RRR ನಿರ್ದೇಶಕ ರಾಜಮೌಳಿ ಮೇಲೆ ದೃಶ್ಯ ಕದ್ದ ಆರೋಪ

ಆರ್‌ಆರ್‌ಆರ್‌ ಸಿನಿಮಾದ ಟೀಸರ್‌ ನಿನ್ನೆ ಬಿಡುಗಡೆ ಆಗಿದೆ. ಜೂ ಎನ್‌ಟಿಆರ್ ನಿರ್ವಹಿಸಿರುವ ಕೊಮರಂ ಭೀಮ್ ಪಾತ್ರ ಪರಿಚಯವನ್ನು ಟೀಸರ್ ಮಾಡಿಕೊಡುತ್ತಿದೆ.

ಮೈನವಿರೇಳಿಸುವಂತಹಾ ಟೀಸರ್ ಅದಾಗಿದ್ದು, ಜೂ.ಎನ್‌ಟಿಆರ್ ಪಾತ್ರ ಎಷ್ಟು ಆಕ್ಷನ್ ಭರಿತವಾಗಿರಬಹುದು ಎಂಬ ಝಲಕ್ ಅನ್ನು ಟೀಸರ್ ನೀಡುತ್ತಿದೆ. ಆದರೆ ಈ ಟೀಸರ್‌ನಲ್ಲಿ ದೃಶ್ಯಗಳನ್ನು ಬೇರೆಡೆಯಿಂದ ಕದಿಯಲಾಗಿದೆ ಎನ್ನಲಾಗುತ್ತಿದೆ.

ಆರ್‌ಆರ್‌ಆರ್‌ ಟೀಸರ್‌ನಲ್ಲಿರುವ ಕೆಲವು ದೃಶ್ಯಗಳನ್ನು ಇಂಟರ್ನೆಟ್‌ನ ವಿಡಿಯೋಗಳಿಂದ ಕದಿಯಲಾಗಿದೆ ಎಂಬ ಆರೋಪವನ್ನು ನಿರ್ದೇಶಕ ರಾಜಮೌಳಿ ಮೇಲೆ ಹೊರಿಸಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ.

ಕೆಲವು ದೃಶ್ಯಗಳ ಬಗ್ಗೆ ತಕರಾರು

ಕೆಲವು ದೃಶ್ಯಗಳ ಬಗ್ಗೆ ತಕರಾರು

ಟೀಸರ್‌ನಲ್ಲಿ ಬರುವ ನೀರಿನ ಮೇಲೆ ಮಳೆ ಹನಿ ಬೀಳುವ ದೃಶ್ಯ, ಬಂಡೆ ಸಿಡಿಯುವ ದೃಶ್ಯ, ಮರಗಳ ನಡುವಿಂದ ಸೂರ್ಯೋದಯ ಕಾಣಿಸುವ ದೃಶ್ಯಗಳನ್ನು ಇಂಟರ್ನೆಟ್‌ನಲ್ಲಿ ಈಗಾಗಲೇ ಲಭ್ಯವಿರುವ ವಿಡಿಯೋಗಳಿಂದ ಕದಿಯಲಾಗಿದೆ ಎಂದು ಆರೋಪಿಸಲಾಗಿದೆ.

ದೂರು ದಾಖಲಿಸಲು ಒತ್ತಾಯ

ದೂರು ದಾಖಲಿಸಲು ಒತ್ತಾಯ

ಟೀಸರ್ ಅನ್ನು ರಿಚ್ ಆಗಿಸಲು ನಿರ್ದೇಶಕ ರಾಜಮೌಳಿ ಟ್ರಿಕ್‌ಗಳನ್ನು ಬಳಸಿದ್ದಾರೆ, ತಮ್ಮದಲ್ಲದ ದೃಶ್ಯಗಳನ್ನು ಟೀಸರ್‌ ಒಳಗೆ ಸೇರಿಸಿದ್ದಾರೆ ಎಂದು ನೆಟ್ಟಿಗರು ಕೆಲವು ಆರೋಪಿಸಿದ್ದಾರೆ. ಕೆಲವರಂತೂ ಚಿತ್ರತಂಡದ ಮೇಲೆ ಪ್ರಕರಣದ ದಾಖಲಿಸಬೇಕು ಎಂದಿದ್ದಾರೆ ಸಹ.

ಚಿತ್ರತಂಡದ ಪರವಾಗಿಯೂ ವಾದ

ಚಿತ್ರತಂಡದ ಪರವಾಗಿಯೂ ವಾದ

ಆದರೆ ದೊಡ್ಡ ಸಂಖ್ಯೆಯ ಮಂದಿ ಚಿತ್ರತಂಡದ ಪರವಾಗಿ ವಾದ ಮಂಡಿಸಿದೆ. ಅದರಲ್ಲಿಯೂ ಜೂ.ಎನ್‌ಟಿಆರ್ ಹಾಗೂ ರಾಜಮೌಳಿ ಅಭಿಮಾನಿಗಳು ಆರೋಪವನ್ನು ತಳ್ಳಿ ಹಾಕಿದ್ದಾರೆ. ರಾಜಮೌಳಿ ಕಾಪಿ ಮಾಡುವ ನಿರ್ದೇಶಕ ಅಲ್ಲ ಎಂಬುದು ಹಲವರ ವಾದ.

Recommended Video

Arjun Sarja : ಚಿರು ಮಗನನ್ನು ನೋಡಲು ಚೆನ್ನೈನಿಂದ ಹೋರಟ ಅರ್ಜುನ್ ಸರ್ಜಾ | Filmibeat Kannada
ವೈರಲ್ ಆಗಿರುವ ಟೀಸರ್ ವಿಡಿಯೋ

ವೈರಲ್ ಆಗಿರುವ ಟೀಸರ್ ವಿಡಿಯೋ

ನಿನ್ನೆ ಬಿಡುಗಡೆ ಆಗಿರುವ ಟೀಸರ್ ಜೂ ಎನ್‌ಟಿಆರ್ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಟೀಸರ್ ವಿಡಿಯೋ ಸಖತ್ ವೈರಲ್ ಆಗಿದೆ. ಟೀಸರ್ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಬಿಡುಗಡೆ ಆಗಿದೆ. ಕನ್ನಡದಲ್ಲಿ ರಾಮ್ ಚರಣ್ ಧ್ವನಿ ನೀಡಿದ್ದಾರೆ.

More from Filmibeat

English summary
In Social Media some people alleged that RRR teaser's some scenes taken by other videos which were present in Internet.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X