'RRR' ಅಪ್ ಡೇಟ್: ಹೊಸ ಪೋಸ್ಟರ್ ಜೊತೆ ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡ ಚಿತ್ರತಂಡ
ತೆಲುಗಿನ ಖ್ಯಾತ ನಿರ್ದೇಶಕ ರಾಜಮೌಳಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ 'ಆರ್ ಆರ್ ಆರ್' ಸಿನಿಮಾದ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿದೆ. ಲಾಕ್ ಡೌನ್ ಬಳಿಕ ಮತ್ತೆ ಚಿತ್ರೀಕರಣ ಪ್ರಾರಂಭವಾಗಿದೆ. ಈ ನಡುವೆ ಚಿತ್ರದ ಹೊಸ ಪೋಸ್ಟರ್ ಅನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದೆ ಸಿನಿಮಾತಂಡ.
ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಬೈಕ್ ನಲ್ಲಿ ಹೋಗುತ್ತಿರುವ ದೃಶ್ಯ ಇದಾಗಿದೆ. ಚಿತ್ರದಲ್ಲಿ ಅಲ್ಲೂರಿ ಸೀತರಾಮ ರಾಜು ಆಗಿ ಮಿಂಚಿರುವ ಅಲ್ಲು ಅರ್ಜುನ್ ಮತ್ತು ಕೋಮರಾಮ್ ಭೀಮ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜೂ ಎನ್ ಟಿ ಆರ್ ಇಬ್ಬರೂ ಸಂತಸದಲ್ಲಿ ಬೈಕ್ ಸವಾರಿ ಮಾಡುತ್ತಿರುವ ಫೋಟೋ ಅಭಿಮಾನಿಗಳ ಹೃದಯಗೆದ್ದಿದೆ. ಪೋಸ್ಟರ್ ಜೊತೆಗೆ ಸಿನಿಮಾತಂಡ ಮತ್ತಷ್ಟು ಇಂಟ್ರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದೆ. ಮುಂದೆ ಓದಿ...

ರಾಮ್ ಚರಣ್ ಫೋಟೋ ವೈರಲ್
ಆರ್ ಆರ್ ಆರ್ ಸಿನಿಮಾತಂಡ ಚಿತ್ರೀಕರಣ ಬೇಗ ಮುಗಿಸುವ ಪ್ಲಾನ್ ಮಾಡಿದೆ. ಹಾಗಾಗಿ ತ್ವರಿತಗತಿಯಲ್ಲಿ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಚಿತ್ರೀಕರಣದಲ್ಲಿ ಭಾಗಿಯಾಗಿರುವ ರಾಮ್ ಚರಣ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ ಸದ್ಯ ಚಿತ್ರೀಕರಣ ಯಾವ ಹಂತದಲ್ಲಿದೆ, ಯಾವಾಗ ಮುಕ್ತಾಯವಾಗಲಿದೆ ಎನ್ನುವ ಮಾಹಿತಿಯನ್ನು ಆರ್ ಆರ್ ಆರ್ ತಂಡ ರಿವೀಲ್ ಮಾಡಿದೆ.

2 ಭಾಷೆಯ ಡಬ್ಬಿಂಗ್ ಮುಗಿಸಿದ ರಾಮ್-Jr NTR
ಆರ್ ಆರ್ ಆರ್ ಸಿನಿಮಾ ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದೆ. ಎರಡು ಹಾಡನ್ನು ಹೊರತುಪಡಿಸಿ ಚಿತ್ರದ ಟಾಕಿ ಭಾಗದ ಚಿತ್ರೀಕರಣ ಶೀಘ್ರದಲ್ಲೇ ಮುಗಿಯಲಿದೆ ಎಂದು ಬಹಿರಂಗ ಪಡಿಸಿದ್ದಾರೆ. ಜೊತೆಗೆ ಜೂ.ಎನ್ ಟಿ ಆರ್ ಮತ್ತು ರಾಮ್ ಚರಣ್ ಇಬ್ಬರು ಎರಡು ಭಾಷೆಯ ಡಬ್ಬಿಂಗ್ ಕೆಲಸವನ್ನು ಸದ್ಯದಲ್ಲೇ ಮುಗಿಸಲಿದ್ದಾರೆ ಎಂದು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.

ದೊಡ್ಡ ಸ್ಟಾರ್ ಕಾಸ್ಟ್ ಇರುವ ಸಿನಿಮಾ
ಆರ್ ಆರ್ ಆರ್ ಭಾರತದ ಬಿಗ್ ಬಜೆಟ್ ಸಿನಿಮಾಗಳಲ್ಲಿ ಒಂದಾಗಿದೆ. ಅತೀ ದೊಡ್ಡ ಸ್ಟಾರ್ ಕಾಸ್ಟ್ ಹೊಂದಿರುವ ಸಿನಿಮಾವಾಗಿದೆ. ರಾಮ್ ಚರಣ್ ಮತ್ತು ಜೂ ಎನ್ ಟಿ ಆರ್ ಜೊತೆಗೆ ಬಾಲಿವುಡ್ ಕಲಾವಿದರು ಸಹ ನಟಿಸಿದ್ದಾರೆ. ನಟಿ ಅಲಿಯಾ ಭಯ್, ಅಜಯ್ ದೇವನ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.
Recommended Video

450 ಕೋಟಿಗೂ ಅಧಿಕ ಬಜೆಟ್ ನಲ್ಲಿ ತಯಾರಾಗುತ್ತಿರುವ ಸಿನಿಮಾ
ಪ್ಯಾನ್ ಇಂಡಿಯಾ ಸಿನಿಮಾ ಇದಾಗಿದ್ದು, ತೆಲುಗು ಜೊತೆಗೆ ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಇನ್ನು ಅನೇಕ ಭಾಷೆಗಳಲ್ಲಿ ಬಿಡುಗೆಯಾಗಲಿದೆ. ಡಿವಿವಿ ಎಂಟರ್ ಟೈನ್ ಮೆಂಟ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ಈ ಸಿನಿಮಾ 450 ಕೋಟಿ ರೂ.ಗೂ ಹೆಚ್ಚಿನ ಬಜೆಟ್ ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ದಿನಾಂಕ ಮತ್ತೆ ಮುಂದೆ ಹೋಗುತ್ತಾ ಎಂದು ಕಾದು ನೋಡಬೇಕು.


Click it and Unblock the Notifications











