"ಜ್ಯೂ. ಎನ್‌ಟಿಆರ್ ಸಮನಾಗಿ ರುಕ್ಮಿಣಿ ನಟಿಸೋಕೆ ಸಾಧ್ಯವಿಲ್ಲ.. ಆದ್ರೂ"; 'ಡ್ರ್ಯಾಗನ್' ಚಿತ್ರ ನಿರ್ಮಾಪಕ
ಕನ್ನಡ ನಟಿ ರುಕ್ಮಿಣಿ ವಸಂತ್ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಸ್ಟಾರ್ ನಟರ ಬಹುಕೋಟಿ ವೆಚ್ಚದ ಸಿನಿಮಾಗಳಿಲ್ಲಿ ರುಕ್ಕು ನಾಯಕಿಯಾಗಿ ನಟಿಸುತ್ತಿದ್ದಾರೆ. ಸದ್ಯ ರಿಷಬ್ ಶೆಟ್ಟಿ ಜೊತೆ ನಟಿಸಿರು 'ಕಾಂತಾರ -1' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುಂದೆ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಒಂದು ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. 'ಡ್ರ್ಯಾಗನ್' ಚಿತ್ರಕ್ಕೂ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.
ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್‌ನಲ್ಲಿ ಹೈವೋಲ್ಟೇಜ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ತಾರಕ್ ಗಾಯಗೊಂಡು ಚಿತ್ರೀಕರಣಕ್ಕೆ ಬ್ರೇಕ್ ಬ್ರೇಕ್ ಬಿದ್ದಿದೆ. ಈ ಚಿತ್ರಕ್ಕೆ 'ಡ್ರ್ಯಾಗನ್' ಎಂಬ ಟೈಟಲ್ ಪರಿಶೀಲನೆಯಲ್ಲಿದೆ ಚಿತ್ರತಂಡ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ತಾರಕ್ ಜೊತೆ ರುಕ್ಕು ಸ್ಕ್ರೀನ್‌ಶೇರ್ ಮಾಡಿಕೊಳ್ಳುವ ಬಗ್ಗೆ ಊಹಾಪೋಹ ಶುರುವಾಗಿತ್ತು. ಇದೀಗ ಸ್ವತಃ ನಿರ್ಮಾಪಕ ರವಿಶಂಕರ್ ಖಚಿತಪಡಿಸಿದ್ದಾರೆ.

ಮೈತ್ರಿ ಮೂವಿಮೇಕರ್ಸ್ ಸಂಸ್ಥೆಯ ರವಿಶಂಕರ್ 'ಕಾಂತಾರ'-1 ಚಿತ್ರದ ತೆಲುಗು ಪ್ರೀ ರಿಲೀಸ್ ಈವೆಂಟ್‌ಗೆ ಹಾಜರಾಗಿದ್ದರು. ನೈಜಾಂ ಭಾಗದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮೈತ್ರಿ ಸಂಸ್ಥೆ ಕೊಂಡುಕೊಂಡಿದೆ. ಈವೆಂಟ್‌ನಲ್ಲಿ ರುಕ್ಮಿಣಿ ವಸಂತ್ ಬಗ್ಗೆ ನಿರ್ಮಾಪಕ ರವಿಶಂಕರ್ ಮಾತನಾಡುತ್ತಾ 'ಡ್ರ್ಯಾಗನ್' ಚಿತ್ರದಲ್ಲಿ ಆಕೆ ನಟಿಸುವ ಬಗ್ಗೆ ಖಚಿತಪಡಿಸಿದ್ದಾರೆ. 'ಕಾಂತಾರ- 1' ಸಿನಿಮಾ ಟ್ರೈಲರ್ ನೋಡಿ ಖುಷಿಯಾಯಿತು. ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗೆಲ್ಲುತ್ತದೆ ಎಂದಿದ್ದಾರೆ.
