RRR: ರಾಮ್ ಚರಣ್ ಎಂಟ್ರಿ ದೃಶ್ಯ, ಹಾಲಿವುಡ್ ಸೀರೀಸ್ ಕಾಪಿ?
ಎಸ್‌ಎಸ್ ರಾಜಮೌಳಿ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದ 'RRR' ಸದ್ಯ ಬಾಕ್ಸಾಫೀಸ್ ಕೊಳ್ಳೆ ಹೊಡೆಯುತ್ತಿದೆ. ಪ್ಯಾನ್ ಇಂಡಿಯಾ ಚಿತ್ರ ವಿಶ್ವಾದ್ಯಂತ ತೆರೆಕಂಡು ಭರ್ಜರಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ರಾಜಮೌಳಿ ಒಂದು ಕಥೆಯನ್ನು ಆಯ್ಕೆ ಮಾಡಿ ಸಿನಿಮಾ ಮಾಡುತ್ತಿದ್ದರೆ ಎನ್ನುವ ಸುದ್ದಿಯೇ ಪ್ರೇಕ್ಷಕ ಬಳದಲ್ಲಿ ರೋಮಾಂಚನ ಹುಟ್ಟು ಹಾಕುತ್ತದೆ.
ರಾಜಮೌಳಿ ಸಿನಿಮಾ ಪ್ರಕಟ ಆದ ದಿನದಿಂದ ಹಿಡಿದು, ತೆರೆಗೆ ಬರುವ ತನಕ ಸಿನಿಮಾ ಪ್ರಿಯರು ಕುತೂಹಲ ಹಾಗೂ ನಿರೀಕ್ಷೆಯಿಂದ ಕಾಯುತ್ತಾ ಇರುತ್ತಾರೆ. ಅಷ್ಟರ ಮಟ್ಟಿಗೆ ಭರವಸೆಯ ನಟ ಎನಿಸಿಕೊಂಡಿದ್ದಾರೆ ರಾಜಮೌಳಿ. ಇತ್ತೀಚೆಗೆ ರಿಲೀಸ್ ಆದ 'RRR' ಚಿತ್ರ ಕೂಡ ಮೆಚ್ಚುಗೆ ಪಡೆದುಕೊಂಡಿದೆ.
ಈಗ 'RRR' ಚಿತ್ರದ ಬಗ್ಗೆ ಹೊಸ ಗುಸು,ಗುಸು ಕೇಳಿ ಬರುತ್ತಿದೆ. ಚಿತ್ರದಲ್ಲಿ ನಾಯಕ ನಟರ ಎಂಟ್ರಿ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಇಬ್ಬರು ಹೀರೊಗಳ ಎಂಟ್ರಿ ದೃಶ್ಯ ಅದ್ಭುತ ಎಂದು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ. ಆದರೆ ,ಈ ಎಂಟ್ರಿ ದೃಶ್ಯಗಳು ಅಸಲಿ ಅಲ್ಲ, ನಕಲಿ ಎಂದು ಹೇಳಲಾಗುತ್ತಿದೆ.

ರಾಮ್ ಚರಣ್ ಎಂಟ್ರಿ ಫೈಟ್ 'ಗೇಮ್ ಆಫ್ ಥ್ರೋನ್ಸ್' ಕಾಪಿ?
RRR ಚಿತ್ರದಲ್ಲಿ ನಟ ರಾಮ್‌ಚರಣ್ ಎಂಟ್ರಿ ಸೂಪರೋ, ಸೂಪರ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಭರ್ಜರಿ ಆ್ಯಕ್ಷನ್ ಜೊತೆಗೆ ರಾಮ್‌ಚರಣ್ ಎಂಟ್ರಿ ಕೊಟ್ಟಿದ್ದಾರೆ. ರಾಮ್ ಚರಣ್ ಭರ್ಜರಿ ಫೈಟ್ ನೋಡುಗರಿಗೆ ವಾವ್ ಎನಿಸುತ್ತದೆ. ಅದರಲ್ಲೂ ರಾಜಮೌಳಿ ಕಟ್ಟಿಕೊಟ್ಟ ಸನ್ನಿವೇಶ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಆದರೆ ಈ ದೃಶ್ಯ ಹಾಲಿವುಡ್‌ನ 'ಗೇಮ್ ಆಫ್ ಥ್ರೋನ್' ಸೀರೀಸ್ ಕಾಪಿ ಎನ್ನಲಾಗುತ್ತಿದೆ.

