ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ 'RRR' ಚಿತ್ರದ ಬಗ್ಗೆ ಪ್ರಶ್ನೆ

ರಾಜಮೌಳಿ ನಿರ್ದೇಶನದ ಜ್ಯೂನಿಯರ್ ಎನ್‌ಟಿಆರ್‌ ಹಾಗೂ ರಾಮಚರಣ್ ಅಭಿನಯದ RRR ಸಿನಿಮಾ ವಿಶ್ವದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಬಾಕ್ಸಾಫೀಸ್‌ನಲ್ಲಿ ಬರೋಬ್ಬರಿ 1100 ಕೋಟಿ ಹಣ ಬಾಚಿಕೊಳ್ಳುವ ಮೂಲಕ ಸೆನ್ಸೇಷನ್ ಕ್ರಿಯೇಟ್‌ ಮಾಡಿತ್ತು. ಈ ಮೂಲಕ ರಾಜಮೌಳಿಗೆ ವಿಶ್ವ ಮಟ್ಟದಲ್ಲಿ ಹೆಸರು ತಂದುಕೊಟ್ಟಿತ್ತು.

RRR ಸಿನಿಮಾ ಮಾರ್ಚ್‌ 24 ರಂದು ರಿಲೀಸ್‌ ವಿಶ್ವವಾದ್ಯಂತ ಭರ್ಜರಿ ಪ್ರದರ್ಶನ ಕಂಡಿತ್ತು. ಐದು ಭಾಷೆಗಳಲ್ಲಿ ರಿಲೀಸ್‌ ಆಗಿದ್ದ ಸಿನಿಮಾ ಎಲ್ಲಾ ಭಾಷೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಚಿತ್ರ ಕೂಡ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸದ್ಯ ಈಗ ಇದೇ ವಿಷಯ ಪರೀಕ್ಷೆ ಪತ್ರಿಕೆಯಲ್ಲೂ ಬಂದಿದ್ದು, ವಿದ್ಯಾರ್ಥಿಗಳಿಗೆ ಸಿನಿಮಾ ಹಾಗೂ ಜ್ಯೂನಿಯರ್ ಎನ್‌ಟಿಆರ್ ಪಾತ್ರದ ಬಗ್ಗೆ ವಿವರಿಸಲು ಪ್ರಶ್ನೆ ಕೇಳಲಾಗಿದೆ.

ಸದ್ಯ ಸಿನಿಮಾ ಬಿಡುಗಡೆಯಾಗಿ 50 ದಿನಗಳು ಕಳೆಯುತ್ತಾ ಬಂದಿದೆ. ಆದರೂ ಕೂಡ ಸಿನಿಮಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಈಗಲೂ ಕೆಲ ಥಿಯೇಟರ್‌ಗಳಲ್ಲಿ RRR ಪ್ರದರ್ಶನಗೊಳ್ಳುತ್ತಿದೆ. ಇದಿಷ್ಟೇ ಅಲ್ಲದೆ ಒಟಿಟಿಗೂ ಲಗ್ಗೆ ಇಡಲಿದೆ. ಇವೆಲ್ಲದರ ನಡುವೆ ತೆಲಂಗಾಣದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ RRR ಸಿನಿಮಾ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಸದ್ಯ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪಿಯುಸಿ ಪರೀಕ್ಷೆಯಲ್ಲಿ 'RRR' ಪ್ರಶ್ನೆ, ಪ್ರಶ್ನೆ ಪತ್ರಿಕೆ ವೈರಲ್‌

