ಹಳೇ ಫೋಟೋ ಹಂಚಿಕೊಂಡು ಸಿಕ್ಕಿಬಿದ್ದ ರಶ್ಮಿಕಾ ಮಂದಣ್ಣ: ವಿಜಯ್ ದೇವರಕೊಂಡ ಜೊತೆಗೆ ಟರ್ಕಿ ಸುತ್ತಾಟ ಎಂದ ಫ್ಯಾನ್ಸ್!

ಗೀತಾ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದ ಬಳಿಕ ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ಒಂದಾಗಿದ್ದಾರೆ. ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಹಲವು ಬಾರಿ ಹಲವು ಘಟನೆಗಳು ಸೂಚಿಸುತ್ತಿವೆ. ಆದರೆ, ಇವರು ಮಾತ್ರ ನಾವು ಬರೀ ಫ್ರೆಂಡ್ಸ್ ಎನ್ನುವ ಮೂಲಕ ಸುಮ್ಮನಾಗುತ್ತಾರೆ.

ಆದರೆ, ಈಗ ಮತ್ತೆ ನಟಿ ರಶ್ಮಿಕಾ ಮಂದಣ್ಣ ಫೋಟೋ ಮತ್ತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಳೆಯದು ಎಂದು ಅಭಿಮಾನಿಗಳು ಸಾಕ್ಷಿ ಸಮೇತ ಗುರುತಿಸಿದ್ದಾರೆ. ಜೊತೆಗೆ ನೀವು ವಿಜಯ್ ದೇವರಕೊಂಡ ಅವರ ಜೊತೆಗೆ ಟರ್ಕಿ ಪ್ರವಾಸಕ್ಕೆ ತೆರಳಿದ್ದಾಗ ತೆಗೆದುಕೊಂಡಿರುವ ಚಿತ್ರ ಇದು ಎಂದು ಹೇಳಿದ್ದಾರೆ.

vijay-deverakonda-and-rashmika-mandanna

ಇಬ್ಬರ ಫೋಟೋಗೂ ಒಂದೇ ಬ್ಯಾಕ್​ಗ್ರೌಂಡ್!

ಈ ಹಿಂದೆ ಒಂದೇ ಬ್ಯಾಕ್​ಗ್ರೌಂಡ್ ಇದ್ದ ಚಿತ್ರಗಳನ್ನು ಹಂಚಿಕೊಂಡಿದ್ದ ವೇಳೆ ಅವರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದರು. ಈಗ ಮತ್ತೆ ಒಂದೇ ರೀತಿಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ. ಇತ್ತೀಚಿಗೆ ನಟಿ ರಶ್ಮಿಕಾ ಮಂದಣ್ಣ ಸ್ವಲ್ಪ ಸಮಯದ ಹಿಂದೆ ಟರ್ಕಿಯಲ್ಲಿ ತಾನು ಕಳೆದ ರಜಾ ದಿನಗಳ ನೆನಪಿನಲ್ಲಿ ಫೋಟೋ ಮತ್ತು ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಸ್ಟ್‌ಗೆ, "1 ನೇ ಚಿತ್ರವು ತಾವು ತಲುಪಿದ ಗಮ್ಯಸ್ಥಾನ. ಈ ವೀಡಿಯೊ ನಾನು ಆ ಸ್ಥಳವನ್ನು ಹುಡುಕಲು ನಡೆಸಿದ ಪ್ರಯತ್ನ, ಪ್ರಯಾಣದ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ" ಎಂದಿದ್ದಾರೆ. ರಶ್ಮಿಕಾ ಹಂಚಿಕೊಂಡ ಚಿತ್ರವು ಟರ್ಕಿಯದ್ದು ಎಂದು ಅನ್ನಿಸುತ್ತದೆ. ಈ ಹಿಂದೆ ವಿಜಯ್ ದೇವರಕೊಂಡ ಅವರ ಇತ್ತೀಚಿನ ಚಿತ್ರ 'ಖುಶಿ' ಚಿತ್ರೀಕರಣ ನಡೆದ ಸ್ಥಳ ಅದು. ಆಗ ಇಬ್ಬರು ಟರ್ಕಿಗೆ ಹೋಗಿದ್ದರು ಎಂಬುದನ್ನು ಸೂಚಿಸುತ್ತದೆ.