'ದಿ ಬ್ಯಾಟಲ್ ಆಫ್ ಬಾಸ್ಟರ್ಡ್ಸ್' ಸನ್ನಿವೇಶದಿಂದ ಸ್ಫೂರ್ತಿ
'ಗೇಮ್ ಆಫ್ ಥ್ರೋನ್ಸ್' ಸೀರೀಸ್‌ನಲ್ಲಿ ಒಂದು ಆ್ಯಕ್ಷನ್ ಸನ್ನಿವೇಶಕ್ಕೆ 'ದಿ ಬ್ಯಾಟಲ್ ಆಫ್ ಬಾಸ್ಟರ್ಡ್ಸ್' ಎಂದು ಕರೆಯಲಾಗಿದೆ. ಈ ಸನ್ನಿವೇಶದಲ್ಲಿ ನಾಯಕನ ಪಾತ್ರಧಾರಿ ಜಾನ್ ಸ್ನೋ, ಶತ್ರು ಸೈನಿಕರ ಗುಂಪಿನಿಂದ ಆಕ್ರಮಣಕ್ಕೆ ಒಳಗಾಗುತ್ತಾನೆ. ಶತ್ರು ಗುಂಪಿನಿಂದ ಕೆಲಕಾಲ ಹೊಡೆತಾ ತಿನ್ನುತ್ತಾನೆ. ನಂತರ ಸಣ್ಣ ಸಹಾಯ ದೊರೆತಾಗ ಶತ್ರುಗಳ ವಿರುದ್ಧ ಆಕ್ರಮಣ ಮಾಡುತ್ತಾನೆ. ಇದೇ ರೀತಿಯ ಸನ್ನಿವೇಶ RRR ಚಿತ್ರದಲ್ಲಿ ರಾಮ್ ಚರಣ್‌ನ ಪಾತ್ರದ ಎಂಟ್ರಿಯಲ್ಲಿ ಕಂಡು ಬರುತ್ತದೆ.

ರಾಜಮೌಳಿ ಜರಿಯಲು ಅಸಾಧ್ಯ!
ದೃಶ್ಯಗಳ ನಡುವೆ ಸಾಮ್ಯತೆ ಇದೆ ಎಂದ ಮಾತ್ರಕ್ಕೆ, ನಿರ್ದೇಶಕ ರಾಜಮೌಳಿಯನ್ನು ಜರಿಯಲು ಸಾಧ್ಯವಿಲ್ಲ. ಯಾಕೆಂದರೆ, ಈ ಸೀರೀಸ್‌ನಿಂದ ಜಕ್ಕಣ್ಣ ಸ್ಫೂರ್ತಿ ಪಡೆದಿರಬಹುದು ಅಥವಾ, ಇದು ಕಾಕತಾಳೀಯವೂ ಆಗಿರಬಹುದು. ಅದೇನೆ ಇದ್ದರು ಜನರು ಮಾತ್ರ ಸಿನಿಮಾವನ್ನು ಮೆಚ್ಚಿ ಕೊಂಡಿದ್ದಾರೆ. ತೆರೆಯ ಮೇಲೆ ಸಿನಿಮಾ ನೋಡಿದ ಪ್ರೇಕ್ಷಕ ಏನು ಹೇಳುತ್ತಾನೆ ಎನ್ನುವುದು ಮಾತ್ರ ಮುಖ್ಯ ಆಗುತ್ತದೆ.
Recommended Video


ಬಾಕ್ಸಾಫೀಸ್‌ನಲ್ಲಿ RRR ಜಾದು!
RRR ಚಿತ್ರ ಮಾರ್ಚ್ 25ಕ್ಕೆ ರಿಲೀಸ್ ಆಗಿದೆ. ರಿಲೀಸ್ ಆಗುತ್ತಲೇ ಬಾಕ್ಸಾಫೀಸ್‌ನಲ್ಲಿ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಾ ಇದೆ. ಬಿಗ್ ಓಪನಿಂಗ್ ಪಡೆದುಕೊಂಡಿದೆ. ಚಿತ್ರ ರಿಲೀಸ್ ಆಗಿ 3 ದಿನಕ್ಕೆ ದಾಖಲೆ ಮಟ್ಟದ ಕಲೆಕ್ಷನ್ ಮಾಡಿದೆ. 500 ಕೋಟಿ ಗಳಿಸಿ ಹೊಸ ದಾಖಲೆ ಬರೆದಿದೆ. ಇನ್ನೂ ಕೂಡ ಬಾಕ್ಸಾಫೀಸ್‌ನಲ್ಲಿ ಸಿನಿಮಾದ ಕಲೆಕ್ಷನ್ ಮುಂದುವರೆದಿದೆ.


Click it and Unblock the Notifications











