ಈ ವಾರ 'RRR' ರೀ ರಿಲೀಸ್: ಹೊಸ ಟ್ರೈಲರ್‌ನಲ್ಲಿದೆ ಆ ದೃಶ್ಯ.. ಜೋರಾಗಿದೆ ರಾಮ್-ಭೀಮ್ ಆರ್ಭಟ
ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಸದ್ಯ ಅಂತರಾಷ್ಟ್ರೀಯಮಟ್ಟದಲ್ಲಿ ಸಿನಿಮಾ ಸದ್ದು ಮಾಡ್ತಿದೆ. ಚಿತ್ರದ 'ನಾಟು ನಾಟು' ಸಾಂಗ್ ಆಸ್ಕರ್‌ಗೆ ನಾಮಿನೇಟ್ ಆಗಿದೆ. ಹಾಲಿವುಡ್‌ನ ಹಲವು ಪ್ರತಿಷ್ಠಿತ ಅವಾರ್ಡ್ ಸೆರೆಮನಿಗಳಲ್ಲಿ 'RRR' ಆರ್ಭಟ ಜೋರಾಗಿದೆ. ಇದೆಲ್ಲದರ ನಡುವೆ ಸಿನಿಮಾ ರೀ ರಿಲೀಸ್ ಆಗುವ ಸುದ್ದಿ ಬಂದಿದೆ. ಇದು ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಹೌದು ರಾಮ್‌ಚರಣ್- ಜ್ಯೂ. ಎನ್‌ಟಿಆರ್ ನಟನೆಯ 'RRR' ಚಿತ್ರವನ್ನು ಈ ವಾರ ಮತ್ತೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನ ನಡೀತಿದೆ. ಭಾರತದಲ್ಲಿ ಮಾತ್ರವಲ್ಲದೇ ಅಮೆರಿಕಾದಲ್ಲೂ ಸಿನಿಮಾ ಮತ್ತೆ ತೆರೆಗಪ್ಪಳಿಸಲಿದೆ. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ರಿವ್ಯೂಗಳ ಜೊತೆಗೆ ಚಿತ್ರದ ಹೊಸ ಟ್ರೈಲರ್ ರಿಲೀಸ್ ಆಗಿದೆ. 'RRR' ಸಿನಿಮಾ ರೀ ರಿಲೀಸ್ ಟ್ರೈಲರ್ ಧೂಳೆಬ್ಬಿಸಿದೆ. ಕಳೆದ ವರ್ಷ ಬಿಟ್ಟಿದ್ದ ಟ್ರೈಲರ್‌ನಲ್ಲಿ ಇಲ್ಲದ ಕೆಲ ದೃಶ್ಯಗಳನ್ನು ಈ ಬಾರಿ ಸೇರಿಸಲಾಗಿದೆ.

ಕಳೆದ ವರ್ಷ ಮಾರ್ಚ್ 25ಕ್ಕೆ 'RRR' ಸಿನಿಮಾ ರಿಲೀಸ್ ಆಗಿ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಿಧಾನವಾಗಿ ಓಟಿಟಿಗೆ ಬಂದ ಸಿನಿಮಾ ಹಾಲಿವುಡ್ ಕಲಾವಿದರು, ತಂತ್ರಜ್ಞರ ಗಮನ ಸೆಳೆದಿತ್ತು. ಸಿನಿಮಾ ನೋಡಿದವರು ಹುಬ್ಬೇರಿಸಿದ್ದರು. ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ನಿಧಾನವಾಗಿ ಹೊರ ದೇಶಗಳಲ್ಲಿ ಚಿತ್ರದ ವಿಶೇಷ ಪ್ರದರ್ಶನಗಳನ್ನು ಏರ್ಪಡಿಸಲಾಯಿತು. ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸಿನಿಮಾ ಪ್ರದರ್ಶನವಾಗಿತ್ತು. ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು.
ಹಾಲಿವುಡ್ ಪ್ರೇಕ್ಷಕರು ಕೂಡ 'ನಾಟು ನಾಟು' ಹಾಡು ಬಂದಾಗ ಸಿಲ್ವರ್ ಸ್ಕ್ರೀನ್ ಮುಂದೆ ಹೋಗಿ ಕುಣಿದು ಕುಪ್ಪಳಿಸಿದ್ದರು. ಇನ್ನು ಇತ್ತೀಚೆಗೆ ಜೇಮ್ಸ್ ಕ್ಯಾಮರೂನ್ ಸಿನಿಮಾ ನೋಡಿ ಬೆರಗಾಗಿದ್ದರು. ರಾಜಮೌಳಿ ನಿರ್ದೇಶನ, ರಾಮ್‌ಚರಣ್- ತಾರಕ್ ಅಭಿನಯವನ್ನು ಕೊಂಡಾಡಿದ್ದರು. ಇದೀಗ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಹತ್ತಿರವಾಗುತ್ತಿದ್ದಂತೆ ಚಿತ್ರವನ್ನು ರೀ ರಿಲೀಸ್ ಮಾಡಲಾಗುತ್ತಿದೆ. 200ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಈ ಶುಕ್ರವಾರ ತೆರೆ ಕಾಣಲಿದೆ.

