Lakshmi Parvathi: ಎನ್‌ಟಿಆರ್ ನನ್ನೊಟ್ಟಿಗೆ ಕೇವಲ ಅಕ್ರಮ ಸಂಬಂಧ ಇಟ್ಟುಕೊಂಡಿದ್ರಾ?: ಲಕ್ಷ್ಮಿ ಪಾರ್ವತಿ ಪ್ರಶ್ನೆ

ವೈಸಿಪಿ ನಾಯಕಿ, ಎಪಿ ತೆಲುಗು ಮತ್ತು ಸಂಸ್ಕೃತ ಅಕಾಡೆಮಿ ಅಧ್ಯಕ್ಷೆ ಲಕ್ಷ್ಮೀ ಪಾರ್ವತಿ ಅವರು ಎಪಿ ಬಿಜೆಪಿ ಅಧ್ಯಕ್ಷೆ, ಎನ್‌ಟಿಆರ್ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಂಧ್ರದ ಮಾಜಿ ಸಿಎಂ, ಖ್ಯಾತ ನಟ ಎನ್‌ಟಿಆರ್‌ ಬೆನ್ನಿಗೆ ಚೂರಿ ಹಾಕಿದ್ದರಲ್ಲಿ ಹಿನ್ನಡೆಯಲ್ಲಿ ಚಂದ್ರಬಾಬು ಜೊತೆಗೆ ಪುರಂದೇಶ್ವರಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ನಟಸಾರ್ವಭೌಮ ಎನ್‌ಟಿಆರ್ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಕೇಂದ್ರ ಸರ್ಕಾರ ಅವರ ಭಾವಚಿತ್ರ ಇರುವ 100 ಮುಖ ಬೆಲೆಯ ನಾಣ್ಯ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಎನ್‌ಟಿಆರ್‌ ಪತ್ನಿಯಾದ ನನಗೆ ಆಹ್ವಾನ ಇರಲಿಲ್ಲ ಎಂದು ಲಕ್ಷ್ಮೀ ಪಾರ್ವತಿ ಬೇಸರ ವ್ಯಕ್ತಪಡಿಸಿದ್ದಾರೆ. ಎನ್‌ಟಿಆರ್ ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡಿರುವುದು ಸಂತಸ ತಂದಿದೆ. ಆದರೆ ಎನ್‌ಟಿಆರ್ ಪತ್ನಿಯಾದ ನನ್ನನ್ನು ಯಾಕೆ ಆಹ್ವಾನಿಸದೇ ಇರುವುದು ತಪ್ಪು. ಈ ಕಾರ್ಯಕ್ರಮಕ್ಕೆ ತನ್ನನ್ನು ಆಹ್ವಾನಿಸುವಂತೆ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೆ. ಈ ಕಾರ್ಯಕ್ರಮದ ಆಮಂತ್ರಣ ನೋಡಿದರೆ ರಾಷ್ಟ್ರಪತಿಗಳು ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುತ್ತಿರುವಂತೆ ಕಾಣುತ್ತಿದೆ. ಸರ್ಕಾರವೇ ಈ ಕಾರ್ಯಕ್ರಮ ಆಯೋಜಿಸಿದ್ದರೆ ಎನ್‌ಟಿಆರ್ ಪತ್ನಿಯಾಗಿ ನನ್ನನ್ನು ಆಹ್ವಾನಿಸದೇ ಇರುವುದು ಅನ್ಯಾಯ ಎಂದಿದ್ದಾರೆ.

Rs 100 NTR Coin release: Lakshmi Parvathi Sensational Comments On Purandeswari

ಎನ್‌ಟಿಆರ್‌ ಸಾವಿಗೆ ಕುಟುಂಬದವರೆಲ್ಲ ಕಾರಣ ಎಂದು ಲಕ್ಷ್ಮಿ ಪಾರ್ವತಿ ಆರೋಪಿಸಿದ್ದಾರೆ. ಎನ್‌ಟಿಆರ್ ಅವರ ಪ್ರಾಣ ತೆಗೆದವರು ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಎನ್‌ಟಿಆರ್ ನನ್ನನ್ನು ಮದುವೆ ಆಗಿದ್ದಾರೋ ಇಲ್ಲವೋ ಎನ್ನುವ ಪ್ರಶ್ನೆಗೆ ಅವರ ಮಕ್ಕಳು ಉತ್ತರಿಸಬೇಕು. ನಾನು ಎನ್‌ಟಿಆರ್‌ ಪತ್ನಿ ಎಂದು ಕುತ್ತಿಗೆಗೆ ಫೋಟೊ ಹಾಕಿಕೊಂಡು ತಿರುಗಾಡಬೇಕಾ? ಎಂದು ಪ್ರಶ್ನಿಸಿದ್ದಾರೆ. ನಾವಿಬ್ಬರು ಮದುವೆ ಆಗಿದ್ದೇವೆ ಎನ್ನುವುದಕ್ಕೆ ಫೋಟೊಗಳು, ಅಂದು ಪ್ರಕಟವಾದ ಸುದ್ದಿಯೇ ಸಾಕ್ಷಿ. ಇದನ್ನು ಎನ್‌ಟಿಆರ್ ಅವರೇ ಹಲವಾರು ಬಾರಿ ಸಾರ್ವಜನಿಕವಾಗಿ ಹೇಳಿದ್ದಾರೆ ಕೂಡ. ಆದರೆ, ಟಿಡಿಪಿಯವರು ಎನ್ ಟಿಆರ್ ಅವರನ್ನು ಮದುವೆಯಾಗಿಲ್ಲ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಲಕ್ಷ್ಮಿ ಪಾರ್ವತಿ ಟೀಕಿಸಿದರು. ನನ್ನ ಜೊತೆ ಎನ್‌ಟಿಆರ್‌ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಾ? ಮದುವೆ ಮಾಡಿಕೊಂಡಿದ್ದರಾ? ನೀವೇ ಹೇಳಬೇಕು ಎಂದು ಲಕ್ಷ್ಮೀ ಪಾರ್ವತಿ ಪ್ರಶ್ನಿಸಿದರು.

