RRR: ಕ್ಲೈಮ್ಯಾಕ್ಸ್‌ಗಾಗಿ ಕೋಟಿ, ಕೋಟಿ ಖರ್ಚು!
ಸದ್ಯಕ್ಕೆ ಎಲ್ಲೆಲ್ಲೂ RRR ಚಿತ್ರದ ಬಗ್ಗೆಯೆ ಮಾತುಕತೆ, ಚರ್ಚೆ. ಆರ್‌ಆರ್‌ಆರ್ ಸಿನಿಮಾ ಎರಡೆರಡು ರಿಲೀಸ್ ದಿನಾಂಕವನ್ನು ನಿಗದಿ ಮಾಡಿ ಜನರ ತಲೆಗೆ ಹುಳ ಬಿಟ್ಟಿದೆ. ಭಾರತ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾ ಇದು. ಕೊರೋನಾ ಹಾವಳಿಯಿಂದ ಎರಡೆರಡು ಸಿನಿಮಾ ರಿಲೀಸ್ ದಿನಾಂಕವನ್ನು ಪ್ರಕಟ ಮಾಡುವ ಗೋಜಿಗೆ ಹೋಗಿದೆ.
ಕರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವುದು ಸಿನಿಮಾ ಮಂದಿಗೆ ದೊಡ್ಡ ತಲೆ ನೋವು ಆಗಿದೆ. ಸಿನಿಮಾ ರಿಲೀಸ್ ಸಾಕಷ್ಟು ತೊಂದರೆ ಆಗುತ್ತಲಿರುವುದಂತೂ ಹೌದು. ಇದೇ ಕಾರಣಕ್ಕೆ RRR ರಿಲೀಸ್ ಚಿತ್ರದ ರಿಲೀಸ್ ದಿನಾಂಕವನ್ನು ಜನವರಿಯಿಂದ ಮುಂದೂಡಬೇಕಾಯಿತು.
ಆರ್‌ಆರ್‌ಆರ್ ಚಿತ್ರದ ರಿಲೀಸ್ ದಿನಾಂಕದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದ್ದ ಹಾಗೆಯೇ ಈ ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ದೊಡ್ಡ ಸಮಾಚಾರ ಒಂದು ಹೊರ ಬಿದ್ದಿದೆ. ಚಿತ್ರದ ಒಟ್ಟು ಬಜೆಟ್ ಒಂದು ಕಡೆ ಆದರೆ, ಚಿತ್ರದ ಕ್ಲೈಮ್ಯಾಕ್ಸ್‌ಗಾಗಿ ಖರ್ಚು ಮಾಡಿರುವ ಹಣ ಮತ್ತೊಂದು ಕಡೆ. ಹೌದು ಕ್ಲೈಮ್ಯಾಕ್ಸ್‌ಗಾಗಿ ಕೋಟಿ, ಕೊಟಿ ಹಣವನ್ನು ಖರ್ಚು ಮಾಡಿದೆ ಚಿತ್ರ ತಂಡ.

40 ನಿಮಿಷದ ಕ್ಲೈಮ್ಯಾಕ್ಸ್‌ಗೆ 80 ರಿಂದ 90 ಕೋಟಿ ಖರ್ಚು!
RRR ಭಾರತೀಯ ಸಿನಿಮಾರಂಗದ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರವನ್ನು ವರ್ಷಗಟ್ಟಲೆ ಸಮಯ ತೆಗೆದುಕೊಂಡು, ಹೆಸರಾಂತ ಕಲಾವಿದರನ್ನು ಹಾಕಿ ದೊಡ್ಡ ಬಜೆಟ್‌ನಲ್ಲಿ ಮಾಡಿರುವ ಸಿನಿಮಾ. ಈ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಕ್ಕಾಗಿ 80 ರಿಂದ 90 ಕೋಟಿ ಹಣವನ್ನು ಖರ್ಚು ಮಾಡಿದೆ ಅಂತೆ ಚಿತ್ರ ತಂಡ. ಕ್ಲೈಮ್ಯಾಕ್ಸ್ ಒಟ್ಟು 40 ನಿಮಿಷಗಳ ಕಾಲ ಇರಲಿದೆಯಂತೆ. ಕ್ಲೈಮ್ಯಾಕ್ಸ್ ನಲ್ಲಿ ಸಂಪೂರ್ಣವಾಗಿ ಆ್ಯಕ್ಷನ್ ದೃಶ್ಯಗಳಿಂದ ಕೂಡಿದೆ ಅಂತೆ.

