RRR ಪ್ರಿ ರಿಲೀಸ್‌ ಇವೆಂಟ್‌ಗೆ ಚಿಕ್ಕಬಳ್ಳಾಪುರ ಬಳಿ ಸ್ಥಳ ನಿಗದಿ, ಸಿದ್ಧತೆ ಆರಂಭ

By ಚಿಕ್ಕಬಳ್ಳಾಪುರ ಪ್ರತಿನಿಧಿ

RRR ಸಿನಿಮಾ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯ ಈಗಾಗಲೇ ಆರಂಭವಾಗಿದ್ದು, ಕರ್ನಾಟಕದಲ್ಲಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ನಿರ್ಮಾಣ ಸಂಸ್ಥೆ ತಯಾರಿ ಆರಂಭಿಸಿದೆ.

Recommended Video

RRR ಗೆ ಸ್ಟಾರ್ ಗಳು ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿ ಪಡ್ತಿರಾ | SS Rajamuli

RRR ಸಿನಿಮಾವನ್ನು ಕರ್ನಾಟಕದಲ್ಲಿ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡುತ್ತಿದ್ದು, ಕೆವಿಎನ್‌ ವತಿಯಿಂದಲೇ ಕರ್ನಾಟಕದಲ್ಲಿ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಆಯೋಜನೆಗೊಳ್ಳುತ್ತಿದೆ.

ಸಾಮಾನ್ಯವಾಗಿ ಪರಭಾಷೆಯ ಸಿನಿಮಾಗಳ ಪ್ರೀ ರಿಲೀಸ್ ಇವೆಂಟ್‌ಗಳು ಬೆಂಗಳೂರಿನಲ್ಲಿ ಮಾಡುವುದು ಸಾಮಾನ್ಯ ಆದರೆ ಈ ಬಾರಿ RRR ಸಿನಿಮಾವು ಪ್ರೀ ರಿಲೀಸ್ ಇವೆಂಟ್ ಅನ್ನು ಚಿಕ್ಕಬಳ್ಳಾಪುರದಲ್ಲಿ ಆಯೋಜಿಸಲಾಗುತ್ತಿದೆ.

RRR Pre Release Event Will Happen Near Chikkaballapura On March 19

ಚಿಕ್ಕಬಳ್ಳಾಪುರದ ಬಳಿ ಅಗಲಗುರ್ಕಿ ಗ್ರಾಮದ ಬಳಿ ದೊಡ್ಡ ಮೈದಾನದಲ್ಲಿ ಅದ್ಧೂರಿಯಾಗಿ 'RRR' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ವೇದಿಕೆ ಸಿದ್ಧಪಡಿಸುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದ್ದು ಹಲವು ಜೆಸಿಬಿ, ಟ್ರ್ಯಾಕ್ಟರ್‌ಗಳು, ಹಲವು ಸಿಬ್ಬಂದಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೆರಡು ದಿನದಲ್ಲಿ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಅದಕ್ಕಾಗಿ ವೇಗವಾಗಿ ಕೆಲಸಗಳನ್ನು ಮಾಡಲಾಗುತ್ತಿದೆ.

ಚಿಕ್ಕಬಳ್ಳಾಪುರವು ಆಂಧ್ರ, ತಮಿಳುನಾಡು ರಾಜ್ಯಗಳ ಗಡಿಗೆ ಬಹಳ ಹತ್ತಿರವಿರುವ ಕಾರಣ 'RRR' ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಮೂರೂ ರಾಜ್ಯದಿಂದ ಜನರು ಬರುವ ನಿರೀಕ್ಷೆಯಿದೆ. ಈ ಕಾರ್ಯಕ್ರಮಕ್ಕೆ ಕರ್ನಾಟಕ ಮುಖ್ಯಮಂತ್ರಿ ‌ಬಸವರಾಜ್‌ ಬೊಮ್ಮಾಯಿ, ಕನ್ನಡ‌ದ ಕೆಲ ಸಿನಿಮಾ ತಾರೆಯರು ಆಗಮಿಸುವ ನಿರೀಕ್ಷೆಯಿದೆ. RRR ಸ್ಟಾರ್‌ಗಳಾದ ಎನ್.ಟಿ.ಆರ್, ರಾಮ್‌ ಚರಣ್, ನಿರ್ದೇಶಕ ರಾಜಮೌಳಿ ಇನ್ನಿತರೆ ತಾರೆಗಳು ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ. ಅತಿಥಿಗಳು ಆಗಮಿಸಲು, ನಿರ್ಗಮಿಸಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಭಾರಿ ಅದ್ಧೂರಿ ಕಾರ್ಯಕ್ರಮ ಇದಾಗಲಿದ್ದು 52,000 ಚದರ ಅಡಿಯ ಎಲ್‌ಇಡಿ ಪರದೆ ಹಾಕಿಸಲಾಗುತ್ತಿದೆ. ಜೊತೆಗೆ ಲೇಸರ್ ಲೈಟ್‌ ವ್ಯವಸ್ಥೆ, 'RRR' ಸಿನಿಮಾದ ಬೃಹತ್ ಪೋಸ್ಟರ್‌ಗಳು ಅಗಲಕುರ್ಗಿ ಗ್ರಾಮದ ಮೈದಾನದಲ್ಲಿ ರಾರಾಜಿಸಲಿವೆ. 'RRR' ಪ್ರೀ ರಿಲೀಸ್ ಕಾರ್ಯಕ್ರಮವು ಮಾರ್ಚ್ 19 ಸಂಜೆ ಆರು ಗಂಟೆಗೆ ಆರಂಭವಾಗಲಿದೆ.

More from Filmibeat

English summary
RRR movie pre release event will happen near Chikkaballapura on March 19. Movie is set to release on March 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X