80ರ ದಶಕದಲ್ಲೇ ಪುರಂದೇಶ್ವರಿ ನೀವೆಲ್ಲಾ ಮದುವೆ ಆಗಿ ಹೋಗಿಬಿಟ್ಟರು. ಕೊನೆಗೆ ಎನ್‌ಟಿಆರ್ ಅವರನ್ನು ನೋಡಿಕೊಂಡಿದ್ದರು ಯಾರು? ಅವರು ಅನಾರೋಗ್ಯಕ್ಕೆ ತುತ್ತಾದಾಗ ಜೊತೆಗಿದ್ದವಳು ನಾನು. ಅದಕ್ಕೆ ನನ್ನನ್ನು ಮದುವೆ ಆದರು. ನಿಮ್ಮ ತಂದೆಗೆ ಯಾಕೆ ದ್ರೋಹ ಬಗೆಯುತ್ತಿದ್ದೀರಾ? ಎಂದು ಕೇಳಿದ್ದಾರೆ. ಎನ್‌ಟಿಆರ್ ಅವರಿಗೆ ಕೇಂದ್ರ ಸರ್ಕಾರ ಭಾರತರತ್ನ ಕೊಡೊಕೆ ಮುಂದಾದರೂ ಅದನ್ನು ತಡೆದಿದ್ದು ನೀನು ಎಂದು ನನಗೆ ಗೊತ್ತಾಯಿತು ಎಂದಿದ್ದಾರೆ.

Rs 100 NTR Coin release: Lakshmi Parvathi Sensational Comments On Purandeswari

ಭುವನೇಶ್ವರಿ ಮತ್ತು ಪುರಂದೇಶ್ವರಿ ಇಬ್ಬರೂ ತಂದೆಗೆ ದ್ರೋಹ ಬಗೆದಿದ್ದಾರೆ. ಇನ್ನು ಮುಂಧೆ ಪುರಂದೇಶ್ವರಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಚಂದ್ರಬಾಬು ಮತ್ತು ಪುರಂದೇಶ್ವರಿ ಅವರು ಚುನಾವಣೆ ನಂತರ ಮುಖ ತೋರಿಸಲಾಗದೇ ರಾಜ್ಯದಿಂದ ಓಡಿ ಹೋಗುವಂತೆ ಜಗನ್ ಪರ ಪ್ರಚಾರ ಮಾಡುತ್ತೇನೆ ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ.

ಎನ್‌ಟಿಆರ್‌ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ಜ್ಯೂ. ಎನ್‌ಟಿಆರ್‌ ಅವರನ್ನು ಆಹ್ವಾನಿಸಿದ್ದೇರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ. ಜ್ಯೂ. ಎನ್ ಟಿಆರ್ ಬಂದಾಗ ಪುರಂದೇಶ್ವರಿ, ಚಂದ್ರಬಾಬು ಹಾಗೂ ಜ್ಯೂ. ಎನ್‌ಟಿಆರ್ ಇಬ್ಬರನ್ನು ಒಂದು ಮಾಡಲು ಯತ್ನಿಸಿದರು. ಚಂದ್ರಬಾಬು ಸ್ಕ್ರಿಪ್ಟ್‌ನ ಪುರಂದೇಶ್ವರಿ ಓದುತ್ತಾರೆ ಎಂದು ಲಕ್ಷ್ಮಿ ಪಾರ್ವತಿ ಟೀಕಿಸಿದರು. ದೆಹಲಿಗೆ ತೆರಳಿ ಪ್ರಧಾನಿ ಹಾಗೂ ರಾಷ್ಟ್ರಪತಿಗಳನ್ನು ಭೇಟಿ ಮಾಡುತ್ತೇನೆ ಎಂದರು. ಸರ್ಕಾರದ ಆಹ್ವಾನ ಇದ್ದದ್ದರೆ ಜ್ಯೂ.‌ ಎನ್‌ಟಿಆರ್‌ ಕಾರ್ಯಕ್ರಮಕ್ಕೆ ಹಾಜರಾಗುತ್ತಿದ್ದರು ಎಂದು ಲಕ್ಷ್ಮಿ ಪಾರ್ವತಿ ಹೇಳಿದ್ದಾರೆ.

More from Filmibeat

English summary
NTR Rs 100 Coin launch: Lakshmi Parvathi fires on Purandeswari.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X