ಮದುವೆಗೆ ಸಜ್ಜಾದ ನಟಿ ಕಾಜಲ್ ಅಗರ್ ವಾಲ್: ಹುಡುಗ ಯಾರು?

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಕಾಜಲ್ ಆಗರ್ ವಾಲ್ ಮದುವೆ ವದಂತಿ ವೈರಲ್ ಆಗಿದೆ. ಕಾಜಲ್ ಮದುವೆ ವಿಚಾರ ಸುದ್ದಿಯಾಗುತ್ತಿರುವುದು ಇದೆ ಮೊದಲೇನಲ್ಲ. ಈ ಮೊದಲು ಸಹ ಕಾಜಲ್ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡಿದೆ. ಈಗ ಮತ್ತೆ ಕಾಜಲ್ ಮದುವೆ ಸುದ್ದಿ ಹರಿಡಾದುತ್ತಿದೆ.

Recommended Video

ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

ಇತ್ತೀಚಿಗೆ ಲಕ್ಷ್ಮಿ ಮಂಚು ಚಾಟ್ ಶೋನಲ್ಲಿ ಮಾತನಾಡಿದ ಕಾಜಲ್, ಶೀಘ್ರದಲ್ಲೇ ಮದುವೆಯಾಗುವ ಬಗ್ಗೆ ಯೋಚಿಸುತ್ತಿರುವುದಾಗಿ ಹೇಳಿದ್ದರು. ಆದರೆ ಯಾರು, ಎನ್ನುವ ಬಗ್ಗೆ ಬಹಿರಂಗಪಡಿಸಿರಲಿಲ್ಲ. ಆದರೀಗ 35 ವರ್ಷದ ನಟಿ ಕಾಜಲ್ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

ಮೂಲಗಳ ಪ್ರಕಾರ ಕಾಜಲ್ ಔರಂಗಾಬಾದ್ ನ ಖ್ಯಾತ ಉದ್ಯಮಿ ಜೊತೆ ಮದುವೆಗೆ ಸಜ್ಜಾಗಿದ್ದಾರಂತೆ. ಸದ್ಯದಲ್ಲೇ ಮದುವೆ ಮತ್ತು ಹುಡುಗ ಯಾರು ಎನ್ನುವ ಬಗ್ಗೆ ಅಧಿಕೃತವಾಗಿ ಬಹಿರಂಗಪಡಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ನಟಿ ಕಾಜಲ್ ಯಾವುದೆ ಪ್ರತಿಕ್ರಿಯೆ ನೀಡಿಲ್ಲ.

Rumor Is Spreading Kajal Agarwal Getting Married With Businessman

ಕಾಜಲ್ ಸದ್ಯ ಐದಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇಂಡಿಯನ್-2, ಮುಂಬೈ ಸಾಗ ಸೇರಿದ್ದಂತೆ ಸಾಕಷ್ಟು ಸಿನಿಮಾಗಳು ಕಾಜಲ್ ಕೈಯಲ್ಲಿವೆ. ಇದರ ಜೊತೆಗೆ ಕಾಜಲ್ ಮದುವೆ ವಿಚಾರ ಸದ್ದು ಮಾಡುತ್ತಿವೆ.

More from Filmibeat

English summary
Rumor is spreading Kajal Agarwal is getting married with a businessman soon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X