twitter
    For Quick Alerts
    ALLOW NOTIFICATIONS  
    For Daily Alerts

    ಜೂ ಎನ್‌ಟಿಆರ್ ರಾಜಕೀಯ ಎಂಟ್ರಿ ಬಗ್ಗೆ ಅನುಮಾನ ಮೂಡಿಸಿದ RRR ಹೊಸ ಪೋಸ್ಟರ್?

    |

    ಎನ್‌ಟಿಆರ್ ಸ್ಥಾಪಿಸಿದ ತೆಲುಗು ದೇಶ ಪಕ್ಷ ಆಂಧ್ರಪ್ರದೇಶದಲ್ಲಿ ನೆಲಕಚ್ಚಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡು ವಿರೋಧ ಪಕ್ಷದಲ್ಲಿ ಕೂತಿದೆ. ಚಂದ್ರಬಾಬು ನಾಯ್ಡು ನಾಯಕತ್ವದ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ. ಟಿಡಿಪಿ ಪಕ್ಷ ಆಂಧ್ರ ಪ್ರದೇಶದಲ್ಲಿ ಮತ್ತೆ ಅಧಿಕಾರಕ್ಕೆ ಬರಬೇಕು ಅಂದ್ರೆ ಜೂನಿಯರ್ ಎನ್‌ಟಿಆರ್ ನಾಯಕತ್ವದಿಂದ ಮಾತ್ರ ಸಾಧ್ಯ ಎಂಬ ಚರ್ಚೆ ಆಗಾಗ ಕೇಳಿಬರುತ್ತಲೇ ಇದೆ.

    ಯಂಗ್ ಟೈಗರ್ ಎನ್‌ಟಿಆರ್ ರಾಜಕೀಯ ಪ್ರವೇಶ ಮಾಡಬಹುದು ಎಂಬ ಅಂತೆ ಕಂತೆಗಳು ಆಂಧ್ರ ರಾಜಕೀಯದಲ್ಲಿ ಸುದ್ದಿಯಾಗುತ್ತಲೇ ಇದೆ. ಇದೀಗ, ರಾಜಮೌಳಿ ನಿರ್ದೇಶನದಲ್ಲಿ ತಯಾರಾಗುತ್ತಿರುವ ಆರ್‌ಆರ್‌ಆರ್‌ ಸಿನಿಮಾ ತಂಡದ ಇದಕ್ಕೆ ಪರೋಕ್ಷ ಉತ್ತರ ನೀಡಿದೆ ಎಂಬ ಗುಮಾನಿ ಹಬ್ಬಿದೆ. ಯುಗಾದಿ ಹಬ್ಬದ ಪ್ರಯುಕ್ತ ಆರ್‌ಆರ್‌ಆರ್ ಹೊಸ ಪೋಸ್ಟರ್ ಬಿಡುಗಡೆಯಾಗಿದ್ದು, ಈ ಪೋಸ್ಟರ್ ಎನ್‌ಟಿಆರ್ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದೆ ಎನ್ನಲಾಗುತ್ತಿದೆ. ಮುಂದೆ ಓದಿ...

    ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್ಜೂನಿಯರ್ ಎನ್.ಟಿ.ಆರ್ ಗೆ ಧಮ್ ಇಲ್ಲ: ಎನ್.ಟಿ ರಾಮರಾವ್ ಪತ್ನಿ ಪಂಚ್

    ಎನ್‌ಟಿಆರ್ ತಲೆಯಲ್ಲಿ ಟಿಡಿಪಿ ಧ್ವಜ?

    ಎನ್‌ಟಿಆರ್ ತಲೆಯಲ್ಲಿ ಟಿಡಿಪಿ ಧ್ವಜ?

    ಯುಗಾದಿ ಹಬ್ಬದ ಪ್ರಯುಕ್ತ ಆರ್‌ಆರ್‌ಆರ್ ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಈ ಪೋಸ್ಟರ್‌ನಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ ತೇಜ ಇಬ್ಬರು ತಲೆಗೆ ಹಳದಿ ಬಣ್ಣದ ಬಟ್ಟೆ ಕಟ್ಟಿಕೊಂಡಿದ್ದಾರೆ. ಇದು ಟಿಡಿಪಿ ಪಕ್ಷದ ಭಾವುಟದ ಸಂಕೇತ, ಇದು ಜೂ ಎನ್‌ಟಿಆರ್ ರಾಜಕೀಯ ಪ್ರವೇಶದ ಸುಳಿವು ಎಂದು ಬಿಂಬಿಸಲಾಗುತ್ತಿದೆ.

