'RRR' ರಿಲೀಸ್‌ಗೂ ಮುನ್ನವೇ ನೋಡುವ ಅವಕಾಶ!
ಇದೆ ಮಾರ್ಚ್ 25ರಂದು 'RRR' ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾದ ಮುಂಜಾನೆ ಶೋಗಳನ್ನು ನೋಡಲು ಸಾಕಷ್ಟು ಮಂದಿ ಕಾಯುತ್ತಿದ್ದಾರೆ. ಆದರೆ ಅಂತಹವರಿಗೆ ಚಿತ್ರ ತಂಡ ಸಿಹಿ ಸುದ್ದಿಯನ್ನು ಕೊಟ್ಟಿದೆ. ರಿಲೀಸ್ ದಿನ ಮುಂಜಾನೆ ಅಲ್ಲ. ರಿಲೀಸ್‌ಗೂ ಒಂದು ದಿನ ಮುಂಚಿತವಾಗಿ ಈ ಚಿತ್ರ ನೋಡಬಹುದಂತೆ.
RRR ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭ ಆಗಿದೆ. ಮಾರ್ಚ್ 25ರಂದು ಈ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆ ಕಾಣಲಿದೆ. ಈಗಾಗಲೇ ದೇಶ ಸುತ್ತಿ ಚಿತ್ರ ತಂಡ ಪ್ರಚಾರ ಕಾರ್ಯವನ್ನು ಮಾಡಿದೆ. ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ರಾಮ್ ಚರಣ್, ಜೂ.ಎನ್‌ಟಿಆರ್, ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಹುನಿರೀಕ್ಷಿತ ಈ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು, ಪ್ರೇಕ್ಷಕರು ಕಾದಿದ್ದಾರೆ. ಹೆಚ್ಚು ಕುತೂಹಲ ಇರುವವರಿಗೆ, ಮೊದಲೇ ಸಿನಿಮಾ ನೋಡಬೇಕು ಎಂದುಕೊಂಡವರಿಗೆ ಒಂದು ದಿನ ಮುನ್ನವೇ ಈ ಸಿನಿಮಾವನ್ನು ನೋಡುವ ಅವಕಾಶ ಸಿಗಲಿದೆ. ಅದಕ್ಕಾಗಿ ವಿಶೇಷ ತಯಾರಿ ನಡೆಸಿದೆ ಚಿತ್ರ ತಂಡ.
ಮಾರ್ಚ್ 25ರಂದು 'RRR' ಸಿನಿಮಾ ವಿಶ್ವಾದ್ಯಂತ ಬಿಡುಗಡೆ ಆಗಲಿದೆ. ಆದರೆ ಅದಕ್ಕಿಂತಲೂ ಒಂದು ದಿನ ಮುಂಚಿತವಾಗಿ ಪೇಯ್ಡ್ ಪ್ರೀಮಿಯರ್ ಪ್ರದರ್ಶನಗಳನ್ನು ಏರ್ಪಡಿಸುವ ಬಗ್ಗೆ ಚಿತ್ರತಂಡ ತೀರ್ಮಾನಿಸುತ್ತಿದೆ ಎಂದು ವರದಿ ಆಗಿದೆ. ಈ ಕುರಿತು ಟಾಲಿವುಡ್‌ನಲ್ಲಿ ಸುದ್ದಿ ಹರಿದಾಡುತ್ತಿವೆ. ಮಾರ್ಚ್ 24ರ ಸಂಜೆ ಮತ್ತು ರಾತ್ರಿ ದೇಶದ ಅನೇಕ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಶೋ ನಡೆಯಲಿದೆ.

ಆದರೆ ಈ ಪ್ರೀಮಿಯರ್ ಶೋ ದರ ಅಧಿಕವಾಗಿ ಇರುತ್ತದೆ. ಸಿನಿಮಾ ರಿಲೀಸ್ ಬಳಿಕ ಟಿಕೆಟ್‌ಗೆ ಇರುವ ದರ ಈ ಶೋಗೆ ಇರುವುದಿಲ್ಲ. ಈ ಪ್ರೀಮಿಯರ್ ಶೋ ಮೂಲಕ ಕೂಡ ಚಿತ್ರ ತಂಡ ಅಧಿಕ ಮೊತ್ತ ಕಲೆ ಹಾಕಲಿದೆ. ಇದು ವಿಶೇಷ ಪ್ರದರ್ಶನ ಆಗಿರುವ ಕಾರಣ ಹೆಚ್ಚಿನ ದರ ನಿಗದಿ ಮಾಡಲಾಗುತ್ತದೆ.
ಕನ್ನಡದ 'ಜೇಮ್ಸ್' ಚಿತ್ರದ ಬಳಿಕ ರಿಲೀಸ್ ಆಗಲಿದೆ RRR. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಈ ಹಿಂದೆಯೇ ಚಿತ್ರ ರಿಲೀಸ್ ಆಗಬೇಕಿತ್ತು. ಜನವರಿಯಲ್ಲಿ ತೆರೆಕಂಡು ಆದಾಗಲೇ ಹಳೆ ಸಿನಿಮಾ ಎನಿಸಿಕೊಳ್ಳಬೇಕಿತ್ತು. ಆದರೆ ಕೊರೊನಾದಿಂದ ಚಿತ್ರದ ರಿಲೀಸ್ ಮುಂದೆ ಹೊದ ಕಾರಣ ಮಾರ್ಚ್ 25ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಸದ್ಯದಲ್ಲೆ ಚಿತ್ರದ ಪೇಯ್ಡ್ ಪ್ರೀಮಿಯರ್ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಚಿತ್ರ ತಂಡ.


Click it and Unblock the Notifications











