RRR, ರಾಧೆ ಶ್ಯಾಮ್ ಚಿತ್ರಕ್ಕೆ ಓಮಿಕ್ರಾನ್ ಶಾಕ್!

ಕೊರೊನಾ ಬಳಿಕ ಚಿತ್ರರಂಗ ಚೇತರಿಸಿಕೊಂಡಿದೆ. ಒಂದೊಂದೇ ಚಿತ್ರಗಳು ರಿಲೀಸ್‌ ಅಗುತ್ತಿವೆ. ಪ್ರೇಕ್ಷಕರು ಕೂಡ ಭಯ ಬಿಟ್ಟು ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇದೇ ಜೋಶ್‌ನಲ್ಲಿ ದೊಡ್ಡ ದೊಡ್ಡ ಚಿತ್ರಗಳು ಕೂಡ ತೆರೆಗೆ ಬರಲು ಸಜ್ಜಾಗಿವೆ. ಅದರಲ್ಲಿ RRR ಮತ್ತು ರಾಧೆ ಶ್ಯಾಮ್‌ ಚಿತ್ರಗಳು ಸದ್ಯ ರಿಲೀಸ್‌ಗೆ ರೆಡಿ ಆಗಿರುವ ದೊಡ್ಡ ಚಿತ್ರಗಳು.

ಆರ್‌ಆರ್‌ಆರ್‌ ಚಿತ್ರ ಬರ್ತಿದೆ ಅಂತ ಕೆಲವು ಚಿತ್ರಗಳು ತಮ್ಮ ರಿಲೀಸ್ ದಿನಾಂಕವನ್ನು ಮುಂದೂಡಿವೆ. ಆರ್‌ಆರ್‌ಆರ್‌ ಚಿತ್ರಕ್ಕೆ ದಾರಿ ಮಾಡಿ ಕೊಟ್ಟಿವೆ. ಆರ್‌ಆರ್‌ಆರ್‌ ಚಿತ್ರ 2022 ಜನವರಿ 7ರಂದು ರಿಲೀಸ್‌ ಆಗ್ತಿದೆ. ಹಾಗೆ ರಾಧೆ ಶ್ಯಾಮ್‌ ಚಿತ್ರ ಜನವರಿ 14ಕ್ಕೆ ತೆರೆ ಕಾಣುತ್ತಿದ್ದೆ.

ಈ ಎರಡು ಬಿಗ್‌ ಚಿತ್ರಗಳಿಗೆ ಬೇರೆ ಯಾವ ಚಿತ್ರಗಳು ಕೂಡ ಸವಾಲು ಹಾಕಿಲ್ಲ. ಬದಲಿಗೆ ರಿಲೀಸ್‌ ದಿನಾಂಕವನ್ನು ಮುಂದೂಡಿವೆ. ಆದರೆ ಈ ಚಿತ್ರಗಳಿಗೆ ತಲೆ ಬಿಸಿ ತಂದೊಡ್ಡಿರುವುದು ಮಾತ್ರ ಓಮಿಕ್ರಾನ್‌ ವೈರಾಣು.

ಚಿತ್ರರಂಗಕ್ಕೆ ಮತ್ತೆ ವೈರಾಣು ತಲೆಬಿಸಿ: ಬಿಗ್‌ ಚಿತ್ರಗಳಿಗೆ ಓಮಿಕ್ರಾನ್ ಕಾಟ!

ಚಿತ್ರರಂಗಕ್ಕೆ ಮತ್ತೆ ವೈರಾಣು ತಲೆಬಿಸಿ: ಬಿಗ್‌ ಚಿತ್ರಗಳಿಗೆ ಓಮಿಕ್ರಾನ್ ಕಾಟ!

ಈಗಾಗಲೇ ಕೊರೊನಾ ಮತ್ತು ಲಾಕ್‌ಡೌನ್‌ ನಿಂದಾಗಿ ಹಲವು ಚಿತ್ರಗಳ ಶೂಟಿಂಗ್‌ ಮತ್ತು ರಿಲೀಸ್‌ ತಡವಾಗಿದೆ. ಅಂದು ಕೊಂಡ ಸಮಯಕ್ಕೆ ಚಿತ್ರವನ್ನು ರಿಲೀಸ್ ಮಾಡಲು ಸಾಧ್ಯ ಆಗಿಲ್ಲ. ಈಗ ಕೊಂಚ ಸುಧಾರಿಸಿ ಕೊಂಡು ಚಿತ್ರಗಳನ್ನು ರಿಲೀಸ್‌ ಮಾಡಲಾಗುತ್ತಿದೆ. ಆದರೆ ಸದ್ಯ RRR ಮತ್ತು ರಾಧೆ ಶ್ಯಾಮ್‌ ಚಿತ್ರಗಳಿಗೆ ಓಮಿಕ್ರಾನ್‌ ತಲೆ ಬಿಸಿ ತಂದಿದೆ. ಯಾಕೆಂದರೆ ದಿನೇ ದಿನೇ ಓಮಿಕ್ರಾನ್‌ ವೈರಾಣು ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಇದು ಚಿತ್ರದ ರಿಲೀಸ್ ಮೇಲೆ ಪರಿಣಾಮ ಬೀರಲಿದೆ.

