ಹಸೆಮಣೆ ಏರಲು ಸಜ್ಜಾದ 'ಸಾಹೋ' ನಿರ್ದೇಶಕ: ದಂತವೈದ್ಯೆ ಜತೆ ಮದುವೆ

By Avani Malnad

ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಕೆಲವು ಮದುವೆಗಳನ್ನು ಮುಂದೂಡಲಾಗಿತ್ತು. ಆದರೆ ಅನೇಕರು ಹೆಚ್ಚು ಜನರು ಬರಲಾಗದಿದ್ದರೂ ತೊಂದರೆಯಿಲ್ಲ ಎಂದು ಸರಳ ಸಮಾರಂಭದಲ್ಲಿಯೇ ಮದುವೆ ನಡೆಸಿ ನೆಮ್ಮದಿಯಿಂದ ನಿಟ್ಟುಸಿರುಬಿಟ್ಟಿದ್ದಾರೆ. ಚಿತ್ರರಂಗದಲ್ಲಿ ಇದು ವಿವಾಹಪರ್ವ. ಅನೇಕ ನಟರು, ನಟಿಯರು, ತಂತ್ರಜ್ಞರು ಸರಳವಾಗಿ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿರಿಸುತ್ತಿದ್ದಾರೆ.

Recommended Video

ಟ್ವಿಟ್ಟರ್ ನಲ್ಲಿ ದರ್ಶನ್ ಪತ್ನಿ ಬೇಸರ ಹೊರಹಾಕಿದ್ದು ಯಾಕೆ?? | Vijay Lakshmi | Sumalatha Ambareesh

ಕನ್ನಡದಲ್ಲಿ ನಿಖಿಲ್ ಕುಮಾರ್, ನಿರ್ದೇಶಕ ಎಪಿ ಅರ್ಜುನ್, ನಿರ್ದೇಶಕಿ ಸುಮನಾ ಕಿತ್ತೂರು ಸೇರಿದಂತೆ ಅನೇಕರು ಸಾಂಸಾರಿಕ ಬದುಕು ಆರಂಭಿಸಿದ್ದಾರೆ. ತೆಲುಗಿನ ಚಿತ್ರರಂಗದಲ್ಲಿ ಕೂಡ ಮದುವೆ ಪರ್ವ ಜೋರಾಗಿಯೇ ಇದೆ. ಇತ್ತೀಚೆಗೆ ನಟ ನಿತಿನ್ ಹೊಸ ಬದುಕು ಶುರುಮಾಡಿದ್ದರು. ನಟ ರಾಣಾ ದಗ್ಗುಬಾಟಿ ಮತ್ತು ಉದ್ಯಮಿ ಮಿಹೀಕಾ ಬಜಾಜ್ ನಿಶ್ಚಿತಾರ್ಥ ನೆರವೇರಿದ್ದು, ಆಗಸ್ಟ್‌ನಲ್ಲಿ ಮದುವೆಯಾಗಲಿದ್ದಾರೆ. ನಟಿ ನಯನತಾರಾ-ನಿರ್ದೇಶಕ ವಿಘ್ನೇಶ್ ಶಿವನ್ ಮದುವೆಯ ಕುರಿತೂ ಮಾತುಗಳು ಕೇಳಿಬರುತ್ತಿವೆ. ಈ ನಡುವೆ ತೆಲುಗಿನ ಮತ್ತೊಬ್ಬ ನಿರ್ದೇಶಕರು ಮದುವೆಯಾಗಲು ಸಿದ್ಧತೆ ನಡೆಸಿದ್ದಾರೆ. ಮುಂದೆ ಓದಿ...

ಜೂನ್ 10ರಂದು ನಿಶ್ಚಿತಾರ್ಥ

ಜೂನ್ 10ರಂದು ನಿಶ್ಚಿತಾರ್ಥ

ಸುಜೀತ್ ಮತ್ತು ಪ್ರವಲ್ಲಿಕಾ ಇಬ್ಬರ ಕುಟುಂಬದವರೂ ಕುಳಿತು ಮಾತುಕತೆ ನಡೆಸಿ ಮದುವೆಗೆ ಸಹಮತಿ ಸೂಚಿಸಿದ್ದಾರೆ. ಜೂನ್ 10ರಂದು ಹೈದರಾಬಾದ್‌ನಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಕುಟುಂಬದ ಆಪ್ತೇಷ್ಟರ ಸಮ್ಮುಖದಲ್ಲಿ ಇಬ್ಬರ ನಿಶ್ಚಿತಾರ್ಥ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸ್ನೇಹದಿಂದ ಮದುವೆಗೆ...

ಸ್ನೇಹದಿಂದ ಮದುವೆಗೆ...

ಸುಜೀತ್ ಮತ್ತು ಪ್ರವಲ್ಲಿಕಾ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದು, ಇಬ್ಬರ ಪ್ರೇಮಕ್ಕೆ ಕುಟುಂಬದವರಿಂದ ಸಮ್ಮತಿ ದೊರಕಿದ್ದು, ಮದುವೆಯ ಮುದ್ರೆ ಬೀಳಲಿದೆ. ಮದುವೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಕೊರೊನಾ ವೈರಸ್ ಬಿಕ್ಕಟ್ಟು ಕಡಿಮೆಯಾಗುವವರೆಗೂ ಕಾಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಚಿರಂಜೀವಿ ಜತೆ ಸಿನಿಮಾ

ಚಿರಂಜೀವಿ ಜತೆ ಸಿನಿಮಾ

2014ರಲ್ಲಿ 'ರನ್ ರಾಜಾ ರನ್' ಚಿತ್ರದ ಮೂಲಕ ಸುಜೀತ್ ನಿರ್ದೇಶಕರಾಗಿ ಗುರುತಿಸಿಕೊಂಡರು. ನಂತರ 2019ರಲ್ಲಿ ಪ್ರಭಾಸ್ ನಟನೆಯ ತ್ರಿಭಾಷಾ ಚಿತ್ರ 'ಸಾಹೋ' ಮೂಲಕ ಪ್ರಸಿದ್ಧಪಡೆದಿದ್ದಾರೆ. ಮಲಯಾಳಂನ ಹಿಟ್ ಚಿತ್ರ 'ಲೂಸಿಫರ್'ನ ತೆಲುಗು ರೀಮೇಕ್ ಸಿದ್ಧತೆ ನಡೆಸುತ್ತಿದ್ದು, ಚಿರಂಜೀವಿ ನಾಯಕರಾಗಿ ನಟಿಸಲಿದ್ದಾರೆ.

More from Filmibeat

English summary
Saaho fame Telugu director Sujeeth will get engaged with dentist Pravallika on June 10.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X