For Quick Alerts
  ALLOW NOTIFICATIONS  
  For Daily Alerts

  RRR ಚಿತ್ರಕ್ಕಾಗಿ ಲಂಡನ್ ಚೆಲುವೆ ಎಂಟ್ರಿ: ಎನ್.ಟಿ.ಆರ್ ಗೆ ಜೋಡಿ

  |

  ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಭಾರಿ ಕುತೂಹಲ ಮೂಡಿಸಿದೆ. ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್ ಟಿ ಆರ್ ಒಟ್ಟಿಗೆ ನಟಿಸುತ್ತಿರುವ ಈ ಚಿತ್ರದಲ್ಲಿ ಮೆಗಾಸ್ಟಾರ್ ಪುತ್ರನಿಗೆ ಆಲಿಯಾ ಭಟ್ ಜೋಡಿಯಾಗಿ ನಟಿಸುತ್ತಿದ್ದಾರೆ.

  ಯಂಗ್ ಟೈಗರ್ ಎನ್ ಟಿ ಆರ್ ಜೊತೆ ನಾಯಕಿಯಾಗಿ ನಟಿಸಲು ವಿದೇಶಿ ನಟಿ ಬೇಕು ಎಂಬ ಕಾರಣಕ್ಕೆ ನಿರ್ದೇಶಕರು ಹುಡುಕಾಟದಲ್ಲಿದ್ದರು. ಇದೀಗ, ಅಂತಿಮವಾಗಿ ಜೂನಿಯರ್ ಗೆ ಹೀರೋಯಿನ್ ಆಯ್ಕೆ ಮಾಡಿದ್ದಾರೆ.

  ರಾಜಮೌಳಿ 'RRR' : ಕತೆ, ನಾಯಕಿ, ಬಿಡುಗಡೆ ದಿನಾಂಕ ಬಹಿರಂಗ!ರಾಜಮೌಳಿ 'RRR' : ಕತೆ, ನಾಯಕಿ, ಬಿಡುಗಡೆ ದಿನಾಂಕ ಬಹಿರಂಗ!

  ಲಂಡನ್ ಮೂಲದ ರಂಗಭೂಮಿ ಕಲಾವಿದೆ ಒಲಿವಿಯಾ ಮೋರಿಸ್ ಆರ್ ಆರ್ ಆರ್ ಚಿತ್ರಕ್ಕೆ ಅಧಿಕೃತವಾಗಿ ಎಂಟ್ರಿಕೊಟ್ಟಿದ್ದಾರೆ. ಜೆನಿಫರ್ ಪಾತ್ರದಲ್ಲಿ ಈಕೆ ನಟಿಸುತ್ತಿದ್ದು, ಟ್ರಾಜಡಿ ಲವ್ ಸ್ಟೋರಿ ಕಥೆ ಹೊಂದಿದೆ ಎನ್ನಲಾಗಿದೆ.

  ಒಲಿವಿಯಾ ಮೋರಿಸ್ ಜೊತೆ ಮತ್ತಿಬ್ಬರು ಕಲಾವಿದರನ್ನ ಪರಿಚಯಿಸಿರುವ ರಾಜಮೌಳಿ, ಬ್ರಿಟಿಷ್ ಅಧಿಕಾರಿಗಳ ಪಾತ್ರಕ್ಕೆ ಅಂತಾರಾಷ್ಟ್ರೀಯ ನಟರನ್ನು ಕರೆತಂದಿದ್ದಾರೆ. ಅಲಿಸನ್ ಡೂಡಿ ಮತ್ತು ರೇ ಸ್ಟೀವನ್ಸನ್ ಬ್ರಿಟಿಷರ ಪಾತ್ರ ನಿರ್ವಹಿಸಿದ್ದಾರೆ.

  ರಾಜಮೌಳಿ ಚಿತ್ರವನ್ನ ರಿಜೆಕ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟಿರಾಜಮೌಳಿ ಚಿತ್ರವನ್ನ ರಿಜೆಕ್ಟ್ ಮಾಡಿದ ಬಾಲಿವುಡ್ ಸ್ಟಾರ್ ನಟಿ

  ಅಂದ್ಹಾಗೆ, ಬಾಹುಬಲಿ ಚಿತ್ರದ ನಂತರ ರಾಜಮೌಳಿ ಮಾಡುತ್ತಿರುವ ಸಿನಿಮಾ ಇದಾಗಿದ್ದು, ಐತಿಹಾಸಿಕ ಕಥೆ ಹೊಂದಿದೆ. ಅಲ್ಲುರಿ ಸೀರಾರಾಮ ರಾಜು ಹಾಗೂ ಕೊಮ್ಮರಾಂ ಭೀಮ ಅವರ ಆಧಾರಿತವಾಗಿ ಸ್ಕ್ರಿಪ್ಟ್ ಮಾಡಲಾಗಿದೆ. ಬ್ರಿಟಿಷರ ವಿರುದ್ಧ ಈ ದೇಶಭಕ್ತರು ಹೋರಾಡಿದ ಕಥೆಯನ್ನು ತೆರೆಮೇಲೆ ತರಲಾಗುತ್ತಿದೆ.

  English summary
  London beauty Olivia Morris as Jennifer roped as female lead role for NTR in RRR movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X