ಒಟ್ಟು ಚಿತ್ರದ ಬಜೆಟ್ 450 ಕೋಟಿ!
ಇನ್ನು 'ಆರ್‌ಆರ್‌ಆರ್' ಚಿತ್ರದ ಒಟ್ಟು ಬಜೆಟ್ 450 ಕೋಟಿ ಎಂದು ಅಂದಾಜಿಸಲಾಗಿದೆ. ಅದರಲ್ಲಿ 90 ಕೋಟಿ ರೂ. ಹಣವನ್ನು ಚಿತ್ರ ತಂಡ ಕೇವಲ ಕ್ಲೈಮ್ಯಾಕ್ಸ್‌ಗಾಗಿಯೇ ಖರ್ಚು ಮಾಡಿದೆ ಅಂತೆ. ಒಟ್ಟು 40 ನಿಮಿಷಗಳ ಸಮಯ ಚಿತ್ರದ ಕ್ಲೈಮ್ಯಾಕ್ಸ್ ಇದೆ ಅಂತೆ. ಹಾಗಾಗಿ ನಟ ರಾಮ್ ಚರಣ್ ತೇಜ ಮತ್ತು ಜೂ.ಎನ್‌ಟಿಆರ್ ಅವರ ಅದ್ದೂರಿ ಸಾಹಸವನ್ನು ಕ್ಲೈಮ್ಯಾಕ್ಸ್‌ನಲ್ಲಿ ಕಣ್ತುಂಬಿಕೊಳ್ಳಬಹುದು. ಈ ವಿಚಾರ ಸದ್ಯ ಟಾಲಿವುನ್‌ನಲ್ಲಿ ಹರಿದಾಡುತ್ತಿದೆ.

RRR: ನಾಯಕರು, ನಾಯಕಿ, ನಿರ್ದೇಶಕರಿಗೂ ದೊಡ್ಡ ಮೊತ್ತ!
ಇನ್ನು ಸಿನಿಮಾ ಮೇಕಿಂಗ್ ಬಜೆಟ್ ಮಾತ್ರ ದೊಡ್ಡದಾಗಿ ಇಲ್ಲ. ಸಿನಿಮಾದಲ್ಲಿ ಅಭಿನಯಿಸಿದ ಕಲಾವಿದರು, ನಾಯಕರು, ನಾಯಕಿ, ನಿರ್ದೇಶಕನಿಗೂ ಕೂಡ ದೊಡ್ಡ ಮೊತ್ತದ ಸಂಭಾವನೆ ನೀಡಲಾಗಿದೆ ಎಂದು ವರದಿ ಆಗಿದೆ. ನಟ ರಾಮ್ ಚರಣ್ ತೇಜ ಮತ್ತು ಜೂ.ಎನ್ ಟಿ ಆರ್‌ಗೆ ತಲಾ 45 ಕೋಟಿ ರೂ. ಸಂಭಾವನೆಯನ್ನು ನೀಡಲಾಗಿದೆ ಅಂತೆ. ಇನ್ನೂ ನಟಿ ಆಲಿಯಾ ಭಟ್‌ಗೆ 25 ಕೋಟಿ, ಅಜಯ್ ದೇವಗನ್ ಅವರಿಗೆ 9 ಕೋಟಿ ಮತ್ತು ನಿರ್ದೇಶಕ ರಾಜಮೌಳಿ ಅವರಿಗೆ 30 ಕೋಟಿ ರೂ. ಹಣವನ್ನು ನೀಡಲಾಗಿದೆ ಅಂತೆ.

ಯಾವಾಗ ತೆರೆಗೆ ಬರಲಿದೆ RRR?
ಇನ್ನು RRR ಚಿತ್ರದ ರಿಲೀಸ್ ದಿನಾಂಕ ಪ್ರಕಟ ಆಗಿದೆ. ಆದರೆ ಎರಡು ರಿಲೀಸ್ ದಿನಾಂಕಗಳು ಪ್ರಕಟ ಆಗಿರುವ ಕಾರಣ ಸಿನಿಮಾ ಯಾವ ದಿನಾಂಕಕ್ಕೆ ಬರಬಹುದು ಎನ್ನುವ ಗೊಂದಲ ಸಿನಿಮಾರಂಗ ಮತ್ತು ಪ್ರೇಕ್ಷಕ ವರ್ಗದಲ್ಲೂ ಮೂಡಿದೆ. ಕೊರೊನಾ ಕಡಿಮೆ ಆಗಿ ಚಿತ್ರಮಂದಿರಗಳಲ್ಲಿ ಶೇ 100 ಆಸನ ಭರ್ತಿಗೆ ಅವಕಾಶ ಸಿಕ್ಕರೆ ಸಿನಿಮಾ ಮಾರ್ಚ್ 18ಕ್ಕೆ ತೆರೆಗೆ ಬರಲಿದೆ. ಇಲ್ಲವಾದರೆ ಎಪ್ರಿಲ್ 28ಕ್ಕೆ ಚಿತ್ರ ರಿಲೀಸ್ ಆಗುತ್ತದೆ. ಇದನ್ನು ಚಿತ್ರ ತಂಡವೇ ಸ್ಪಷ್ಟ ಪಡಿಸಬೇಕು.


Click it and Unblock the Notifications











