'RRR'; ರಾಜಮೌಳಿ ಮತ್ತು ಕಲಾವಿದರ ಸಂಭಾವನೆ ಎಷ್ಟು ಗೊತ್ತಾ?

ಭಾರತೀಯ ಚಿತ್ರರಂಗದ ಬಹನಿರೀಕ್ಷಿತ ಚಿತ್ರ 'ಆರ್‌ಆರ್‌ಆರ್' ಇದೇ ಮಾರ್ಚ್ 25ಕ್ಕೆ ತೆರೆಗೆ ಬರುತ್ತಿದೆ. ಎಸ್.ಎಸ್ ರಾಜಮೌಳಿ ನಿರ್ದೇಶಿಸಿರುವ 'RRR' ಸಿನಿಮಾ ಬಿಡುಗಡೆ ದಿನಗಣನೆ ಶುರುವಾಗಿದೆ. ಹಲವು ಬಾರಿ ಈ ಸಿನಿಮಾದ ರಿಲೀಸ್ ಪೋಸ್ಟ್ ಪೋನ್ ಆಗಿದೆ. ಅನಿವಾರ್ಯವಾಗಿ ಚಿತ್ರದ ರಿಲೀಸ್ ಮುಂದೂಡಬೇಕಾಯಿತು. ಅಂತೂ ಮಾರ್ಚ್ 25ಕ್ಕೆ ಚಿತ್ರ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ.

ಬಾಹುಬಲಿ ಚಿತ್ರದ ಬಳಿಕ ರಾಜಮೌಳಿ ನಿರ್ದೇಶನದ ಸಿನಿಮಾಗಳು ಎಷ್ಟು ದೊಡ್ಡ ಮಟ್ಟದಲ್ಲಿ ತಯಾರಾಗುತ್ತವೆ ಎನ್ನುವುದು ಗೊತ್ತಾಗಿದೆ. ಅವರ ಸಿನಿಮಾಗಳು ಕಥೆಗೆ ತಕ್ಕಂತೆ ತೆರೆಯ ಮೇಲೆ ಮಾಯಾ ಲೋಕವನ್ನು ಸೃಷ್ಟಿ ಮಾಡುತ್ತವೆ. 'ಆರ್‌ಆರ್‌ಆರ್' ಚಿತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಈ ಸಿನಿಮಾ ದೊಡ್ಡ ಬಜೆಟ್‌ನಲ್ಲಿ ಅದ್ದೂರಿಯಾಗಿ ನಿರ್ಮಾಣ ಆಗಿದೆ.

ಚಿತ್ರದ ಬಜೆಟ್ ಎಷ್ಟು ಎನ್ನುವ ಕಥೆ ಒಂದು ಕಡೆ ಆದರೆ, ಈ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರ ಸಂಭಾವನೆ ಎಷ್ಟಿರಬಹುದು ಎನ್ನುವ ಚರ್ಚೆಗಳು ಕೂಡ ಹುಟ್ಟಿಕೊಂಡಿದೆ. ಆರ್‌ಆರ್‌ಆರ್ ಚಿತ್ರದಲ್ಲಿ ಹೆಸರಾಂತ ದೊಡ್ಡ, ದೊಡ್ಡ ಕಲಾವಿದರು ಇದ್ದಾರೆ. ಅವರ ಸಂಭಾವನೆ ವಿವರ ಇಲ್ಲದೆ ಮುಂದೆ ಓದಿ....

ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಂಭಾವನೆ ಎಷ್ಟು?

ಚಿತ್ರದ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಂಭಾವನೆ ಎಷ್ಟು?

ಬಾಹುಬಲಿ ಸಿನಿಮಾ ರಿಲೀಸ್ ಆಗಿ ದೊಡ್ಡ ಮಟ್ಟದ ಸಕ್ಸಸ್ ಕಾಣುವ ಮುನ್ನ, ಸಂಭಾವನೆ ಬಗ್ಗೆ ಅಷ್ಟಾಗಿ ಯಾರು ತಲೆ ಕೆಡಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಈಗ ರಾಜಮೌಳಿ ಸಿನಿಮಾ ಅಂದರೆ ಸಕ್ಸಸ್ ಮತ್ತು ಕೋಟಿ ಕೋಟಿ ಗಳಿಕೆ ಪಕ್ಕಾ ಎನ್ನುವಂತಾಗಿದೆ. ಕಲಾವಿದರಿಗಿಂದ ಹೆಚ್ಚಾಗಿ ಚಿತ್ರದ ರೂವಾರಿ ನಿರ್ದೇಶಕ ರಾಜಮೌಳಿ ಅವರ ಸಂಭಾವನೆ ಎಷ್ಟು ಎನ್ನುವ ಕುತೂಹಲ ಇದ್ದೇ ಇರುತ್ತೆ. ಸದ್ಯ ಟಾಲಿವುಡ್‌ನಲ್ಲಿ ಈ ಬಗ್ಗೆ ಚರ್ಚೆ ಆಗುತ್ತಿದೆ. ನಿರ್ದೇಶಕ ರಾಜಮೌಳಿ ಸಿನಿಮಾದ ಲಾಭದಲ್ಲಿ 30 ಪರ್ಸೆಂಟ್ ಶೇರ್ ಪಡೆದುಕೊಳ್ಳುತ್ತಾರಂತೆ.

ರಾಮ್ ಚರಣ್, ಜೂ.ಎನ್‌ಟಿಆರ್‌ಗೆ ಸಮ ಸಂಭಾವನೆ!

ರಾಮ್ ಚರಣ್, ಜೂ.ಎನ್‌ಟಿಆರ್‌ಗೆ ಸಮ ಸಂಭಾವನೆ!

