For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಪ್ರಭಾಸ್ 'ಸಾಹೋ' ಖ್ಯಾತಿಯ ನಿರ್ದೇಶಕ ಸುಜೀತ್

  |

  ಕೊರೊನಾ ವೈರಸ್ ಆತಂಕದಿಂದ ಸಾಕಷ್ಟು ಮದುವೆಗಳನ್ನು ಮುಂದೂಡಲಾಗಿತ್ತು. ಅದ್ದೂರಿಯಾದಗಿ ಮದುವೆಯಾದಲು ಕನಸುಕಂಡಿದ್ದ ಅನೇಕರು ಕೊರೊನಾ ಆತಂಕ ಮುಗಿದ ಬಳಿಕ ಮದುವೆ ಆಗಲು ನಿರ್ಧರಿಸಿದ್ದರು. ಆದರೆ ಕೊರೊನಾ ಪರಿಸ್ಥಿತಿ ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಮುಂದೂಡಲ್ಪಟ್ಟ ಮದುಗಳು ನಡೆಯುತ್ತಿವೆ. ಅನೇಕರು ಸರಳವಾಗಿ, ಕೆಲವು ಕೆಲವು ಆಪ್ತರ ನಡುವೆ ಹಸೆಮಣೆ ಏರುತ್ತಿದ್ದಾರೆ.

  ಚಿತ್ರರಂಗದಲ್ಲಿ ಅನೇಕರು ಕೊರೊನಾ ಆತಂಕದ ನಡುವೆಯೂ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ತೆಲುಗು ಚಿತ್ರರಂಗದಲ್ಲಿಯೂ ಮದುವೆ ಪರ್ವ ಜೋರಾಗಿದೆ. ಮೊನ್ನೆ ಮೊನ್ನೆಯಷ್ಟೆ ನಟ ನಿತಿನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ನಟ ರಾಣಾ ದಗ್ಗುಬಾಟಿ ಹಸೆಮಣೆ ಏರಲು ಸಜ್ಜಾಗುತ್ತಿದ್ದಾರೆ. ಈಗ ಸಾಹೋ ಸಿನಿಮಾ ಖ್ಯಾತಿಯ ನಿರ್ದೇಶಕ ಸುಜೀತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಓದಿ..

  ಹಸೆಮಣೆ ಏರಲು ಸಜ್ಜಾದ 'ಸಾಹೋ' ನಿರ್ದೇಶಕ: ದಂತವೈದ್ಯೆ ಜತೆ ಮದುವೆಹಸೆಮಣೆ ಏರಲು ಸಜ್ಜಾದ 'ಸಾಹೋ' ನಿರ್ದೇಶಕ: ದಂತವೈದ್ಯೆ ಜತೆ ಮದುವೆ

  ಹೈದರಾಬಾದ್ ನಲ್ಲಿ ಮದುವೆ

  ಹೈದರಾಬಾದ್ ನಲ್ಲಿ ಮದುವೆ

  ಪ್ರಭಾಸ್ ಅಭಿನಯದ 'ಸಾಹೋ' ಖ್ಯಾತಿಯ ನಿರ್ದೇಶಕ ಸುಜೀತ್ ರೆಡ್ಡಿ ಬಹುಕಾಲದ ಗೆಳತಿ ಪ್ರವಲ್ಲಿಕಾ ಜೊತೆ ಹಸೆಮಣೆ ಏರಿದ್ದಾರೆ. ಸೂಜಿತ್ ಮತ್ತು ಪ್ರವಲ್ಲಿಕಾ ಮದುವೆ ನಿನ್ನೆ (ಆಗಸ್ಟ್ 2) ನೆರವೇರಿದೆ. ಹೈದರಾಬಾದ್ ನ ಗೋಲ್ಕೊಂಡ ರೆಸ್ಟಾರ್ಟ್ ನಲ್ಲಿ ಇಬ್ಬರು ಪತಿ-ಪತ್ನಿಯರಾಗಿದ್ದಾರೆ.

  ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿ

  ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿ

  ಇಬ್ಬರ ಮದುವೆಗೆ ಕೆಲವೇ ಕೆಲವು ಆಪ್ತರು ಮಾತ್ರ ಹಾಜರಿದ್ದು ನವ ಜೋಡಿಗೆ ಆಶೀರ್ವಾದ ಮಾಡಿದ್ದಾರೆ. ಕೊರೊನಾ ವೈರಲ್ ಹಾವಳಿಯ ಪರಿಣಾಮ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಮದುವೆ ಸಮಾರಂಭದಲ್ಲಿ ಹಾಜರಿದ್ದರು. ಇನ್ನೂ ಸ್ನೇಹಿತರು, ಚಿತ್ರರಂಗದ ಗಣ್ಯರು ನವ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕವೇ ಶುಭಾಶಯ ತಿಳಿಸುತ್ತಿದ್ದಾರೆ.

  ಜೂನ್ 10ರಂದು ನಿಶ್ಚಿತಾರ್ಥ ನೆರವೇರಿತ್ತು

  ಜೂನ್ 10ರಂದು ನಿಶ್ಚಿತಾರ್ಥ ನೆರವೇರಿತ್ತು

  ಸುಜೀತ್ ಮತ್ತು ಪ್ರವಲ್ಲಿಕಾ ಇಬ್ಬರು ಜೂನ್ 10ರಂದು ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿದ್ದರು. ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿಕೊಂಡಿದ್ದರು. ಸರಳವಾಗಿ ನಿಶ್ಚಿತಾರ್ಥ ಮಾಡಿದ್ದರು. ಇದೀಗ ಮದುವೆ ಸಮಾರಂಭ ಕೂಡ ಸರಳವಾಗಿ ನೆರವೇರಿದೆ.

  ಮೆಗಾಸ್ಟಾರ್ ಜೊತೆ ಸಿನಿಮಾ

  ಮೆಗಾಸ್ಟಾರ್ ಜೊತೆ ಸಿನಿಮಾ

  2014ರಲ್ಲಿ 'ರನ್ ರಾಜಾ ರನ್' ಚಿತ್ರದ ಮೂಲಕ ಸುಜೀತ್ ನಿರ್ದೇಶಕರಾಗಿ ಗುರುತಿಸಿಕೊಂಡರು. ನಂತರ 2019ರಲ್ಲಿ ಪ್ರಭಾಸ್ ನಟನೆಯ ತ್ರಿಭಾಷಾ ಚಿತ್ರ 'ಸಾಹೋ' ಸಿನಿಮಾಗೆ ಆಕ್ಷನ್ ಕಟ್ ಹೇಳುವ ಮೂಲಕ ಪ್ರಸಿದ್ಧಪಡೆದಿದ್ದಾರೆ. ಸದ್ಯ ಸುಜೀತ್ ಮಲಯಾಳಂನ ಹಿಟ್ ಚಿತ್ರ 'ಲೂಸಿಫರ್'ನ ತೆಲುಗು ರೀಮೇಕ್ ಗೆ ಸಿದ್ಧತೆ ನಡೆಸುತ್ತಿದ್ದು, ಚಿರಂಜೀವಿ ನಾಯಕರಾಗಿ ನಟಿಸಲಿದ್ದಾರೆ.

  Read more about: prabhas marriage
  English summary
  Saaho fame Director Sujeeth Reddy tie the knot with his sweetheart Pravallika.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X