    ಎನ್‌ಟಿಆರ್ ಅಗತ್ಯವಿದೆ ಎಂದಿದ್ದ ವರ್ಮಾ

    ಎನ್‌ಟಿಆರ್ ಅಗತ್ಯವಿದೆ ಎಂದಿದ್ದ ವರ್ಮಾ

    ಎರಡು ವರ್ಷದ ಹಿಂದೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಜೂನಿಯರ್ ಎನ್‌ಟಿಆರ್ ರಾಜಕೀಯ ಪ್ರವೇಶದ ಕುರಿತು ಅಭಿಪ್ರಾಯ ಮಂಡಿಸಿದ್ದರು. ಟಿಡಿಪಿ ಪಕ್ಷಕ್ಕೆ ಎನ್‌ಟಿಆರ್ ಸಾರಥಿಯಾಗಬೇಕೆ ಎಂದ ಟ್ವಿಟ್ಟರ್‌ನಲ್ಲಿ ಪೋಲ್ ಕೇಳಿದ್ದರು. ಈ ಸಮೀಕ್ಷೆಗೆ ಸುಮಾರು 41 ಸಾವಿರ ಜನ ಪ್ರತಿಕ್ರಿಯಿಸಿದ್ದರು. ಅದರಲ್ಲಿ ಶೇಕಡಾ 79 ರಷ್ಟು ಜನ ಎನ್.ಟಿ.ಆರ್ ಬರಲಿ ಎಂದು ಹೇಳಿದ್ದರೆ, 21 ರಷ್ಟು ಜನ ಮಾತ್ರ ಎನ್.ಟಿ.ಆರ್ ಗೆ ವಿರೋಧ ವ್ಯಕ್ತಪಡಿಸಿದ್ದರು.

    ಯಂಗ್ ಟೈಗರ್‌ಗೆ ಧಮ್ ಇಲ್ಲ ಎಂದಿದ್ದ ಲಕ್ಷ್ಮಿ ಪಾರ್ವತಿ

    ಯಂಗ್ ಟೈಗರ್‌ಗೆ ಧಮ್ ಇಲ್ಲ ಎಂದಿದ್ದ ಲಕ್ಷ್ಮಿ ಪಾರ್ವತಿ

    'ಟಿಡಿಪಿ ಪಕ್ಷಕ್ಕೆ ಜೂನಿಯರ್ ಎನ್.ಟಿ.ಆರ್ ಸೂಕ್ತ ನಾಯಕನಾಗಬಹುದಾ' ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಲಕ್ಷ್ಮಿ ಪಾರ್ವತಿ (ಎನ್‌ಟಿಆರ್ ಎರಡನೇ ಪತ್ನಿ) ''ಅವರಿಗೆ ನಿಜವಾಗಲೂ ಧಮ್ ಇಲ್ಲ. ಹಾಗಂದ ಮೇಲೆ ಪಕ್ಷಕ್ಕೆ ಸಾರಥಿಯಾದ್ರೆ ಏನು ಪ್ರಯೋಜನ ಬಂತು'' ಎಂದಿದ್ದರು. ಚಂದ್ರಬಾಬು ನಾಯ್ಡು ವಿರುದ್ಧ ಪ್ರಶ್ನಿಸುವ ಧೈರ್ಯವಿಲ್ಲ. ಅವರು ಮಾಡಿರುವ ಅನ್ಯಾಯವನ್ನ ಕೇಳುವ ತಾಕತ್ತಿಲ್ಲ. ತಾತನಿಗೆ, ತಂದೆಗೆ ಎಷ್ಟು ಅನ್ಯಾಯ ಮಾಡಿದ್ದಾರೆ. ಯಾವತ್ತಾದರೂ ಅದನ್ನ ವಿರೋಧಿಸಿ ಮಾತನಾಡಿದ್ದಾರಾ? ತಪ್ಪನ್ನು ಎಂದೂ ಪ್ರಶ್ನಿಸದ ವ್ಯಕ್ತಿ ಹೇಗೆ ನಾಯಕತ್ವ ವಹಿಸಲು ಸಾಧ್ಯ? ಎಂದಿದ್ದರು.

    ಸಿನಿಮಾ ಮಾತ್ರ ಉದ್ದೇಶ ಇರಬಹುದು

    ಸಿನಿಮಾ ಮಾತ್ರ ಉದ್ದೇಶ ಇರಬಹುದು

    ಜೂನಿಯರ್ ಎನ್‌ಟಿಆರ್ ಈ ಹಿಂದೆ ಟಿಡಿಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಿರುವ ಉದಾಹರಣೆ ಇದೆ. ಬಾಲಕೃಷ್ಣ ಪರವಾಗಿಯೂ ಪ್ರಚಾರ ಮಾಡಿದ್ದಾರೆ. ಆದ್ರೆ, ಅಧಿಕೃತವಾಗಿ ರಾಜಕೀಯ ಎಂಟ್ರಿ ಬಗ್ಗೆ ಯಾವತ್ತೂ ಮಾತನಾಡಿಲ್ಲ. ಸತತವಾಗಿ ಸಿನಿಮಾ ಮಾಡುತ್ತಿರುವ ಯಂಗ್ ಟೈಗರ್ ಮುಂದೆ ರಾಜಕೀಯ ಆಯ್ಕೆ ಸದ್ಯಕ್ಕಿಲ್ಲ ಎಂದೆನಿಸುತ್ತಿದೆ. ಆರ್‌ಆರ್‌ಆರ್‌ ಸಿನಿಮಾ ಅಕ್ಟೋಬರ್‌ ತಿಂಗಳಲ್ಲಿ ಬಿಡುಗಡೆಯಾಗಲಿದೆ.

    English summary
    SS Rajamouli Directorial RRR movie team has released new Poster on ugadi. this new poster Creates Doubts on Jr Ntr Political Entry?.
    Thursday, April 15, 2021, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X