ಪ್ರಶ್ನೆ ಪತ್ರಿಕೆಯಲ್ಲಿ ನೀವು 'RRR' ಸಿನಿಮಾ ಹಾಗೂ ಕೋಮರಂ ಭೀಮ್ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಅಭಿನಯವನ್ನು ನೋಡಿರುತ್ತೀರಿ, ಸಿನಿಮಾದ ಯಶಸ್ಸಿನ ಬಳಿಕ ಪ್ರತಿಷ್ಠಿತ ಟಿವಿ ವಾಹಿನಿಯಲ್ಲಿ ಜ್ಯೂ. ಎನ್‌ಟಿಆರ್‌ ಅವರನ್ನು ಸಂದರ್ಶನ ಮಾಡಲು ನಿಮಗೆ ಅವಕಾಶ ಸಿಕ್ಕಿತು ಎಂದು ಊಹಿಸಿಕೊಳ್ಳಿ ಕೆಳಗೆ ನೀಡಿರುವ ವಿಷಯಗಳನ್ನು ಇಟ್ಟುಕೊಂಡು ಜ್ಯೂ ಎನ್‌ಟಿಆರ್‌ ಕುರಿತ ಕಾಲ್ಪನಿಕ ಸಂದರ್ಶನ ಬರೆಯಿರಿ. ಚಿತ್ರದ ಸ್ವರೂಪ, ಸಿನಿಮಾ ನಿರ್ದೇಶಕರೊಂದಿಗೆ ಜ್ಯೂ. ಎನ್‌ಟಿಆರ್ ಬಾಂಧವ್ಯ, ಸಿನಿಮಾ ಸ್ಕ್ರಿಪ್ಟ್, ಉಳಿದ ನಟರ ಪಾತ್ರ, ಸಿನಿಮಾದ ಪ್ರಭಾವ, ಇವಿಷ್ಟು ವಿಚಾರಗಳನ್ನು ಆಧರಿಸಿ ಸಂದರ್ಶನ ಬರೆಯಿರಿ ರಂದು ಪ್ರಶ್ನೆ ಪತ್ರಿಕೆಯಲ್ಲಿ ಸೂಚಿಸಲಾಗಿದೆ. ಸದ್ಯ ಈ ಪ್ರಶ್ನೆ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜ್ಯೂ. ಎನ್‌ಟಿಆರ್ ಫ್ಯಾನ್ಸ್‌ ಪ್ರಶ್ನೆ ಪತ್ರಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಫೇವರೆಟ್ ನಟನ ಸಿನಿಮಾವನ್ನು ಪ್ರಶ್ನೆ ಪತ್ರಿಕೆಯಲ್ಲಿ ಕೇಳಿರುವುದಕ್ಕೆ ಫ್ಯಾನ್ಸ್ ಕೂಡ ಸಂತಸಗೊಂಡಿದ್ದಾರೆ.

 ಪುನೀತ್ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಿಕೆ ಕೂಡ ವೈರಲ್

ಪುನೀತ್ ಬಗ್ಗೆ ಪ್ರಶ್ನೆ ಕೇಳಿದ್ದ ಪತ್ರಿಕೆ ಕೂಡ ವೈರಲ್

ಈ ಹಿಂದೆ ಕೂಡ ಬೆಂಗಳೂರಿನ ಖಾಸಗಿ ಶಾಲೆಯೊಂದರ ಪರೀಕ್ಷೆಯಲ್ಲಿ ಮಕ್ಕಳಿಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕುರಿತು ಪ್ರಶ್ನೆ ಕೇಳಲಾಗಿತ್ತು. ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ವಿಷಯದ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪ್ರಶ್ನೆ ಪತ್ರಿಕೆಯಲ್ಲಿ ಪುನೀತ್ ರಾಜ್ ಕುಮಾರ್ ಕುರಿತು ಪ್ರಶ್ನೆ ಕೇಳಲಾಗಿತ್ತು. ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಓದಿ ಪ್ರಶ್ನೆಗಳಿಗೆ ಉತ್ತರಿಸಿ ಎಂಬ ವಿಭಾಗದಲ್ಲಿ ಪುನೀತ್ ರಾಜ್‌ಕುಮಾರ್ ಕಿರು ಪರಿಚಯ ಮತ್ತು ಸಾಧನೆ ಬಗ್ಗೆ ಮಾಹಿತಿ ನೀಡಲಾಗಿದೆ. ಅದನ್ನು ಓದಿಕೊಂಡು, ಮುಂದಿನ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರ ಬರೆಯಬೇಕು ಎಂದು ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿತ್ತು. ಸದ್ಯ ಅದರ ಪೋಟೊ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