ಸದ್ಯ ಬಂದಿರುವ ರೀ ರಿಲೀಸ್ ಟ್ರೈಲರ್ ಅಭಿಮಾನಿಗಳ ಮನಗೆದ್ದಿದೆ. ಎಲ್ಲರೂ ಸಿನಿಮಾ ನೋಡಿದ್ದರೂ ಕೂಡ ಈ ಟ್ರೈಲರ್ ಹೊಸ ಫೀಲ್ ಕೊಡ್ತಿದೆ. ಮುಖ್ಯವಾಗಿ ಇಂಟರ್‌ವಲ್ ಬ್ಲಾಕ್ ಸೀನ್‌ನ ಸಣ್ಣ ಸಣ್ಣ ಝಲಕ್ ಟ್ರೈಲರ್‌ನಲ್ಲಿದೆ. ಭೀಮ್ ಕಾಡು ಪ್ರಾಣಿಗಳ ಜೊತೆ ಬ್ರಿಟೀಷರ ಕೋಟೆಗೆ ಲಗ್ಗೆ ಇಡುವ ಸೀನ್ ಸಖತ್ ಕಿಕ್ ಕೊಟ್ಟಿತ್ತು. ಸಿನಿಮಾ ರಿಲೀಸ್ ಆಗುವವರೆಗೂ ಈ ಸನ್ನಿವೇಶದ ಬಗ್ಗೆ ಸುಳಿವು ಇರಲಿಲ್ಲ. ಕಾಡು ಪ್ರಾಣಿಗಳ ಆರ್ಭಟದ ನಡುವೆಯೇ ರಾಮ್- ಭೀಮ್ ಫೈಟ್ ಮಜಾ ಕೊಟ್ಟಿತ್ತು.
ಮಾರ್ಚ್ 12ಕ್ಕೆ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೀತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಈಗಾಗಲೇ ರಾಮ್‌ಚರಣ್, ರಾಜಮೌಳಿ ಅಮೆರಿಕಾ ತಲುಪಿದ್ದಾರೆ. ಆಸ್ಕರ್ ಪ್ರಮೋಷನ್‌ನಲ್ಲಿ ಭಾಗಿ ಆಗುತ್ತಿದ್ದಾರೆ. ಇನ್ನು ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ ವೇದಿಕೆಯಲ್ಲಿ ಚಿತ್ರಕ್ಕೆ 4 ಪ್ರಶಸ್ತಿ ಸಿಕ್ಕಿತ್ತು. ಡಿವಿವಿ ದಾನಯ್ಯ ನಿರ್ಮಾಣದ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡ್ತಿದೆ. ಅಮೆರಿಕಾದಲ್ಲೂ ಸಿನಿಮಾ ರೀ ರಿಲೀಸ್ ಆಗುತ್ತಿದೆ.
400 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸಿನಿಮಾ 1000 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿತ್ತು. ಚಿತ್ರದಲ್ಲಿ ಅಲ್ಲೂರಿ ಸೀತಾ ರಾಮರಾಜು ಆಗಿ ರಾಮ್‌ಚರಣ್, ಕೋಮುರಂ ಭೀಮ್ ಆಗಿ ತಾರಕ್ ನಟಿಸಿದ್ದಾರೆ. ಆಲಿಯಾ ಭಟ್ ಹಾಗೂ ಅಜಯ್ ದೇವಗನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಪಾತ್ರಗಳನ್ನಿಟ್ಟುಕೊಂಡು ರಾಜಮೌಳಿ ಒಂದು ಕಾಲ್ಪನಿಕ ಕಥೆ ಹೇಳಿ ಗೆದ್ದಿದ್ದರು.


Click it and Unblock the Notifications