ಆರ್‌ಆರ್‌ಆರ್ ಚಿತ್ರದ ಎರಡು ಮುಖಗಳು ಎಂದರೆ ಅದು ನಟ ರಾಮ್ ಚರಣ್ ಮತ್ತು ಜೂ.ಎನ್‌ಟಿಆರ್. ಈ ಇಬ್ಬರು ಸ್ಟಾರ್ ನಟರು ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂದಾಗಲೇ, ಇವರು ಅಧಿಕ ಸಂಭಾವನೆ ಪಡೆದುಕೊಂಡಿರುತ್ತಾರೆ ಎನ್ನಲಾಗಿತ್ತು. ಚಿತ್ರದ ಇಬ್ಬರು ನಟರಿಗೂ ಒಂದೇ ರೀತಿ ಸಂಭಾವನೆಯನ್ನು ಕೊಡಲಾಗಿದೆ. ಇಬ್ಬರಿಗೂ ತಲಾ 45 ಕೋಟಿ ರೂ ಸಂಭಾವನೆ ನೋಡಲಾಗಿದೆ ಎಂದು ವರದಿ ಆಗಿದೆ. ಚಿತ್ರದಲ್ಲಿ ಇಬ್ಬರದ್ದೂ ಪ್ರಮುಖ ಪಾತ್ರ. ಹಾಗಾಗಿ ಇಬ್ಬರಿಗೂ ಸಮನಾದ ಸಂಭಾವನೆ ನೀಡಲಾಗಿದೆ.

ಆಲಿಯಾ ಭಟ್, ಅಜಯ್ ದೇವಗನ್ ಅಧಿಕ ಸಂಭಾವನೆ!

ಆಲಿಯಾ ಭಟ್, ಅಜಯ್ ದೇವಗನ್ ಅಧಿಕ ಸಂಭಾವನೆ!

ಇನ್ನು ಈಗಾಗಲೇ ನಟಿ ಆಲಿಯಾ ಭಟ್ ಆರ್‌ಆರ್‌ಆರ್ ಚಿತ್ರಕ್ಕೆ ಪಡೆದುಕೊಂಡ ಸಂಭಾವನೆ ಬಗ್ಗೆ ಸುದ್ದಿ ಆಗಿತ್ತು. ಈ ಚಿತ್ರಕ್ಕಾಗಿ ಬಾಲಿವುಡ್ ನಟಿ ಆಲಿಯಾ ಮೊದಲ ಬಾರಿಗೆ ಸೌತ್ ಚಿತ್ರರಂಗದಲ್ಲಿ ಅಭಿನಯಿಸುತ್ತಿದ್ದಾರೆ. ಆಲಿಯಾ ಭಟ್ ಈ ಚಿತ್ರಕ್ಕೆ 9 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಸೀತಾ ಪಾತ್ರದಲ್ಲಿ ಆಲಿಯಾ ಕಾಣಿಸಿಕೊಂಡಿದ್ದಾರೆ. ಇನ್ನು ಬಾಲಿವುಡ್ ನಟ ಅಜಯ್ ದೇವಗನ್ ಕೂಡ ಹೆಚ್ಚಿನ ಸಂಭಾವನೆ ಪಡೆದಿದ್ದಾರೆ. ಈ ಚಿತ್ರಕ್ಕಾಗಿ 25 ಕೋಟಿ ಹಣ ಪಡೆದಿದ್ದಾರಂತೆ ಅಜಯ್ ದೇವಗನ್.

ಚಿತ್ರದ ಒಟ್ಟು ಬಜೆಟ್ 400 ಕೋಟಿ!

ಚಿತ್ರದ ಒಟ್ಟು ಬಜೆಟ್ 400 ಕೋಟಿ!

'ಆರ್‌ಆರ್‌ಆರ್' ಗತಕಾಲದ ವೈಭವವನ್ನು ಸೃಷ್ಟಿಸಲಿದೆ. ಅದಕ್ಕಾಗಿ ಸಾಕಷ್ಟು ಖರ್ಚು ಮಾಡಲಾಗಿದೆ. ಯಾವುದೇ ಲಿಮಿಟ್ ಇಲ್ಲದೆ ಚಿತ್ರಕ್ಕೆ ಖರ್ಚು ಮಾಡಲಾಗಿದೆಯಂತೆ. ಚಿತ್ರದ ಒಟ್ಟಾರೆ ಬಡ್ಜೆಟ್ 400 ಕೋಟಿ. ಚಿತ್ರತಂಡ ಇದನ್ನು ಅಧಿಕೃತವಾಗಿ ಪ್ರಟಕ ಮಾಡಿಕೊಂಡಿದೆ. ಚಿತ್ರ ರಿಲೀಸ್‌ಗೂ ಮುನ್ನವೇ ಕೋಟಿ, ಕೋಟಿ ಬ್ಯುಸಿನೆಸ್ ಮಾಡಿದೆ. ಆರ್‌ಆರ್‌ಆರ್ ವೈಭವವನ್ನು ಕಣ್ತುಂಬಿಕೊಳ್ಳಲು ಇನ್ನು ಹೆಚ್ಚು ದಿನ ಬೇಕಾಗಿಲ್ಲ. ಮಾರ್ಚ್ 25ಕ್ಕೆ ಚಿತ್ರ ಬೆಳ್ಳಿ ಪರದೆಗೆ ಅಪ್ಪಳಿಸಲಿದೆ.

More from Filmibeat

English summary
Here Is The Details Of RRR Movie Actors Remunaration,They Paid Highest,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X