 ಥಿಯೇಟರ್‌ನಿಂದ ಒಟಿಟಿಗೆ 'RRR'

ಥಿಯೇಟರ್‌ನಿಂದ ಒಟಿಟಿಗೆ 'RRR'

ವಿಶ್ವದಾದ್ಯಂತ ಅದ್ದೂರಿಯಾಗಿ ರಿಲೀಸ್‌ ಆದ 'RRR' ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿತ್ತು. ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜ್ಯೂನಿಯರ್ ಎನ್‌ಟಿಆರ್ ಹಾಗೂ ರಾಮ್‌ ಚರಣ್ ತೇಜ ಕಾಣಿಸಿಕೊಂಡಿದ್ದರು. ಇವರಿಬ್ಬರ ಕಾಂಬಿನೇಶನ್‌ನ ಪ್ರೇಕ್ಷಕ ಪ್ರಭು ಸಹ ಮೆಚ್ಚಿಕೊಂಡಿದ್ದರು. ಇಬ್ಬರ ನಟನೆಗೂ ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಸದ್ಯ ಈಗ ಥಿಯೇಟರ್‌ನಲ್ಲಿ ನೋಡದೇ ಇದ್ದವರಿಗೆ ಒಟಿಟಿಯಲ್ಲಿ ನೋಡುವ ಭಾಗ್ಯ ಸಿಕ್ಕಿದೆ. ಇದೇ ತಿಂಗಳ ಮೇ 20 ರಂದು 'RRR' ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎಂಬ ಸುದ್ದಿಗಳು ಹರಿದಾಡ್ತಿದೆ. ಸದ್ಯಕ್ಕೆ ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆಗಿಲ್ಲ.

 ಭರ್ಜರಿ ಕಲೆಕ್ಷನ್ ಮಾಡಿಕೊಂಡ 'RRR'

ಭರ್ಜರಿ ಕಲೆಕ್ಷನ್ ಮಾಡಿಕೊಂಡ 'RRR'

'RRR' ಸಿನಿಮಾ ರಿಲೀಸ್‌ ಆಗಿನಿಂದ ಇಲ್ಲಿಯವರೆಗೂ ಬಾಕ್ಸಾಫಿಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ಸಿನಿಮಾದಲ್ಲಿರುವ ಸಿನಿಮ್ಯಾಟಿಕ್ ದೃಶ್ಯಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಹೆಚ್ಚು ಜನರು ಸಿನಿಮಾಗಳನ್ನು ಥಿಯೇಟರ್‌ನಲ್ಲೇ ಬಂದು ವೀಕ್ಷಣೆ ಮಾಡಿದ್ದಾರೆ. ಈಗಲೂ ಸಹ ಹಲವು ಕಡೆ ಸಿನಿಮಾ ಪ್ರಸಾರವಾಗುತ್ತಿದೆ. ಸದ್ಯಕ್ಕೆ 'ಕೆಜಿಎಫ್‌' ಅಬ್ಬರ ಇರುವುದರಿಂದ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದೆ ಅಷ್ಟೇ. ಆದರೆ, ಈಗಲು ಕೆಲ ಸಿನಿಮಾ ಪ್ರದರ್ಶನವಾಗುತ್ತಿದ್ದು, ಚಿತ್ರ ಓಡುತ್ತಿದೆ. ಈವರೆಗೆ 1,100 ಕೋಟಿ ಕಲೆಕ್ಷನ್‌ ಮಾಡಿಕೊಂಡಿರುವ ಚಿತ್ರ ಈಗ ಒಟಿಟಿಯಲ್ಲಿ ರಿಲೀಸ್ ಆದರೆ ಏನಾದರೂ ಬದಲಾವಣೆಯಾಗುತ್ತಾ? ಎಂಬ ಕುತೂಹಲವಿದೆ.

More from Filmibeat

English summary
RRR : Question on Jr NTR's Role in Telangana Intermediate Exam, Question Paper Goes Viral.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X