ಏನು..!! ಕಾಜಲ್ ಗರ್ಭಿಣಿನಾ..? ಸೌತ್ ಸುಂದರಿ ಬಗ್ಗೆ ಕೇಳಿಬರ್ತಿದೆ ಹೊಸ ಸುದ್ದಿ
ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಬಗ್ಗೆ ಹೊಸ ಸುದ್ದಿ ಕೇಳಿಬರುತ್ತಿದೆ. ನಟಿ ಕಾಜಲ್ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಅಂದಹಾಗೆ ನಟಿಮಣಿಯರು ಮದುವೆ ಬಳಿಕ ಗರ್ಭಿಣಿ ಎನ್ನುವ ಸುದ್ದಿ ವೈರಲ್ ಆಗುವುದು ಹೊಸದೇನಲ್ಲ. ಅನೇಕ ಸ್ಟಾರ್ ನಟಿಯರು ಗರ್ಭಿಣಿ ಎನ್ನುವ ವದಂತಿಯನ್ನು ಎದುರಿಸಿದ್ದಾರೆ. ಇದೀಗ ಕಾಜಲ್ ಅವರ ಬಗ್ಗೆಯು ಗರ್ಭಿಣಿ ಆಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದ್ದರು ಸಹ ಕಾಜಲ್ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿರುವುದು ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ. ಮದುವೆ ವಿಚಾರದಲ್ಲೂ ಕಾಜಲ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮದುವೆ ಸುದ್ದಿ ವೈರಲ್ ಆಗಿದ್ದರು ಕಾಜಲ್ ಸ್ಪಷ್ಟನೆ ನೀಡಿರಲಿಲ್ಲ. ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಸಾಮಾಜಿಕ ಜಾಲತಾಣದಲ್ಲಿ ಮದುವೆ ವಿಚಾರ ಬಹಿರಂಗ ಪಡಿಸಿದ್ದರು.
ಇದೀಗ ಗರ್ಭಿಣಿ ಆಗಿದ್ದಾರೆ ಎನ್ನುವ ವಿಚಾರ ವೈರಲ್ ಆಗಿದ್ದರೂ ಸಹ ಸೈಲೆಂಟ್ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಕಾಜಲ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕಾಜಲ್ ಗರ್ಭಿಣಿ ಆಗಿದ್ದಾರೆ ಎನ್ನುವ ಅನುಮಾನಕ್ಕೆ ಕಾರಣವಾದ ಮತ್ತೊಂದು ವಿಚಾರ, ಕಾಜಲ್ ಯಾವುದೇ ಸಿನಿಮಾಗೆ ಸಹಿ ಮಾಡದೇ ಇರುವುದು. ಹೌದು, ಸದ್ಯ ಕಾಜಲ್ ಯಾವುದೇ ಸಿನಿಮಾಗಳಿಗೂ ಸಹಿ ಮಾಡಿಲ್ಲ. ಹಾಗಾಗಿ ಗರ್ಭಿಣಿ ಆಗಿರುವುದು ಖಚಿತ ಎನ್ನುತ್ತಿವೆ ಮೂಲಗಳು.

ಅಂದಹಾಗೆ ಕಾಜಲ್ ಕಳೆದ ವರ್ಷ ಅಕ್ಟೋಬರ್ 30ರಂದು ಪ್ರಿಯತಮ ಗೌತಮ್ ಜೊತೆ ಹಸೆಮಣೆ ಏರಿದ್ದರು. ಮುಂಬೈನ ತಾಜ್ ಮಹಲ್ ಪ್ಯಾಲೆಸ್ ನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕಾಜಲ್ ಮತ್ತು ಗೌತಮ್ ಕೆಲವೇ ಕೆಲವು ಮಂದಿ ಆಪ್ತರ ಸಮ್ಮುಕದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾಜಲ್ ಮದುವೆಗೆ ಕುಟುಂಬದವರು ಮತ್ತು ತೀರ ಆಪ್ತರು ಮಾತ್ರ ಭಾಗಿಯಾಗಿದ್ದರು. ಸದ್ಯ ಕಾಜಲ್ ಪತಿ ಜೊತೆ ಮುಂಬೈನಲ್ಲಿ ನೆಲೆಸಿದ್ದಾರೆ. ಮುಂದಿನ ತಿಂಗಳು ಕಾಜಲ್ ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದ್ದಾರೆ. ಆ ಸಮಯದಲ್ಲಿ ಗರ್ಭಿಣಿ ಆಗಿರುವ ಸಂತಸದ ಸುದ್ದಿಯನ್ನು ಬಹಿರಂಗ ಪಡಿಸುತ್ತಾರಾ ಎಂದು ಕಾದುನೋಡಬೇಕು.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಕಾಜಲ್ ನಟನೆಯ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ತಮಿಳು ಮೂರು ಸಿನಿಮಾ, ಹಿಂದಿಯ ಒಂದು ಸಿನಿಮಾ ಮತ್ತು ತೆಲುಗಿನಲ್ಲಿ ಎರಡು ಸಿನಿಮಾವನ್ನು ಮುಗಿಸಿದ್ದಾರೆ. ಇನ್ನು ಶಂಕರ್ ನಿರ್ದೇಶನದ, ಕಾಮಲ್ ಹಾಸನ್ ನಟನೆಯ ಇಂಡಿಯನ್-2 ಸಿನಿಮಾ ಅರ್ಧಕ್ಕೆ ನಿಂತಿದೆ. ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಬಿಟ್ಟರೆ ಕಾಜಲ್ ಹೊಸ ಸಿನಿಮಾಗೆ ಸಹಿ ಮಾಡಿಲ್ಲ.


Click it and Unblock the Notifications











