲಾಗಿದೆ. ಹಾಗಾಗಿ ಈ ಸಮಯದಲ್ಲಿ ಆರ್‌ಆರ್‌ಆರ್‌ ರಿಲೀಸ್ ಆದರೆ ತೊಂದರೆ ಕಟ್ಟಿಕ್ಕ ಬುತ್ತಿ. ಹಾಗಾಗಿ ಚಿತ್ರದ ರಿಲೀಸ್‌ ಪೋಸ್ಟ್‌ ಪೋನ್‌ ಮಾಡಲು ಚಿತ್ರ ತಂಡ ನಿರ್ಧರಿಸಿದೆ.

RRR ಚಿತ್ರಕ್ಕೆ ದಾರಿ ಬಿಟ್ಟ ಹಲವು ಚಿತ್ರಗಳು!

RRR ಚಿತ್ರಕ್ಕೆ ದಾರಿ ಬಿಟ್ಟ ಹಲವು ಚಿತ್ರಗಳು!

ಇನ್ನು RRR ಚಿತ್ರಕ್ಕಾಗಿ ಹಲವು ಚಿತ್ರಗಳು ದಾರಿ ಮಾಡಿ ಕೊಟ್ಟಿವೆ. ಆರ್‌ಆರ್‌ಆರ್ ಚಿತ್ರಕ್ಕೂ ಮುನ್ನ ರಿಲೀಸ್ ದಿನಾಂಕವನ್ನು ಜನವರಿಯಲ್ಲಿ ಹಲವು ಚಿತ್ರಗಳು ರಿಲೀಸ್ ದಿನಾಂಕವನ್ನು ನಿಗದಿ ಮಾಡಿಕೊಂಡಿದ್ದವು. ಆದರೆ ಆರ್‌ಆರ್‌ಆರ್‌ ಚಿತ್ರಕ್ಕಾಗಿ ಇತಮ್ಮ ಚಿತ್ರ ರಿಲೀಸ್ ದಿನಾಂಕವನ್ನು ಮುಂದೂಡಿ ಆರ್‌ಆರ್‌ಆರ್‌ ಚಿತ್ರಕ್ಕೆ ಬೆಂಬಲ ನೀಡಿವೆ. ಈ ಸಾಲಿನಲ್ಲಿ, ಗಂಗೂಬಾಯಿ ಕಾಥೀಯಾವಾಡಿ, ಭೀಮ್ಲಾ ನಾಯಕ್, ಸರ್ಕಾರು ವಾರಿ ಪಾಠ, ಫನ್ 3 ಚಿತ್ರಗಳು ಇವೆ. ಹಾಗಾಗಿ ಈಗ ಚಿತ್ರದ ರಿಲೀಸ್‌ ಪೋಸ್ಟ್‌ ಆದರೆ ಆ ಚಿತ್ರಗಳಿಗೂ ತೊಂದರೆ ಆಗುತ್ತದೆ.

ಜನವರಿ 7ಕ್ಕೆ ರಿಲೀಸ್‌ ಆಗಬೇಕಿದ್ದ RRR!

ಜನವರಿ 7ಕ್ಕೆ ರಿಲೀಸ್‌ ಆಗಬೇಕಿದ್ದ RRR!

ಆರ್‌ಆರ್‌ಆರ್‌ ಚಿತ್ರದ ರಿಲೀಸ್‌ಗೆ ದಿನಗಣನೆ ಶುರುವಾಗಿತ್ತು. ಜನವರಿ 7 ಚಿತ್ರವನ್ನು ಕಣ್ತುಂಬಿ ಕೊಳ್ಳಲು ಪ್ರೇಕ್ಷಕರು ಸಿದ್ಧವಾಗಿದ್ದರು. ಜನವರಿ 7ಕ್ಕೆ ರಿಲೀಸ್ ದಿನಾಂಕವನ್ನು ಚಿತ್ರತಂಡ ನಿಗದಿ ಮಾಡಿತ್ತು. ಈಗಾಗಲೇ ಚಿತ್ರದ ಪ್ರಚಾರವನ್ನು ಕೂಡ ಅದ್ಧೂರಿಯಾಗಿ ಮಾಡುತ್ತಿದೆ ಚಿತ್ರ ತಂಡ. ಪ್ರಚಾರಕ್ಕಾಗಿಯೇ ಹೆಚ್ಚಿನ ಹಣವನ್ನು ಚಿತ್ರ ತಂಡ ಖರ್ಚು ಮಾಡುತ್ತಿದೆ. ಆದರೆ ಸದ್ಯ ಚಿತ್ರದ ರಿಲೀಸ್‌ ಪೋಸ್ಟ್ ಆಗಿದೆ. ಮುಂದಿನ ದಿನಾಂಕವನ್ನು ಚಿತ್ರ ತಂಡ ಸದ್ಯದಲ್ಲೇ ಪ್ರಕಟ ಮಾಡಲಿದೆ.

More from Filmibeat

English summary
RRR Postponed Official Statement Is Out From The Team,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X