"ಕಾಂತಾರ-1 ಚಿತ್ರದ ನಾಯಕಿ ರುಕ್ಮಿಣಿ ವಸಂತ್. ಮುಂದೆ ಜ್ಯೂ. ಎನ್‌ಟಿಆರ್ ಹಾಗೂ ಪ್ರಶಾಂತ್ ನೀಲ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಕೆಯ ಪರ್ಫಾರ್ಮೆನ್ಸ್ ಹತ್ತಿರದಿಂದ ನೋಡಿದ್ದೇವೆ. ನಿಜಕ್ಕೂ ಅದ್ಭುತ, ಎನ್‌ಟಿಆರ್ ಅವರಿಗೆ ಸರಿಸಮನಾಗಿ ಕೊನೆ ಪಕ್ಷ ಹೆಚ್ಚು ಕಮ್ಮಿ ಅವರ ಹತ್ತಿರ ಎನ್ನುವಂತೆ ನಟಿಸುವ ನಟಿಗಾಗಿ ಬಹಳ ಹುಡುಕಿದೆವು. ಕೊನೆಗೆ ಈಕೆ ಸಿಕ್ಕಿದ್ಲು. ಒಳ್ಳೆ ಪರ್ಫಾರ್ಮರ್. ಎನ್‌ಟಿಆರ್ ಅಷ್ಟು ಅಲ್ಲದೇ ಇದ್ದರೂ 80% ಸಮನಾಗಿ ನಟಿಸುತ್ತೀರಾ ಎಂದು ಭಾವಿಸುತ್ತಿದ್ದೇವೆ ಎಂದು ರವಿಶಂಕರ್ ಹೇಳಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಬಗ್ಗೆ ಮಾತನಾಡಿದ ರವಿಶಂಕರ್ "10-15 ವರ್ಷಗಳಲ್ಲಿ ದೊಡ್ಡ ಚಿತ್ರ ನಿರ್ಮಾಣ ಸಂಸ್ಥೆ ಮಾಡುವ ಸಾಧನೆಯಲ್ಲಿ ಆರೇಳು ವರ್ಷಗಳಲ್ಲಿ ಹೊಂಬಾಳೆ ಮಾಡಿದೆ. 'ಕೆಜಿಎಫ್', 'ಸಲಾರ್', 'ನರಸಿಂಹ', 'ಕಾಂತಾರ' ಈಗ 'ಕಾಂತಾರ- 1' ಕೂಡ ಬ್ಲಾಕ್‌ಬಸ್ಟರ್ ಹಿಟ್ ಆಗುತ್ತದೆ. ಮುಂದೆ ಆ ಸಂಸ್ಥೆ ನಿರ್ಮಿಸಲಿರುವ ಸಿನಿಮಾಗಳ ಬಗ್ಗೆ ಹೇಳುವುದೇ ಬೇಕಿಲ್ಲ" ಎಂದಿದ್ದಾರೆ.
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ತಾರಕ್ ನಟಿಸುವ ಸಿನಿಮಾ ಬಹಳ ಹಿಂದೆ ಘೋಷಣೆ ಆಗಿತ್ತು. ಕಾರಣಾಂತರಗಳಿಂದ ಸೆಟ್ಟೇರುವುದು, ಚಿತ್ರೀಕರಣ ಆರಂಭಿಸುವುದು ತಡವಾಗಿತ್ತು. ಈಗಾಗಲೇ ಒಂದೆರಡು ಶೆಡ್ಯೂಲ್ ಮುಗಿದೆ. ಅಧಿಕೃತವಾಗಿ ಚಿತ್ರದ ಟೈಟಲ್ ರಿವೀಲ್ ಆಗಿಲ್ಲ. ಮುಂದಿನ ವರ್ಷ ಜೂನ್ 25ಕ್ಕೆ ಸಿನಿಮಾ ತೆರೆಗೆ ಬರಲಿದೆ. ಭುವನ್ ಗೌಡ ಛಾಯಾಗ್ರಹಣ ಹಾಗೂ ರವಿಬಸ್ರೂರು ಸಂಗೀತ ಈ ಚಿತ್ರಕ್ಕೂ ಇರಲಿದೆ. ಎನ್‌ಟಿಆರ್ ಆರ್ಟ್ಸ್ ಸಂಸ್ಥೆ ಜೊತೆ ಸೇರಿ ಮೈತ್ರಿ ಸಂಸ್ಥೆ ಚಿತ್ರ ನಿರ್ಮಾಣ ಮಾಡುತ್ತಿದೆ.
ಆಂಧ್ರ, ತೆಲಂಗಾಣದಲ್ಲಿ 'ಕಾಂತಾರ-1' ಚಿತ್ರದ ಟಿಕೆಟ್ ರೇಟ್ ಹೆಚ್ಚಿಸಲು ಸರ್ಕಾರದ ಬಳಿ ಮನವಿ ಮಾಡಲಾಗಿದೆ ಎನ್ನಲಾಗ್ತಿದೆ. ಅನುಮತಿ ಸಿಕ್ಕ ಕೂಡಲೇ ತೆಲುಗು ರಾಜ್ಯಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಲಿದೆ. ಅಂದಾಜು 100 ಕೋಟಿ ರೂ.ಗೆ ಆಂಧ್ರ, ತೆಲಂಗಾಣ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಅದೇ ನಿಜವಾಗಿದ್ದರೆ ಡಬ್ಬಿಂಗ್ ಚಿತ್ರವೊಂದಕ್ಕೆ ಈ ಮಟ್ಟದಲ್ಲಿ ಡೀಲ್ ಕುದುರಿಸಿರುವುದು ಇದೇ ಮೊದಲು ಎನ್ನುವಂತಾಗಿದೆ. ತೆಲುಗು ಫಿಲ್ಮ್ ಮೇಕರ್ಸ್ ಕೂಡ 'ಕಾಂತಾರ- 1' ಸಿನಿಮಾ ನೋಡಲು ಕಾತರರಾಗಿದ್ದಾರೆ.


Click it and Unblock the Notifications