ರಶ್ಮಿಕಾ ಮಂದಣ್ಣ ಅವರ ಫೋಟೋ ನೀಡುತ್ತಿದ್ದ ಹಾಗೆ ಅಭಿಮಾನಿಗಳು ತಕ್ಷಣ ವಿಜಯ್ ದೇವರಕೊಂಡ ಅವರ ಫೋಟೋಗಳನ್ನು ಹುಡುಕಿದ್ದಾರೆ. ಇಬ್ಬರು ಒಂದೇ ಟೇಬಲ್‌ನಲ್ಲಿ ಕುಳಿತಿರುವ ಫೋಟೋವನ್ನು ಹುಡುಕಿ ತೆಗೆದಿದ್ದಾರೆ. ವಿಜಯ್ ದೇವರಕೊಂಡ ಕೂಡ ಇದೇ ಸ್ಥಳದಲ್ಲಿ ಕುಳಿತ ಫೋಟೋವನ್ನು ಕಳೆದ ಮೇ ತಿಂಗಳ 30 ನೇ ತಾರೀಖು ಹಂಚಿಕೊಂಡಿದ್ದರು.

vijay-deverakonda-and-rashmika-mandanna

ರಶ್ಮಿಕಾ ಪೋಸ್ಟ್‌ಗೆ ಅಭಿಮಾನಿಗಳ ಪ್ರತಿಕ್ರಿಯೆ

"ವಿಜಯ್ ಕೂಡ ನಿನ್ನ ಜೊತೆಗಿದ್ದ!! ಅವರು ಟರ್ಕಿ ಆಹಾರದ ಅದೇ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಸಿಕ್ಕಿ ಹಾಕಿಕೊಂಡಿರಿ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು "ಮೇ ತಿಂಗಳಲ್ಲಿ ಯಾರೋ ಟರ್ಕಿಗೆ ಭೇಟಿ ನೀಡಿದರು!" ಎಂದು ಮತ್ತೊಬ್ಬರು ಕಿಚಾಯಿಸಿದ್ದಾರೆ. ನಮ್ಮನ್ನು ಬಕ್ರಾ ಮಾಡಲು ಪ್ರಯತ್ನಿಸಬೇಡಿ, ನಿಮ್ಮ ಅದೇ ಟೇಬಲ್‌ನಲ್ಲಿ ವಿಜಯ್ ದೇವರಕೊಂಡ ಕೂಡ ಇದ್ದಾರೆ ಎಂದು ಹಲವು ಮಂದಿ ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಸಂದೀಪ್ ರೆಡ್ಡಿ ವಂಗಾ ಅವರ ಮುಂಬರುವ ಅನಿಮಲ್ ಸಿನಿಮಾದಲ್ಲಿ ಕಾಣಿಸಿಕೊಕೊಂಡಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್, ಬಾಬಿ ಡಿಯೋಲ್, ಅನುಪಮ್ ಖೇರ್, ಶಕ್ತಿ ಕಪೂರ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಟೀಸರ್ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗಿ, ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಸಿನಿಮಾ ಇದೇ ವರ್ಷ ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ.

ಇನ್ನು, 2021 ರ ಚಲನಚಿತ್ರ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸೀಕ್ವೆಲ್‌ ರಶ್ಮಿಕಾ ಪುಷ್ಪ 2: ದಿ ರೂಲ್‌ನಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ಪ್ರಕಾಶ್ ರಾಜ್, ಜಗಪತಿ ಬಾಬು ಪ್ರಮುಖ ಪಾತ್ರ ನಿರ್ವಹಿಸಲಿದ್ದು, ಚಿತ್ರಕ್ಕೆ ಸುಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.

More from Filmibeat

English summary
Rumoured couple Vijay Deverakonda and Rashmika Mandanna shares similar images from Turkey trip.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X