ಮುಂಬೈನಲ್ಲಿ ನೈಟ್‌ ಕರ್ಫ್ಯೂ: ದಿನಕ್ಕೆ 3 ಪ್ರದರ್ಶನಗಳಿಗೆ ಮಾತ್ರ ಅವಕಾಶ!

ಮುಂಬೈನಲ್ಲಿ ನೈಟ್‌ ಕರ್ಫ್ಯೂ: ದಿನಕ್ಕೆ 3 ಪ್ರದರ್ಶನಗಳಿಗೆ ಮಾತ್ರ ಅವಕಾಶ!

ಓಮಿಕ್ರಾನ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಮುಂಬೈನಲ್ಲಿ ರಾತ್ರಿ ಕರ್ಫ್ಯೂ ಹೇರಲಾಗಿದೆ. ರಾತ್ರಿ 9ಗಂಟೆ ಯಿಂದ ಬೆಳಗ್ಗೆ 6 ಗಂಟೆಯ ತನಕ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಅಷ್ಟೇ ಅಲ್ಲ ಚಿತ್ರ ಮಂದಿರಗಳಿಗೂ ನಿಯಮ ಜಾರಿ ಮಾಡಲಾಗಿದೆ. ದಿನಕ್ಕೆ ಕೇವಲ 3 ಶೋಗಳನ್ನ ಪ್ರದರ್ಶನ ಮಾಡುವ ಅವಕಾಶ ಮಾತ್ರ ನೀಡಲಾಗಿದೆ. ಇದು ವೈರಾಣು ತಡೆಯುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳಾಗಿವೆ. ಇದು ಈ ದೊಡ್ಡ ಚಿತ್ರಗಳಿಗೆ ತಲೆಬಿಸಿ ತಂದಿದೆ.

RRR ರಾಧೆ ಶ್ಯಾಮ್ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳು!

RRR ರಾಧೆ ಶ್ಯಾಮ್ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳು!

RRR ಮತ್ತು ರಾಧೆ ಶ್ಯಾಮ್ ಚಿತ್ರಗಳು ಪ್ಯಾನ್‌ ಇಂಡಿಯಾ ಚಿತ್ರಗಳು. ಈ ಚಿತ್ರಗಳಿಗೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆ ಇದೆ. ಅಲ್ಲದೆ ಮಹಾರಾಷ್ಟ್ರದಲ್ಲಿ ಚಿತ್ರ ರಿಲೀಸ್‌ಗೆ ಎಲ್ಲಾ ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. ಆದರೆ ಈಗ ಚಿತ್ರ ಪ್ರದರ್ಶನ ಶೋಗಳನ್ನು ಕಡಿತಗೊಳಿಸಲಾಗಿದೆ. ಇದು ಮುಂದೆ ಇನ್ನೂ ಹೆಚ್ಚಾಗಬಹುದು. ಅಲ್ಲದೇ ಚಿತ್ರಮಂದಿರಗಳಿಗೆ ಬೀಗ ಬೀಳುವ ಸಾಧ್ಯತೆ ಕೂಡ ಇದೆ.

'ಆರ್‌ಆರ್‌ಆರ್‌' ಚಿತ್ರ ರಿಲೀಸ್‌ ಮುಂದೂಡುವ ಸಾಧ್ಯತೆ!

'ಆರ್‌ಆರ್‌ಆರ್‌' ಚಿತ್ರ ರಿಲೀಸ್‌ ಮುಂದೂಡುವ ಸಾಧ್ಯತೆ!

ಇನ್ನೂ ಓಮಿಕ್ರಾನ್‌ ಪ್ರಕರಣ ಎಲ್ಲೆಡೆ ಹೆಚ್ಚಾದರೆ ಚಿತ್ರಮಂದಿರಗಳನ್ನು ಅನಿವಾರ್ಯವಾಗಿ ಮುಚ್ಚ ಬೇಕಾಗುತ್ತದೆ. ಹಾಗಾಗಿ ವಿಧಿ ಇಲ್ಲದೆ ಚಿತ್ರದ ರಿಲೀಸ್‌ ದಿನಾಂಕವನ್ನು ಮುಂದೂಡಲೇ ಬೇಕಾಗುತ್ತದೆ. ಆರ್ಆರ್ಆರ್‌ ಚಿತ್ರ ರಿಲೀಸ್‌ಗೆ ಒಂದು ವಾರ ಬಾಕಿ ಇದೆ. ಆ ಬಳಿಕ ಒಂದು ವಾರ ಬಿಟ್ಟು 'ರಾಧೆ ಶ್ಯಾಮ್' ತೆರೆಗೆ ಬರಲಿದೆ. ಹಾಗೇನಾದರು ಚಿತ್ರ ಮಂದಿರಗಳು ಮುಚ್ಚುವ ಪರಿಸ್ಥಿತಿ ಬಂದರೆ ಆರ್‌ಆರ್‌ಆರ್, ರಾಧೆ ಶ್ಯಾಮ್ ಚಿತ್ರಗಳು ಬೇರೆ ದಾರಿ ಇಲ್ಲದೆ ಮುಂದೆ ಹೋಗ ಬೇಕಾಗುತ್ತದೆ.

More from Filmibeat

English summary
RRR & Radhe Shyam To Suffer From Omicron Scare, Because Of Maharashtra night curfew,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X